ಜಿಆರ್ ನಗರದಲ್ಲಿ ಜಾರುವ ಆತಂಕ

ಕಲಬುರಗಿ: ಮಹಾನಗರದ ವಾರ್ಡ 22ರ ಜೆ.ಆರ್. ನಗರ ಬಡಾವಣೆಯಲ್ಲಿ ಸಿಸಿ ಅಥವಾ ಡಾಂಬರ್ ರಸ್ತೆಗಳಿಲ್ಲದೆ ಸ್ವಲ್ಪ ಮಳೆಯಾದರೂ ಕೆಸರು ಕೊಚ್ಚೆಯಾಗಿ ಮಾರ್ಪಡುತ್ತವೆ. ವಾಹನ ಸವಾರರೇಕೆ, ಪಾದಾಚಾರಿಗಳು ಸಹ ಓಡಾಡಲು ಕಷ್ಟಕರ ಎನಿಸಿದೆ. ಇನ್ನು ಸ್ವಲ್ಪ ಎಚ್ಚರ ತಪ್ಪಿ ಜಾರಿ ಬಿದ್ದರೆ ಮೈಕೈ ರಾಡಿ ಮಾಡಿಕೊಳ್ಳುವುದು ಗ್ಯಾರಂಟಿ ಎನ್ನುವಂತಿದೆ.
15-20 ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಈ ಬಡಾವಣೆ ರಸ್ತೆ ಮಾತ್ರವಲ್ಲ, ಒಳಚರಂಡಿಯೂ ಕಾಣದೆ ನಿವಾಸಿಗಳು ಇನ್ನಿಲ್ಲದ ಸಮಸ್ಯೆ ಎದುರಿಸುತ್ತಿದ್ದಾರೆ. ವಿಶೇಷವಾಗಿ ಮಳೆಗಾಲದಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಆಡಳಿತ ಮತ್ತು ಸಂಬಂಧಿತ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇದರಿಂದ ಸಹಜವೇ ನಿವಾಸಿಗಳಲ್ಲಿ ಬೇಸರದ ಜತೆಗೆ ಆಕ್ರೋಶ ಮನೆ ಮಾಡಿದೆ.
ಭೀಮಾ ಮತ್ತು ಕೃಷ್ಣಾ ಸೇರಿ ನದಿ ನೀರಿನ ಪ್ರವಾಹದಿಂದಾಗಿ ಅನೇಕ ಗ್ರಾಮಗಳು ಜಲಾವೃತಗೊಂಡು ಜನತೆ ತೀವ್ರ ಸಂಕಷ್ಟದಲ್ಲಿರುವುದನ್ನು ಕಾಣುತ್ತಿದ್ದೇವೆ. ಆದರೆ ಇಂಥ ಯಾವುದೇ ಪ್ರವಾಹ ಇಲ್ಲದೆ ಕೇವಲ ಮಳೆ ನೀರಿನಿಂದ ಬಡಾವಣೆ ಕೊಚ್ಚೆಯಾಗಿ ಮಾರ್ಪಡುವ ಮೂಲಕ ನಾನಾ ರೋಗಗಳಿಗೆ ಆಹ್ವಾನ ನೀಡುತ್ತಿರುವುದಕ್ಕೆ ಆಡಳಿತದ ನಿರ್ಲಕ್ಷೃ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷೃ ಧೋರಣೆಯೇ ಕಾರಣ ಎಂದು ನಿವಾಸಿಗಳು ಬೇಸರ ತೋಡಿಕೊಳ್ಳುತ್ತಾರೆ.
ಮಳೆ ಸುರಿದ ಬಳಿಕ ಯಾವುದು ರಸ್ತೆ ಎಂಬುದೇ ಗೊತ್ತಾಗದಂತೆ ಕೆಸರು ಆವರಿಸಿಬಿಡುತ್ತದೆ. ದಶಕಗಳಿಂದ ಇಂಥ ಸಮಸ್ಯೆ ಮಧ್ಯೆ ದಿನದೂಡುತ್ತಿದ್ದು, ಸುಗಮ ಸಂಚಾರ ಮತ್ತು ದುನರ್ಾತ ತಡೆಗೆ ಬಡಾವಣೆಯ ಎಲ್ಲ ಕಡೆ ಸಿಸಿ ರಸ್ತೆ ಮತ್ತು ಒಳಚರಂಡಿ ನಿಮರ್ಿಸಿ ಅನುವು ಮಾಡಿಕೊಡಬೇಕು ಎಂಬುದು ನಾಗರಿಕರ ಹಕ್ಕೊತ್ತಾಯವಾಗಿದೆ. 


