
ಬಸವಕಲ್ಯಾಣ: ಸರ್ಕಾರಿ ಆಸ್ಪತ್ರೆಯಲ್ಲಿರುವ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳನ್ನು ಮುಚ್ಚುವ ರಾಜ್ಯ ಸರ್ಕಾರದ ಧೋರಣೆಯನ್ನು ವಿರೋಧಿಸಿ ಶುಕ್ರವಾರ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆ ಎದುರು ಬಿಜೆಪಿಯಿಂದ ಪ್ರತಿಭಟನೆ ನಡೆಸಲಾಯಿತು. ತಲೆ, ಕೈಗೆ ಕಪ್ಪು ಪಟ್ಟಿ ಕಟ್ಟಿ, ಕಪ್ಪು ಬಾವುಟ ಪ್ರದರ್ಶನದೊಂದಿಗೆ ಹೋರಾಟ ಮಾಡಿದರು.
ಶಾಸಕ ಶರಣು ಸಲಗರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಗ್ಗಿಸವ ಉದ್ದೇಶದಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರಗಳನ್ನು ಮುಚ್ಚುವ ಆದೇಶ ಮಾಡುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರವು ಬಡವರ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸಕ್ಕೆ ಮುಂದಾಗಿದೆ. ಈ ಆದೇಶ ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಬಿಜೆಪಿ ಕಾರ್ಯಕರ್ತರಿಂದ ನಾಡಿನ ಜನರೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸರ್ಕಾರಿ ಆಸ್ಪತ್ರೆಯಲ್ಲಿ ೭೬೦ ನಮೂನೆ ಔಷಧಗಳಿರಬೇಕು. ಆದರೆ ರಾಜ್ಯದ ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ೫೬೦ ಔಷಧಗಳು ಇಲ್ಲ. ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧ ಕೇಂದ್ರ ಮುಚ್ಚುವ ನಿರ್ಣಯ ಸರ್ಕಾರ ತೆಗೆದುಕೊಳ್ಳುವಾಗ ವೈದ್ಯರೂ ಆಗಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ ತಡೆಯಬೇಕಾಗಿತ್ತು. ಸರ್ಕಾರದ ನಿರ್ಣಯ ನಾಡಿನ ಜನ ವಿರೋಧಿಸುತ್ತಿದ್ದಾರೆ. ಹೀಗಾಗಿ ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಪ್ರದಾನ ಕಾರ್ಯದರ್ಶಿ ಮಾಧವರಾವ ಹಸೂರೆ, ನಗರ ಘಟಕ ಅಧ್ಯಕ್ಷ ಸಿದ್ದು ಬಿರಾದಾರ್ ಮಾತನಾಡಿದರು. ಪಕ್ಷದ ತಾಲೂಕಾಧ್ಯಕ್ಷ ಜ್ಞಾನೇಶ್ವರ ಮುಳೆ, ಪ್ರಮುಖರಾದ ಸುಧೀರ ಕಾಡಾದಿ, ದೀಪಕ್ ಗಾಯಕವಾಡ, ಶ್ರೀನಿವಾಸ ಪಾಟೀಲ್, ಅಶೋಕ ವಕಾರೆ, ಶಂಕರ ನಾಗದೆ, ಅರವಿಂದ ಮುತ್ತೆ, ರತಿಕಾಂತ ಕೋಹಿನೂರ್, ಪ್ರದೀಪ್ ಗಡವಂತೆ, ರಾಜು ರಾಜೋಳೆ, ಶಿವಕುಮಾರ ಅಗ್ರೆ, ಶಿವಕುಮಾರ ಸಿತಾರ, ಪ್ರದೀಪ್ ಬೇಂದ್ರೆ, ಸುಧಾಕರ ಮದನೆ, ಬಾಬುರಾವ ಹಿಂಸೆ, ಮಾಧವರಡ್ಡಿ, ಪುಷ್ಪರಾಜ ಹಾರಕೂಡೆ, ಕೃಷ್ಣಾ ಗೋಣೆ, ಇಂದ್ರಸೇನ್ ಬಿರಾದಾರ್, ರಾಜಕುಮಾರ ಅಲಶೆಟ್ಟಿ, ಜ್ಞಾನೇಶ್ವರ ಪಾಟೀಲ್, ಸಚಿನ್ ಕಾಪಸೆ, ಶಾಮಲಾ ಸಜ್ಜನಶೆಟ್ಟಿ, ವಿಜಯಲಕ್ಷ್ಮೀ ಚವ್ಹಾಣ್, ಕವಿತ ಸಜ್ಜನಶೆಟ್ಟಿ ಇತರರಿದ್ದರು.