ಜಾಗ್ವಾರ್ ಜಾಕ್​ಪಾಟ್

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ಕುಮಾರ್ ನಟಿಸಿರುವ ‘ಜಾಗ್ವಾರ್’ ಚಿತ್ರ ಜಾಕ್ಪಾಟ್ ಹೊಡೆದಿದೆ. ರಾಜ್ಯಾದ್ಯಂತ 50 ದಿನ ಪೂರೈಸಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅ.6ರಂದು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ವಿಶ್ವದಾದ್ಯಂತ 900ಕ್ಕೂ ಅಧಿಕ ಥಿಯೇಟರ್ಗಳಲ್ಲಿ ‘ಜಾಗ್ವಾರ್’ ಬಿಡುಗಡೆಯಾಗಿತ್ತು. ಇದೀಗ ನ.25ಕ್ಕೆ ಯಶಸ್ವಿಯಾಗಿ 50 ದಿನ ಕಂಪ್ಲೀಟ್ ಮಾಡಿದೆ. ‘ಬಾಹುಬಲಿ’ ಕಥೆಯೊದಗಿಸಿದ್ದ ಕೆ.ವಿ. ವಿಜಯೇಂದ್ರ ಪ್ರಸಾದ್ ‘ಜಾಗ್ವಾರ್’ಗೆ ಕಥೆ ಬರೆದಿದ್ದರು. ನಿರ್ದೇಶನದ ಹೊಣೆ ಮಹಾದೇವ್ ಅವರದ್ದಾಗಿತ್ತು. ಭಾರಿ ಬಜೆಟ್ನಲ್ಲಿ ನಿರ್ವಣವಾಗಿದ್ದ ‘ಜಾಗ್ವಾರ್’ ಚಿತ್ರ ತನ್ನ ಅದ್ದೂರಿ ಮೇಕಿಂಗ್ನಿಂದ ಗಮನ ಸೆಳೆದಿತ್ತು. ಇದೀಗ ಕಲೆಕ್ಷನ್ ವಿಚಾರದಲ್ಲೂ ಚಿತ್ರ ಸದ್ದು ಮಾಡಿದೆ. ಬಾಕ್ಸ್ ಆಫೀಸ್ನಲ್ಲಿ ಇದುವರೆಗೂ ಸುಮಾರು 35 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗುತ್ತಿದೆ.

ನಿಖಿಲ್ಗೆ ನಾಯಕಿಯಾಗಿ ದೀಪ್ತಿ ಸತಿ ಕಾಣಿಸಿಕೊಂಡಿದ್ದರು. ಜತೆಗೆ ರಮ್ಯಾಕೃಷ್ಣ, ಜಗಪತಿ ಬಾಬು, ಸಾಧು ಕೋಕಿಲ, ಆದಿತ್ಯ ಮೆನನ್, ಸಂಪತ್, ಅವಿನಾಶ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಐಟಂ ಸಾಂಗ್ನಲ್ಲಿ ತಮನ್ನಾ ಕಾಣಿಸಿಕೊಂಡಿದ್ದು ವಿಶೇಷ. ಸದ್ಯ ತಮ್ಮ 2ನೇ ಚಿತ್ರದತ್ತ ನಿಖಿಲ್ ಗಮನ ಹರಿಸಿದ್ದಾರೆ. ಜನವರಿ 25ರಂದು ಆ ಚಿತ್ರಕ್ಕೆ ಚಾಲನೆ ಸಿಗಲಿದ್ದು, ‘ಕಿಕ್’, ‘ರೆಸುಗುರ್ರಂ’ ಖ್ಯಾತಿ ನಿರ್ದೇಶಕ ಸುರೆಂದರ್ ರೆಡ್ಡಿ ಆಕ್ಷನ್-ಕಟ್ ಹೇಳಲಿದ್ದಾರೆ. ಈ ಚಿತ್ರ ‘ಜಾಗ್ವಾರ್’ನಂತೆ ದ್ವಿಭಾಷೆಯಲ್ಲಿ ಮೂಡಿಬರಲಿದೆ.

Leave a Reply

Your email address will not be published. Required fields are marked *