ಜನರ ಸಮಯಪ್ರಜ್ಞೆಯಿಂದ ತಪ್ಪಿದ ಅಗ್ನಿ ಅನಾಹುತ

ಗುತ್ತಲ: ಅಂತ್ಯ ಸಂಸ್ಕಾರಕ್ಕೆ ತೆರಳಿದ್ದ ಜನರ ಸಮಯ ಪ್ರಜ್ಞೆಯಿಂದ ಅಗ್ನಿ ಅನಾಹುತವೊಂದು ತಪ್ಪಿದ ಘಟನೆ ಗುರುವಾರ ಗುತ್ತಲದ ರಾಣೆಬೆನ್ನೂರ ರಸ್ತೆಯ ಹೇಮಗಿರಿಮಠದವರ ಜಮೀನಿನ ಬಳಿ ಜರುಗಿದೆ.

ಪಟ್ಟಣದ ಈರಣ್ಣ ವಟ್ನಳ್ಳಿ ಎಂಬುವವರ ಅಂತ್ಯ ಸಂಸ್ಕಾರಕ್ಕಾಗಿ ಹೇಮಗಿರಿಮಠದವರ ಜಮೀನಿಗೆ ಜನ ತೆರಳಿದ್ದರು. ಈ ವೇಳೆ ಸಮೀಪವೇ ಅಗ್ನಿ ಆಕ್ಮಸಿಕ ಸಂಭವಿಸಿ ಅಕ್ಕ ಪಕ್ಕದ ಜಮೀನುಗಳಿಗೆ ಬೆಂಕಿ ವ್ಯಾಪಿಸಲಾರಂಭಿಸಿತ್ತು. ಇದನ್ನು ನೋಡಿದ ಜನರು ತಕ್ಷಣವೇ ಅಲ್ಲಿಯೇ ಇದ್ದ ತೆಂಗಿನ ಗಿಡದ ಗರಿಗಳಿಂದ ಬೆಂಕಿ ವ್ಯಾಪಿಸದಂತೆ ನೋಡಿಕೊಂಡಿದ್ದಾರೆ. ಬಳಿಕ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಸಂಪೂರ್ಣ ಬೆಂಕಿ ನಂದಿಸಿದರು. ಅನಾಹುತದಲ್ಲಿ ಪಕ್ಕದ ಹೊಲದಲ್ಲಿನ ಕೆಲ ನಿಂಬೆ ಗಿಡಗಳಿಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.

ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಬಿ.ಟಿ. ನಾಗೇಶ, ಎಸ್.ಎಚ್. ಪ್ರಸನ್ನಕುಮಾರ, ರಮೇಶ ಗುಂಜಾಳ, ವೀರೇಶ ತೆಗ್ಗಿನ ಇದ್ದರು.

Leave a Reply

Your email address will not be published. Required fields are marked *