ಜೆ.ಆರ್.ಬಡಾವಣೆಯಲ್ಲಿ ರಸ್ತೆ ಮೇಲೆ ಕೊಳಚೆ ನೀರು ಹರಿದು ಕೆಸರು ಗದ್ದೆಯಾಗಿ ಮಾರ್ಪಟ್ಟಿದೆ. ಇಂಥದರಲ್ಲೇ ವಿದ್ಯಾರ್ಥಿಗಳು, ಸಾರ್ವಜನಿಕರು, ವೃದ್ಧರು ಸಂಚರಿಸಬೇಕಿದೆ. ಇನ್ನು ವಾಹನ ಸವಾರರು ಯಾವಾಗ ಸ್ಕಿಡ್ ಆಗಿ ಅಪಘಾತ ಮಾಡಿಕೊಳ್ಳುತ್ತಾರೋ ಎಂಬ ಭಯ ಇದೆ. ಕೂಡಲೇ ಗುಣಮಟ್ಟದ ರಸ್ತೆ ನಿಮರ್ಿಸಬೇಕು.
| ಬಸವರಾಜ ಬುದ್ಧಿವಂತ ಹಿರಿಯ ನಾಗರಿಕ


ಕಳೆದ ವರ್ಷ ಸೆ.19ರಂದು ಬಡಾವಣೆ ನಾಗರಿಕರು ಕ್ಷೇತ್ರದ ಶಾಸಕರು, ಎಚ್ಕೆಆರ್ಡಿಬಿ ಕಾರ್ಯದರ್ಶಿಗಳನ್ನು ಭೇಟಿಯಾಗಿ ಬಡಾವಣೆ ದುಸ್ಥಿತಿ ಬಗ್ಗೆ ಗಮನ ಸೆಳೆದು ಸ್ಪಂದಿಸಲು ಮನವಿ ಮಾಡಿದ್ದೇವು. ಪ್ರಾದೇಶಿಕ ಆಯುಕ್ತರು 2018-19ರ ಮೈಕ್ರೋ ಯೋಜನೆಯಡಿ ಅನುದಾನ ಮಂಜೂರು ಮಾಡಿರುವುದಾಗಿ ಹೇಳಿದಾಗ ಖುಷಿಯಾಗಿತ್ತು. ಆದರೆ ಅವರು ಹೇಳಿ ವರ್ಷವಾದರೂ ರಸ್ತೆ ನಿಮರ್ಾಣಗೊಂಡಿಲ್ಲ, ಸಮಸ್ಯೆ ನೀಗಿಲ್ಲ.
| ವೀರಣ್ಣ ನಿಂಬರ್ಗಾ  ಬಡಾವಣೆ ನಿವಾಸಿ


ಅನುದಾನ ಬಂದಿದ್ದರೂ ಬೇರೆ ವಾರ್ಡಗಳಿಗೆ ನೀಡುವ ಮೂಲಕ ಮಹಾನಗರ ಪಾಲಿಕೆ ನಮ್ಮ ಬಡಾವಣೆಯನ್ನು ನಿರ್ಲಕ್ಷಿಸುತ್ತಿದೆ. ನಮ್ಮ ಜೀವಿತಾವಧಿಯಲ್ಲಿ ಕೆಲಸದ ನಿಮಿತ್ತ ಸಾಕಷ್ಟು ಅಲೆದಾಡಿ ಕಷ್ಟಪಟ್ಟಿದ್ದೇವೆ. ವಿಶ್ರಾಂತ ಜೀವನವನ್ನು ಆರ್.ಜೆ. ನಗರದಲ್ಲಿ ಕಳೆಯುತ್ತಿದ್ದೇವೆ. ಆದರೆ ಪಾಲಿಕೆ ನಮ್ಮ ಬದುಕು ನರಕವನ್ನಾಗಿಸಿದೆ.
| ಶರಣಬಸಪ್ಪ ಮುಡಬಿ ಬಡಾವಣೆ ನಿವಾಸಿಆರ್.ಜೆ.ನಗರ ಹಳೆಯ ಬಡವಾಣೆಯಾಗಿದ್ದು, ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದ್ದೇವೆ. ಮಹಾನಗರ ಪಾಲಿಕೆ ವಿಶೇಷ ಅನುದಾನದಿಂದ ಬಡಾವಣೆಯ ಸವಾಂಗೀಣ ಪ್ರಗತಿ ಮಾಡಲು ಸೂಚಿಸುತ್ತೇನೆ.
| ಸುಬೋಧ್ ಯಾದವ್, ಎಚ್ಕೆಆರ್ಡಿಬಿ ಕಾರ್ಯದರ್ಶಿ

Leave a Reply

Your email address will not be published. Required fields are marked *