Wednesday, 12th December 2018  

Vijayavani

ಟ್ರಿನಿಟಿ ಸರ್ಕಲ್​​​ ಬಳಿ ಬಿರುಕು ಬಿಟ್ಟ ಪಿಲ್ಲರ್ - 10 ಕಿಮೀ ವೇಗದಲ್ಲಿ ಮೆಟ್ರೋ ಓಡಾಟ - ಸಮಸ್ಯೆ ಬಗೆಹರಿಸೋದಾಗಿ ಹೇಳಿದ ಸಿಎಂ        ಸದನದ ಹೊರಗೆ NPS ಆದೇಶ ಹಿನ್ನೆಲೆ - ಸಿಎಂ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ಬಿಜೆಪಿ ಸಿದ್ದತೆ -  ಸಂಕಷ್ಟ ತಂದ ಪೆನ್ಶನ್‌ ಸ್ಕೀಂ        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಕಸರತ್ತು -  ರಾಜ್ಯಪಾಲರನ್ನು ಭೇಟಿಯಾಗಿ ಕಾಂಗ್ರೆಸ್ ಹಕ್ಕು ಮಂಡನೆ        ನಾಳೆ ಕೆಸಿಆರ್ ಪಟ್ಟಾಭಿಷೇಕ- ಪ್ರಮಾಣವಚನಕ್ಕೆ ಚಂದ್ರಶೇಖರ್ ರಾವ್ ಸಿದ್ಧತೆ - ರಾಜ್ಯಪಾಲರನ್ನು ಭೇಟಿಯಾದ ನಾಯಕ        ಶ್ರೀರಂಗಪಟ್ಟಣದಲ್ಲಿ ಶೂಟಿಂಗ್ ವೇಳೆ ಅವಾಂತರ - ಭರತ ಬಾಹುಬಲಿ ತಂಡದ ಮೇಲೆ ಹೆಜ್ಜೇನು ದಾಳಿ -ಏಳು ಮಂದಿ ಆಸ್ಪತ್ರೆಗೆ       
Breaking News

ಜಿಎಸ್​ಟಿ ರಿಟರ್ನ್ಸ್​ಗೆ ಮತ್ತಷ್ಟು ಕಾಲಾವಕಾಶ

Tuesday, 05.09.2017, 3:00 AM       No Comments

ನವದೆಹಲಿ: ಸರಕು ಹಾಗೂ ಸೇವಾ ತೆರಿಗೆ (ಜಿಎಸ್​ಟಿ) ರಿಟರ್ನ್ಸ್ ಸಲ್ಲಿಕೆಯ ಗಡುವನ್ನು ವಿಸ್ತರಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ. ಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ ಜುಲೈ ಹಾಗೂ ಆಗಸ್ಟ್ ತಿಂಗಳಿನ ಖರೀದಿ ಹಾಗೂ ಮಾರಾಟದ ವಿವರ, ಆದಾಯ, ತೆರಿಗೆ ಸಲ್ಲಿಕೆ ಮತ್ತಿತರ ವಿವರಗಳನ್ನು ಸಲ್ಲಿಸಲು ಹೆಚ್ಚು ವರಿ ಕಾಲಾವಕಾಶ ದೊರೆತಿದ್ದು, ಇದರಿಂದ ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ.

ಜುಲೈ ತಿಂಗಳ ಮಾರಾಟ ರಿಟರ್ನ್ಸ್ (ಜಿಎಸ್​ಟಿಆರ್-1) ಸಲ್ಲಿಕೆಗೆ ನೀಡಲಾಗಿದ್ದ ಗಡುವು ಸೆ. 5ನ್ನು ಸೆ. 10ರ ವರೆಗೆ ವಿಸ್ತರಿಸಲಾಗಿದೆ. ಖರೀದಿ ರಿಟರ್ನ್ಸ್ (ಜಿಎಸ್​ಟಿಆರ್-2) ಸೆ. 10ರ ಬದಲು ಸೆ. 25ರ ವರೆಗೆ ಸಲ್ಲಿಸಬಹುದು. ಜಿಎಸ್​ಟಿಆರ್-3 ಗಡು ವನ್ನು ಸೆ. 15ರ ಬದಲು ಸೆ. 30ಕ್ಕೆ ವಿಸ್ತರಿಸಲಾಗಿದೆ. ಜುಲೈನಲ್ಲಿ 92,283 ಕೋಟಿ ರೂ. ಜಿಎಸ್​ಟಿ ಸಂಗ್ರಹವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಇದು ಒಟ್ಟು ತೆರಿಗೆ ಸಂಗ್ರಹದ ಶೇ. 64.42 ರಷ್ಟಾಗಿದೆ.

Leave a Reply

Your email address will not be published. Required fields are marked *

Back To Top