ಕಳಸ: ಹೊರನಾಡು ಅನ್ನಪೂರ್ಣೇಶ್ವರಿ ದೇವರ ಜಾತ್ರಾ ಮಹೋತ್ಸವಕ್ಕೆ ಶುಭಕೋರಿ ಹಾಕಿದ ಬ್ಯಾನರ್‌ಗೆ ಸಗಣಿ ಮತ್ತು ಕೆಸರು ಎರಚಲಾಗಿದೆ. ಇಂಥ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಡಾ. ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿ(ಪ್ರವೀಣ್ ಶೆಟ್ಟಿ)ಬಣ ಕಳಸ ಪೊಲೀಸರಿಗೆ ದೂರು ನೀಡಿದ್ದಾರೆ.
ಕಳಸ ಸಮುದಾಯ ಕೇಂದ್ರದ ಬಳಿ ಕಳಸ ಕಲಶೇಶ್ವರ ದೇವರ ಜಾತ್ರಾ ಮಹೋತ್ಸವ ಹೊರನಾಡು ಅನ್ನಪೂರ್ಣೇಶ್ವರಿ ದೇವರ ಜಾತ್ರಾ ಮಹೋತ್ಸವಕ್ಕೆ ಶುಭ ಕೋರುವ ಬ್ಯಾನರನ್ನು ಡಾ. ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ)ಬಣದಿಂದ ಹಾಕಲಾಗಿತ್ತು. ಬ್ಯಾನರ್‌ನಲ್ಲಿ ಇರುವ ಕಲಶೇಶ್ವರ ದೇವರ ಚಿತ್ರ, ಬ್ರಹ್ಮರಥದ ಚಿತ್ರ, ಅನ್ನಪೂರ್ಣೇಶ್ವರಿ ದೇವರ ಚಿತ್ರ ಹಾಗೂ ಸಂಘಟನೆಯ ಮುಖಂಡರ ಭಾವಚಿತ್ರಗಳಿಗೆ ಸಗಣಿ ಮತ್ತು ಕೆಸರು ಎರಚಿ ಅವಮಾನ ಮಾಡಲಾಗಿದೆ. ಈ ರೀತಿಯ ಕೃತ್ಯ ಎಸಗಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಡಾ. ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕರವೇ ಅಧ್ಯಕ್ಷ ಚೌಡನಾಯ್ಕ, ಶರೀಪ್ ಇದ್ದರು.