ಜಾಗದ ವಿಷಯವಾಗಿ ಎರಡು ಗುಂಪುಗಳ ನಡುವೇ ಗಲಾಟೆ: ಇಬ್ಬರಿಗೆ ಗಾಯ
ಬೆಳಗಾವಿ: ಮಹಾನಗರ ಪಾಲಿಕೆ ಜಾಗದಲ್ಲಿ ಸಮುದಾಯ ಭವನ ನಿರ್ಮಾಣ ವಿಷಯವಾಗಿ ಎರಡು ಗುಂಪುಗಳ ನಡುವೆ ಮಂಗಳವಾರ ನಗರದ ಗಣಾಚಾರಿ ಗಲ್ಲಿಯಲ್ಲಿ ಗಲಾಟೆ ನಡೆದಿದೆ.
ಹಿಂದೂ ಕಾಟಿಕ ಸಮಾಜದ ಕೆಲವರಿಂದ ಪಾಲಿಕೆ ಜಾಗ ಒತ್ತುವರಿ ಆರೋಪಿಸಿ,ಗಣಾಚಾರಿ ಸಮಾಜದ ಯುವಕರಿಂದ ಒತ್ತುವರಿ ತೆರವಿಗೆ ಆಗ್ರಹಿಸಿದ್ದರು.
ಮಂಗಳವಾರ ಪಾಲಿಕೆ ಸಿಬ್ಬಂದಿಗಳಿಂದ ಒತ್ತುವರಿ ಗುರುತಿಸಲು ಆಗಮಿಸಿದಾಗ ಗಲಾಟೆ ಸಂಭವಿಸಿದೆ.
ಗಲಾಟೆ ವೇಳೆ ರಾಜು ತಳವಾರ ಮತ್ತು ಸುದೇಶ ಲಾಠಿ ಎಂಬುವವರಿಗೆ ಗಾಯಗೊಂಡಿದ್ದಾರೆ,ಗಾಯಾಳುಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಖಡೆ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಎರಡು ಗುಂಪುಗಳ ನಡುವೆ ಸಮುದಾಯ ಭವನ ನಿರ್ಮಾಣ ವಿಷಯವಾಗಿ, ಭೂಮಿಯನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ.ಗಲಾಟೆ ವೇಳೆ ಓರ್ವ ವ್ಯಕ್ತಿಗೆ ಗಾಯವಾಗಿದೆ.ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವೆ.ಗಾಯಾಳುಗಳ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಉಪ ಆಯುಕ್ತ ರೋಹನ ಜಗದೀಶ ತಿಳಿಸಿದ್ದಾರೆ.
