ಜಲದಿಗ್ಬಂಧನದಿAದ ಮುಕ್ತಳಾದ ಛಾಯಾ

ಕೊಡೇಕಲ್: ಬಸವಸಾಗರ ಜಲಾಶಯದಿಂದ ಸತತವಾಗಿ ಕೃಷ್ಣೆಗೆ ಮೂರು ಲಕ್ಷ ಕ್ಯೂಸೆಕ್ ಪ್ರಮಾಣದ ನೀರು ಹರಿಸಿದ್ದರಿಂದ ಜಲದಿಗ್ಬಂದನಕ್ಕೊಳಗಾಗಿದ್ದ ಛಾಯಾ ದೇವಿ ಭಾನುವಾರ ಒಳಹರಿವಿನಲ್ಲಿ ಇಳಿಕೆಯಾದ ಕಾರಣ ಈಗ ಮುಕ್ತಳಾಗಿದ್ದಾಳೆ.

ಕೃಷ್ಣೆಗೆ ೩.೩೫ ಲಕ್ಷ ಕ್ಯೂಸೆಕ್ ನೀರು ಹರಿಸಿದ್ದ ಸಂದರ್ಭದಲ್ಲಿ ನದಿ ತೀರದ ಕೆಲ ಗ್ರಾಮಗಳ ಜಮೀನುಗಳಿಗೆ ನೀರು ಕೂಡ ನುಗ್ಗಿ ಬೆಳೆಹಾನಿ ಭೀತಿ ಎದುರಾಗಿತ್ತು. ಆದರೆ ಮಹಾರಾಷ್ಟç ಸೇರಿದಂತೆ ಪಶ್ಚಿಮ ಘಟ್ಟ ಪ್ರದೇಶ ಹಾಗೂ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಆಗುತ್ತಿರುವ ಮಳೆಯ ಪ್ರಮಾಣ ತಗ್ಗಿದ ಕಾರಣ ನದಿಗೆ ಉಂಟಾದ ಪ್ರವಾಹದಲ್ಲಿ ಇಳಿಕೆ ಕಂಡು ಬಂದಿದೆ.

ಶನಿವಾರ ರಾತ್ರಿಯಿಂದ ನದಿಗೆ ೨.೫೦ ಲಕ್ಷ ಕ್ಯೂಸೆಕ್ ಪ್ರಮಾಣದ ನೀರು ಹರಿಸಲಾಗುತ್ತಿದೆ, ಇದರಿಂದ ಕಳೆದ ಒಂದು ವಾರದಿಂದ ೩ ಲಕ್ಷ ಕ್ಯೂಸೆಕ್‌ಗೂ ಹೆಚ್ಚಿನ ನೀರು ಹರಿದು ಬರುತ್ತಿತ್ತು. ಆದರೆ ಈ ಒಲಹರಿವಿನಲ್ಲಿ ಇಳಿಕೆಯಾಗಿದ್ದರಿಂದ ಶನಿವಾರ ರಾತ್ರಿಯಿಂದ ೨.೫೦ ಲಕ್ಷ ಕ್ಯೂಸೆಕ್ ನೀರು ೨೫ ಗೇಟುಗಳ ಮೂಕ ೨,೨೧,೦೦೨ ಕ್ಯೂಸೆಕ್ ನೀರು ಕೃಷ್ಣೆಗೆ ಬಿಡಲಾಗುತ್ತಿದೆ.

ಕೃಷ್ಣೆಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿAದ ಛಾಯಾ ಭಗವತಿ ದೇವಸ್ಥಾನಕ್ಕೆ ಕೃಷ್ಣೆ ಪ್ರವೇಶ ಮಾಡುವ ಮೂಲಕ ಕಳೆದ ೧೨ ದಿನ ದೇವಸ್ಥಾನಕ್ಕೆ ಜಲ ದಿಗ್ಬಂಧನವಾಗಿತ್ತು. ಇದರಿಂದಾಗಿ ದೇವಸ್ಥಾನದ ಪುರೋಹಿತರು ದೇವಿ ಉತ್ಸವ ಮೂರ್ತಿಯನ್ನು ದೇವಸ್ಥಾನದ ಮೇಲ್ಭಾಗಕ್ಕೆ ತಂದು ಪೂಜಿಸುತ್ತಿದ್ದರು. ಈಗ ಒಳಹರಿವಿನಲ್ಲಿ ಇಳಿಕೆಯಾಗಿದ್ದರಿಂದ ಜಲದಿಗ್ಬಂಧನದಿAದ ದೇವಿ ಮುಕ್ತಳಾಗಿದ್ದಾಳೆ.

ದೇವಸ್ಥಾನಕ್ಕೆ ನೀರು ನುಗ್ಗಿದ್ದರಿಂದ ಕಸ, ಪ್ಲಾಸ್ಟಿಕ್ ಸೇರಿ ತ್ಯಾಜ್ಯ ತುಂಬಿಕೊAಡಿತ್ತು. ಭಾನುವಾರ ಅಮವಾಸ್ಯೆಯಾಗಿದ್ದರಿಂದ ಪುರೋಹಿತರು ಸ್ವಚ್ಛಗೊಳಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…