More

  ಜಾನಪದ ಮಣ್ಣಿನ ಮಕ್ಕಳ ಸಾಹಿತ್ಯ

  ರಾಯಬಾಗ, ಬೆಳಗಾವಿ: ಜಾನಪದ ಎಂಬುದು ವಿದ್ವಾಂಸರ ಲೇಖನಿಯಿಂದ ಬಂದ ಸಾಹಿತ್ಯವಲ್ಲ. ಅದು ಮಣ್ಣಿನ ಮಕ್ಕಳ ನಡುವೆ ಜನ್ಮತಾಳಿದ ಸಾಹಿತ್ಯ ಎಂದು ಸಾಹಿತಿ ಟಿ.ಎಸ್.ವಂಟಗೂಡಿ ಹೇಳಿದರು.
  ತಾಲೂಕಿನ ನಿಪನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಅಖಿಲ ಕರ್ನಾಟಕ ಸಾಂಸ್ಕೃತಿಕ ಪರಿಷತ್ ತಾಲೂಕು ಘಟಕದಿಂದ ಶುಕ್ರವಾರ ಹಮ್ಮಿಕೊಂಡಿದ್ದ ‘ಜಾನಪದ ಗರತಿ ಸಾಹಿತ್ಯದ ಒಡತಿ’ ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಸಾಹಿತ್ಯ ಸರಳ, ಸುಂದರ ಮತ್ತು ಶ್ರೀಮಂತವಾಗಿದೆ ಎಂದರು.

  ಮುಖ್ಯ ಶಿಕ್ಷಕ ಜಿ.ಬಿ.ಸಂಗಟೆ ಅಧ್ಯಕ್ಷತೆ ವಹಿಸಿದ್ದರು. ವೈ.ಬಿ.ಕರಗಣ್ಣಿ, ಎಸ್.ಎಸ್.ಜಲಪೂರ, ಎಸ್.ಆರ್.ಹೊಸಪೇಟೆ, ಪಿ.ಆರ್.ಬೋನಿ, ಜ್ಯೋತಿ ತಳವಾರ, ಗುಂಡುರಾವ ಬಡಿಗೇರ, ಎಂ.ಜಿ.ಜೋನಿ, ಜಿ.ಟಿ.ಬಡಿಗೇರ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts