ಸಿನಿಮಾ

ಜನಸೇವೆಗೆ ಬಿಜೆಪಿ ಬೆಂಬಲಿಸಿ

ಸರಗೂರು: ಕ್ಷೇತ್ರದ ಮತದಾರರು ಬಿಜೆಪಿ ಬೆಂಬಲಿಸುವ ಮೂಲಕ ತಾಲೂಕಿನ ಜನರ ಸೇವೆ ಮಾಡಲು ಆಶೀರ್ವದಿಸಬೇಕು ಎಂದು ಬಿಜೆಪಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಮನವಿ ಮಾಡಿದರು.

ತಾಲೂಕಿನ ಸಾಗರೆ ಗ್ರಾಮದಲ್ಲಿ ಭಾನುವಾರ ಮತಯಾಚಿಸಿ ಮಾತನಾಡಿ, ಕ್ಷೇತ್ರದ ಪ್ರತಿಯೊಂದು ಗ್ರಾಮಗಳಿಗೆ ಹೋದಾಗ ಅತ್ಯಂತ ಪ್ರೀತಿಯಿಂದ ಸ್ವಾಗತ ಮಾಡಿರುವುದು ನೋಡಿದರೆ ಅಧಿಕ ಮತಗಳ ಅಂತರದಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.

ಕ್ಷೇತ್ರದಲ್ಲಿ 6-7 ವರ್ಷಗಳಿಂದ ಜನಸೇವೆ ಮಾಡಿಕೊಂಡು ಬಂದಿದ್ದೇನೆ. ಸಾಗರೆ ಗ್ರಾಮದಲ್ಲಿ ಎಲ್ಲ ಸಮುದಾಯದ ಜನರಿಗೆ ಕರೋನ ಸಂಕಷ್ಟದಲ್ಲಿ ಪಡಿತರ ಕಿಟ್ ವಿತರಣೆ ಮಾಡಿದೆ. ಆರೋಗ್ಯಾಧಿಕಾರಿ ಅವರ ಸಲಹೆ ಮೇರೆಗೆ ಎಚ್.ಡಿ ಕೋಟೆ ಮತ್ತು ಸರಗೂರು ತಾಲೂಕಿಗೆ ಎರಡು ಅಂಬ್ಯುಲೆನ್ಸ್ ಹಾಗೂ ಔಷಧಿ ಸೌಲಭ್ಯ ಕಲ್ಪಿಸಲಾಯಿತು ಎಂದು ತಿಳಿಸಿದರು.

ಎಚ್.ಡಿ.ಕೋಟೆ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಬೇಕು. ರಾಜ್ಯದಲ್ಲಿ ಡಬಲ್ ಇಂಜಿನ್ ಸರ್ಕಾದಿಂದ ಅತಿ ಹೆಚ್ಚು ಅನುದಾನ ತಂದು ಕ್ಷೇತ್ರದ ತಾಲೂಕಗಳನ್ನು ಅಭಿವೃದ್ಧಿ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿಕೊಂಡರು.

ಸಾಗರೆ ಗ್ರಾಮಕ್ಕೆ ಆಗಮಿಸಿದಿ ಅಭ್ಯರ್ಥಿ ಕೆ.ಎಂ.ಕೃಷ್ಣನಾಯಕ ಅವರಿಗೆ ಬೃಹತ್ ಸೇಬಿನ ಹಾರ, ಹಾಕಿ ಸ್ವಾಗತಿಸಿ ಪಟಾಕಿ ಸಿಡಿಸಿ, ಕರ್ಯಕರ್ತರು ಸ್ವಾಗತಿಸಿದರು. ಇದೇ ವೇಳೆ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ವಾಲ್ಮೀಕಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕೆ.ಎಂ.ಕೃಷ್ಣನಾಯಕ ಗೌರವ ಸಲ್ಲಿಸಿದರು. ನಂತರ ಸಾಗರೆ, ಅಗತ್ತೂರು, ಕಂದೇಗಾಲ, ನೇರಳೆ ಗ್ರಾಮಗಳಲ್ಲಿ ರಂದು ರೋಡ್ ಶೋ ನಡೆಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಗುರುಸ್ವಾಮಿ ಮುಖಂಡರಾದ ಸಾಗರೆ ಶಂಕರ್, ಮಹೇಂದ್ರ, ವೆಂಕಟಾಚಲ, ಜಯಕುಮಾರ್, ಶಿವಯ್ಯ, ಶಿವಕುಮಾರ್, ಉಮೇಶ್, ದಾಸಪ್ಪ, ಮಹೇಶ್, ಚನ್ನನಾಯಕ, ಸತೀಶ್, ಈರಾಜನಾಯಕ, ಗೊವಿಂದನಾಯಕ, ತಗಡೂರನಾಯಕ, ರಾಮಚಂದ್ರ, ಸಿದ್ದು, ಜವರಯ್ಯ, ರಂಗಪ್ಪ ಇತರರು ಇದ್ದರು.

Latest Posts

ಲೈಫ್‌ಸ್ಟೈಲ್