ಜನರ ಸಮಸ್ಯೆಗಳಿಗೆ ಸ್ಪಂದಿಸಲು ‘ಜನತಾ ಸದನ’

ಗದಗ: ಗದಗ ಮತಕ್ಷೇತ್ರದ ಮತದಾರರ ಸಮಸ್ಯೆಗಳನ್ನು ಆಲಿಸುವ ಸಲುವಾಗಿ ವಿಧಾನಸಭೆ, ವಿಧಾನ ಪರಿಷತ್​ನಲ್ಲಿ ನಡೆಯುವ ಕಲಾಪಗಳ ಮಾದರಿಯಲ್ಲಿ ಜನತಾ ಸದನ ಕಾರ್ಯಕ್ರಮವನ್ನು ಜು.10ರಿಂದ ಆರಂಭಿಸಲಾಗುವುದು ಎಂದು ಬಿಜೆಪಿ ಮುಖಂಡ ಅನಿಲ ಮೆಣಸಿನಕಾಯಿ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ತಿಂಗಳು ಎರಡು ದಿನಗಳ ಕಾಲ ಜನತಾ ಸದನ ನಡೆಸಲು ತೀರ್ವನಿಸಲಾಗಿದೆ. ಮೊದಲ ದಿನ ಅವಳಿ ನ

ಗರ, ಎರಡನೇ ದಿನ ಗ್ರಾಮೀಣ ಭಾಗದ ಜನರ ಸಮಸ್ಯೆಗಳ ಕುರಿತು ರ್ಚಚಿಸುವುದರ ಜತೆಗೆ ಬಿಜೆಪಿ ಪದಾಧಿಕಾರಿಗಳೇ ಸಂಬಂಧಿಸಿದ ಅಧಿಕಾರಿಗಳ ಬಳಿ ತೆರಳಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಾರೆ. ಅಧಿಕಾರಿಗಳು ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುವುದು ಎಂದು ಅವರು ವಿವರಿಸಿದರು.

ಜನತಾ ಸದನ ಕಾರ್ಯವೈಖರಿ: ವಿಧಾನಸಭೆ, ವಿಧಾನ ಪರಿಷತ್​ನಲ್ಲಿ ಒಂದು ಕಡೆಗೆ ಆಡಳಿತ ಪಕ್ಷ, ಇನ್ನೊಂದು ಕಡೆಗೆ ವಿರೋಧ ಪಕ್ಷಗಳ ಸದಸ್ಯರು ರಾಜ್ಯದ ಸಮಸ್ಯೆ

ಕುರಿತು ರ್ಚಚಿಸುತ್ತಾರೆ. ಅಲ್ಲಿ ಸ್ಪೀಕರ್, ಅಧಿಕಾರಿಗಳು, ಮಾಧ್ಯಮದವರು, ಗ್ಯಾಲರಿಯಲ್ಲಿ

ಸಾರ್ವಜನಿಕರು ಇರುತ್ತಾರೆ. ಅದೇ ಮಾದರಿಯ

ಲ್ಲಿ ನಗರದಲ್ಲಿ ಬೃಹತ್ ಹಾಲ್ ಗುರುತಿಸಿ ಸಕಲ ವ್ಯವಸ್ಥೆ ಕಲ್ಪಿಸಲಾಗುವುದು. ಒಂದು ಕಡೆಗೆ ಬಿಜೆಪಿ ಪದಾಧಿಕಾರಿಗಳು, ಮತ್ತೊಂದು

ಕಡೆಗೆ ಜನರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗುವುದು. ಬಿಜೆಪಿ ಸಂಸದರು, ವಿಧಾನ ಪರಿಷತ್ ಸದಸ್ಯರು ಹಾಗೂ ಬಿಜೆಪಿ ಬಿಜೆಪಿ ಹಿರಿಯ ಮುಖಂಡರನ್ನು

ಸ್ಪೀಕರ್ ಸ್ಥಾನದಲ್ಲಿ (ಸದನದ ಅಧ್ಯಕ್ಷ) ಕೂರಿಸಲಾಗುವುದು. ಮಧ್ಯದಲ್ಲಿ ಮಾಧ್ಯಮದವರಿಗೆ ಅವಕಾಶ ನೀಡಲಾಗುವುದು. ಈ ಜನತಾ ಸದನದಲ್ಲಿ ಜನರು

ದೂರಗಳನ್ನು ರ್ಚಚಿಸುವುದಲ್ಲದೆ, ಆ ಸಮಸ್ಯೆ ಬಗೆಹರಿಸುವರೆಗೂ ಕೈಬಿಡುವುದಿಲ್ಲ. ಈ ಕಾರ್ಯಕ್ರಮಕ್ಕೆ ಅಧಿಕಾರಿಗಳನ್ನು ಆಹ್ವಾನಿಸ

ಲಾಗುವುದು. ಅವರು ಬರದಿದ್ದರೆ ನಮ್ಮ ಪದಾಧಿಕಾರಿಗಳೇ ಜನರ ದೂರು ಅಧಿಕಾರಿಗಳ ಬಳಿ ಕೊಂಡೊಯ್ದು ಬಗೆಹರಿಸಲು ಪ್ರಯತ್ನ ಮಾಡುತ್ತಾರೆ ಎಂದು ಅವರು ವಿವರಿಸಿದರು.

ಜನತಾ ಸದನ ರಾಜಕೀಯ ಕ್ಷೇತ್ರದಲ್ಲಿ ಹೊಸ ಪ್ರಯೋಗವಾಗಿದ್ದು, ನಾನು ಶಾಸಕನಾಗಿದ್ದರೆ ಇದೇ ಮಾದರಿಯಲ್ಲಿ ಆಡಳಿತ ನಡೆಸಬೇಕು ಎಂಬ ಕನಸಿತ್ತು. ಆದರೆ, ಕನಸು ಕೈಗೂಡದಿದ್ದರೂ ಅವಳಿ ನಗರ ಸೇರಿ ಕ್ಷೇತ್ರದ 75,800 ಜನರು ನನಗೆ ಮತ ನೀಡಿ ಆಶೀರ್ವದಿಸಿದ್ದಾರೆ. ಅವರ ಸಲುವಾಗಿ ನಾನು ಹೊಸ ಪ್ರಯೋಗಕ್ಕೆ ಮುಂದಾಗಿದ್ದೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಜಗನ್ನಾಥ ಭಾಂಡಗೆ, ಕಾಂತಿಲಾಲ ಬನ್ಸಾಲಿ, ಶ್ರೀನಿವಾಸ ಹುಬ್ಬಳ್ಳಿ, ಅನಿಲ ಅಬ್ಬಿಗೇರಿ, ಮಂಜುನಾಥ ಮುಳಗುಂದ, ಬಸವಣ್ಣಯ್ಯ ಹಿರೇಮಠ ಸೇರಿ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *