More

  ಜಿಎಂಐಟಿ ಕಾಲೇಜಿನಲ್ಲಿ ಬೃಹತ್ ಗಾತ್ರದ ಧ್ವಜಾರೋಹಣ 

  ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯ ಆವರಣದಲ್ಲಿ ಸ್ವಾತಂತ್ರೃ ದಿನಾಚರಣೆ ಸಂದರ್ಭದಲ್ಲಿ, ಮಧ್ಯ ಕರ್ನಾಟಕದಲ್ಲೇ ಅತಿ ದೊಡ್ಡ ರಾಷ್ಟ್ರ ಧ್ವಜವನ್ನು ಅನಾವರಣಗೊಳಿಸಲಾಯಿತು.
  50 ಮೀ. ಉದ್ದದ ಧ್ವಜ ಕಂಬದಲ್ಲಿ 1200 ಚದರಡಿ ಅಳತೆಯ ರಾಷ್ಟ್ರ ಧ್ವಜವನ್ನು ಆರೋಹಣ ಮಾಡಲಾಯಿತು. ಯಾವುದೇ ಚ್ಯುತಿ ಬಾರದಂತೆ ಎಚ್ಚರವಹಿಸಿ ಧ್ವಜವನ್ನು ಸ್ಥಾಪಿಸಲಾಗಿದೆ ಎಂದು ಆಯೋಜಕರು ತಿಳಿಸಿದರು.
  ಶ್ರೀಶೈಲ ಎಜುಕೇಶನಲ್ ಟ್ರಸ್ಟ್‌ನ ಟ್ರಸ್ಟಿ ಜಿ.ಎಸ್.ಅನಿತ್‌ಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಯುವಕರು ದೇಶಾಭಿಮಾನ ಬೆಳೆಸಿಕೊಳ್ಳುವುದರ ಮೂಲಕ ದೇಶದ ಪ್ರಗತಿ ಮತ್ತು ಬೆಳವಣಿಗೆಗೆ ಸಹಕಾರಿಯಾಗಬೇಕು. ಪ್ರಧಾನಿ ನರೇಂದ್ರ ಮೋದಿ ಕೈ ಬಲಪಡಿಸಬೇಕೆಂದು ತಿಳಿಸಿದರು.
  ಆಡಳಿತಾಧಿಕಾರಿ ವೈ.ಯು. ಸುಭಾಷ್‌ಚಂದ್ರ, ಡಾ. ಎಚ್.ಡಿ. ಮಹೇಶಪ್ಪ, ಪ್ರಭಾರ ಪ್ರಾಚಾರ್ಯ ಡಾ. ಬಿ.ಎಸ್.ಸುನಿಲ್‌ಕುಮಾರ್, ಜಿಎಂ ಪಾಲಿಟೆಕ್ನಿಕ್ ಪ್ರಾಚಾರ್ಯ ಡಾ.ಬಿ.ಆರ್.ಶ್ರೀಧರ್, ಶ್ವೇತಾ ಮರಿಗೌಡರ್, ಡಾ ಗಿರೀಶ್ ಬೋಳಕಟ್ಟಿ, ಡಾ.ಎಚ್.ಎಸ್. ಓಂಕಾರಪ್ಪ, ವೀರಣ್ಣ ಇತರರಿದ್ದರು.
  —-

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts