ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಡಿತನ ಬಿಟ್ಟು ಜಾತಿಗಣತಿ ವರದಿ ಸ್ವೀಕಾರ ಮಾಡುವ ಮೂಲಕ ವರದಿಯನ್ನು ಜನರ ಮುಂದೆ ಇಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಆಗ್ರಹಿಸಿದರು.
ಜಾತಿಗಣತಿ ವಿಚಾರದಲ್ಲಿ ಸರ್ಕಾರ ಬೇಕಂತಲೇ ಹಿಂದೇಟು ಹಾಕುತ್ತಿದೆ. ನಿಮ್ಮ ಬುಡಕ್ಕೆ ಬೆಂಕಿ ಬಿದ್ದಾಗ ಮಾತ್ರ ಅಹಿಂದ, ಜಾತಿಗಣತಿ ವರದಿಯನ್ನು ಮುಂದೆ ತರುತ್ತೀರಿ. ನಿಮ್ಮ ರಕ್ಷಣೆಗೆ ಇದನ್ನು ಬಳಸಿಕೊಳ್ಳುತ್ತೀರಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಕರ್ನಾಟಕದ ಮಟ್ಟಿಗೆ ಸಿದ್ದರಾಮಯ್ಯ ಅವರೇ ಹೈಕಮಾಂಡ್. ಹೀಗಾಗಿ ಹೈಕಮಾಂಡ್ ಹೆಸರು ಹೇಳಿ ನುಣುಚಿಕೊಳ್ಳುವುದು ಬೇಡ. ಜಾತಿಗಣತಿ ವಿಚಾರವಾಗಿ ಸಿದ್ದರಾಮಯ್ಯನದ್ದು ಬರೀ ಉತ್ತರನ ಪೌರುಷ ಅಷ್ಟೇ. ತಮ್ಮ ರಕ್ಷಣೆಗಾಗಿ ಅಹಿಂದ ಕಾರ್ಡ್, ಜಾತಿ ಗಣತಿ ಕಾರ್ಡ್ ಇಟ್ಟುಕೊಂಡಿದ್ದಾರೆ. ಜಾತಿಗಣತಿ ವರದಿಯನ್ನು ಸಿದ್ದರಾಮಯ್ಯ ಓದಿದ್ದಾರೋ, ಇಲ್ವೋ ಗೊತ್ತಿಲ್ಲ. ಬರೀ ಬುರುಡೆ ಬಿಟ್ಟುಕೊಂಡು ಓಡಾಡುತ್ತಿದ್ದಾರೆ. ನೀನು ಗಂಡಸಲ್ವಾ? ಜಾತಿ ಗಣತಿ ಜಾರಿ ಮಾಡು ಎಂದು ಕಟುವಾಗಿ ಟೀಕಿಸಿದರು.
ಜಾತಿಗಣತಿ ವರದಿ ಸ್ವೀಕರಿಸಿ ಜನರ ಮುಂದಿಡಿ

You Might Also Like
ಐಸ್ಕ್ಯೂಬ್ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy
Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…
ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…
ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon
watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…