Wednesday, 12th December 2018  

Vijayavani

ಅಂತೂ ಹೊರಬಿತ್ತು ಮಧ್ಯಪ್ರದೇಶದ ಫಲಿತಾಂಶ: ಅತಂತ್ರ ರಾಜ್ಯದಲ್ಲಿ ಯಾರಿಗೆ ಅಧಿಕಾರ?        ಮಧ್ಯಪ್ರದೇಶದಲ್ಲಿ ಸರ್ಕಾರ ರಚನೆ ಮಾಡಲು ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳಿಂದಲೂ ಹಕ್ಕು ಮಂಡನೆ        ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆಯ ಕುರಿತು ಚರ್ಚಿಸಲು ರಾಜ್ಯಸಭೆಯಲ್ಲಿ ಸಮಯ ಕೋರಿದ ಟಿಎಂಸಿ        ರಾಹುಲ್​ ಗಾಂಧಿಯನ್ನು ದೇಶ ಒಪ್ಪಿಕೊಳ್ಳುತ್ತಿದೆ ಎಂದ ಎಂಎನ್​ಎಸ್​ ವರಿಷ್ಠ ರಾಜ್​ ಠಾಕ್ರೆ        ತೆಲಂಗಾಣದ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಕೆ. ಚಂದ್ರಶೇಖರ್​ ರಾವ್​       
Breaking News

ಜಿಎಸ್​ಟಿ ತೆರಿಗೆ ಬಗೆ

Thursday, 22.06.2017, 3:00 AM       No Comments

| ಸಿಎ ನಾರಾಯಣ ಭಟ್ ಲೆಕ್ಕಪರಿಶೋಧಕರು

ಲವಾರು ರಾಜ್ಯ ಹಾಗೂ ಕೇಂದ್ರ ತೆರಿಗೆಗಳನ್ನು ರದ್ದುಗೊಳಿಸಿ ‘ರಾಷ್ಟ್ರಕ್ಕೊಂದು ತೆರಿಗೆ’ ಎಂಬ ಹೆಗ್ಗಳಿಕೆಯೊಂದಿಗೆ ಜಿಎಸ್​ಟಿ(ಸರಕು ಮತ್ತು ಸೇವಾ ತೆರಿಗೆ) ಎಂಟ್ರಿ ಕೊಡುತ್ತಿದೆ. ಒಂದೇ ತೆರಿಗೆ ಎಂದಾದರೆ 29 ರಾಜ್ಯಗಳು ಹಾಗೂ 7 ಕೇಂದ್ರಾಡಳಿತ ಪ್ರದೇಶಗಳು ತೆರಿಗೆ ಹಂಚಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಹಲವರದ್ದು. ಪ್ರತಿ ಮಾರಾಟ ಬಿಲ್​ನಲ್ಲಿ ಸಿಜಿಎಸ್​ಟಿ (ಕೇಂದ್ರ) ಎಸ್​ಜಿಎಸ್​ಟಿ (ರಾಜ್ಯ) ಎಂಬ ಎರಡು ವಿಧದ ತೆರಿಗೆ ಹಾಕುತ್ತಾರೆ. ಇದರಲ್ಲಿ ಸಿಜಿಎಸ್​ಟಿ ಕೇಂದ್ರ ಸರ್ಕಾರದ ಖಜಾನೆಗೂ, ಎಸ್​ಜಿಎಸ್​ಟಿ ರಾಜ್ಯ ಸರ್ಕಾರದ ಬೊಕ್ಕಸಕ್ಕೂ ಸೇರುತ್ತದೆ.

ಉದಾ: ಮಳೆಛತ್ರಿಗೆ- 12% ಜಿಎಸ್​ಟಿ ಎಂದು ನಿಗದಿಯಾಗಿದೆ. ಕರ್ನಾಟಕಕ್ಕೆ 6% +ಕೇಂದ್ರಕ್ಕೆ 6% ಒಟ್ಟು 12%, ಹಿಂದಿನ ವಾರ ಹೇಳಿದ ಕಾಂಪೊಸಿಷನ್ ತೆರಿಗೆ- ಹೋಟೆಲ್- ಕರ್ನಾಟಕಕ್ಕೆ 2.5%, + ಕೇಂದ್ರಕ್ಕೆ 2.5% ಒಟ್ಟು 5%, ಕಾಂಪೊಸಿಷನ್ ತೆರಿಗೆ ಕಿರಾಣಿ ಅಂಗಡಿಯವರಿಗೆ- 0.5% ಕರ್ನಾಟಕಕ್ಕೆ + 0.5% ಕೇಂದ್ರದ ಖಜಾನೆಗೆ ಒಟ್ಟು 1%. ಇದು ಕರ್ನಾಟಕ ರಾಜ್ಯದ ಒಳಗಡೆ ಮಾರಾಟ ಮಾಡಿದಾಗ ಕರಭಾರ ಮಾಡುವ ಕ್ರಮ.

