ಚಿತ್ರದುರ್ಗ: ಹೋರಾಟಗಾರರಾದ ಜಯಣ್ಣ, ಮುರುಘರಾಜೇಂದ್ರ ಒಡೆಯರ್ ಹೆಸರಿನಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಸ್ಥಾಪಿಸಿ, ಅರ್ಹರಿಗೆ ಪ್ರತಿ ವರ್ಷ ನೀಡಲು ತೀರ್ಮಾನಿಸಲಾಗುವುದು ಎಂದು ಭಾರತೀಯ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಅಧ್ಯಕ್ಷ ಡಾ.ಎಚ್.ಪ್ರಕಾಶ್ ಬೀರಾವರ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂ.ಜಯಣ್ಣ ಬಯಲುಸೀಮೆ ಚಿತ್ರದುರ್ಗಕ್ಕೆ ಭದ್ರಾ ಮೇಲ್ದಂಡೆ ನೀರಾವರಿ ಸೇರಿ ವಿವಿಧ ಚಳವಳಿ, ಒಡೆಯರ್ ದೌರ್ಜನ್ಯದ ವಿರುದ್ಧ ಹೋರಾಟ ನಡೆಸಿದ್ದಾರೆ. ಹೀಗಾಗಿ ಇಬ್ಬರ ಹೆಸರು ಚಿರಸ್ಥಾಯಿಯಾಗಿ ಉಳಿಸಲು ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದರು.
ಪ್ರಶಸ್ತಿಗೆ ಅರ್ಹರಾದ ಸೂಕ್ತರ ಹೆಸರನ್ನು ಅಂತಿಮಗೊಳಿಸಲು 2025ರ ಜನವರಿವರೆಗೂ ಅವಕಾಶವಿದ್ದು, ಸಾರ್ವಜನಿಕರೂ ಸಲಹೆ ನೀಡಬಹುದು. ಇದಕ್ಕಾಗಿ ಸಮಿತಿ ರಚಿಸಿ ಅಲ್ಲಿ ಆಯ್ಕೆ ಮಾಡಲಾಗುವುದು. ನಮ್ಮ ಸಮಿತಿಯಿಂದಲೇ ಪ್ರಶಸ್ತಿಯೊಂದಿಗೆ ತಲಾ 25ಸಾವಿರ ರೂ. ನಗದು ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ತಿಳಿಸಿದರು.