ಇನ್ನು ಬೆಂಗಳೂರಿನ ವ್ಯಾಪಾರಿಯೊಬ್ಬ, ಮುಂಬೈಗೆ ಮಾರಾಟ ಮಾಡಿದರೆ ಆತ, ಈ ಮೇಲಿನ ಎರಡನ್ನು ಬಿಟ್ಟು ಐಜಿಎಸ್​ಟಿ ಎಂದು ತೆರಿಗೆ ವಸೂಲಿ ಮಾಡಬೇಕಾಗುತ್ತದೆ. ಐಜಿಎಸ್​ಟಿ ಎಂದರೆ ಏಕೀಕೃತ ತೆರಿಗೆ. ಇದು ಕೇಂದ್ರ ಸರ್ಕಾರದ ಖಜಾನೆಗೆ ತಾತ್ಪೂರ್ತಿಕವಾಗಿ ಹೋಗುತ್ತದೆ. ಆದರೆ, ಖರೀದಿಸಿದ ವ್ಯಕ್ತಿ, ಮುಂದೆ ಮಾರಾಟಮಾಡುವಾಗ ತಾನು ವಸೂಲಿ ಮಾಡಿದ ಸಿಜಿಎಸ್​ಟಿ (ಕೇಂದ್ರ) ಎಸ್​ಜಿಎಸ್​ಟಿ (ರಾಜ್ಯ) ತೆರಿಗೆಗೆ ಈ ಐಜಿಎಸ್​ಟಿ ವಜಾ ಮಾಡಿಕೊಂಡಾಗ ಈ ಐಜಿಎಸ್​ಟಿ ಖಾಲಿ ಆಗಿರುತ್ತದೆ. ಅಂದರೆ ಐಜಿಎಸ್​ಟಿ ರಾಜ್ಯದಿಂದ ರಾಜ್ಯಕ್ಕೆ ಕೇವಲ ಸಂವಹನ ಮಾಧ್ಯಮವಾಗಿರುತ್ತದೆ. ಕೊನೆಯಲ್ಲಿ, ಕೇಂದ್ರ ಸರ್ಕಾರದ ಈ ಖಾತೆಯಲ್ಲಿ ವಜಾ ಆಗದೆ ಉಳಿದ ಪಕ್ಷದಲ್ಲಿ ಅದನ್ನು ಕೇಂದ್ರ ಸರ್ಕಾರ ತನಗೂ ರಾಜ್ಯ ಸರ್ಕಾರಗಳಿಗೂ ಸಮನಾಗಿ ಹಂಚುತ್ತದೆ. ಇನ್ನು, ಆಮದು ಮಾಡಿಕೊಳ್ಳುವಾಗ, ಆಮದು ಶುಲ್ಕದ ಹೊರತಾಗಿ, ಐಜಿಎಸ್​ಟಿ ತೆರಬೇಕಿರುತ್ತದೆ. ಅದು ಮುಂದೆ, ಆ ಸರಕು ಮಾರಾಟವಾದಾಗ, ರಾಜ್ಯ ಮತ್ತು ಕೇಂದ್ರ ಜಿಎಸ್​ಟಿಗೆ ವಜಾ ಆಗುತ್ತದೆ.

ಅಂದರೆ, ಪ್ರತಿ ಮಾರಾಟದಲ್ಲಿಯೂ ನಾವು ಕೊಡಬೇಕಿರುವ ಜಿಎಸ್​ಟಿ ತೆರಿಗೆ ಸಮನಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಹಂಚಿ ಹೋಗುತ್ತದೆ. ಕೇಂದ್ರ ಸರ್ಕಾರ ಸಿಜಿಎಸ್​ಟಿ ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದಂತೆ, ಎಲ್ಲ ರಾಜ್ಯಗಳು ತಂತಮ್ಮ ವಿಧಾನಸಭೆಗಳಲ್ಲಿ ಎಸ್​ಜಿಎಸ್​ಟಿ ಮಸೂದೆಗೆ ಅಂಗೀಕಾರ ಪಡೆದುಕೊಳ್ಳಬೇಕಿರುತ್ತದೆ. ಕರ್ನಾಟಕದಲ್ಲೂ ಕಳೆದವಾರ ಈ ಮಸೂದೆ ಅಂಗೀಕೃತವಾಗಿದೆ. ಹೀಗೆ ಎರಡೂ ಕಾನೂನುಗಳು ಜಾರಿಯಾಗಲು ಸಜ್ಜಾಗಿವೆ.

Leave a Reply

Your email address will not be published. Required fields are marked *

Back To Top