More

  ಜನರ ನಂಬಿಕೆಗೆ ಚ್ಯುತಿ ತರಲಾರೆವು


  ಯಾದಗಿರಿ: ರಾಜ್ಯದ ಜನತೆ ಕಾಂಗ್ರೆಸ್ ಮೇಲೆ ವಿಶ್ವಾಸವನ್ನಿಟ್ಟು ಅಕಾರ ನೀಡಿದ್ದು, ಅವರ ನಂಬಿಕೆಗೆ ಚ್ಯುತಿ ಬರದಂತೆ ನಡೆದುಕೊಳ್ಳುತ್ತೇವೆ ಎಂದು ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸ್ಸಪ್ಪ ದರ್ಶನಾಪುರ ವಾಗ್ದಾನ ಮಾಡಿದರು.

  ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಕಾಂಗ್ರೆಸ್ ನೂತನ ಶಾಸಕರ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಬಿಜೆಪಿಯವರು ಅಭಿವೃದ್ಧಿ ಬಿಟ್ಟು ಭಾವನಾತ್ಮಕ ವಿಷಯ ಮುಂದಿಟ್ಟುಕೊಂಡು ಚುನಾವಣೆ ನಡೆಸಿದರು. ಆದರೆ, ರಾಜ್ಯದ ಜನತೆ ದಡ್ಡರಲ್ಲ. ಕೋಮುವಾದಿ ಪಕ್ಷವನ್ನು ದೂರ ಇಡುವ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಕಾಂಗ್ರೆಸ್ ದೇಶದ ಜನರ ಒಳಿತನ್ನು ಬಯಸುವ ಪಕ್ಷವಾಗಿದೆ. ನಾವು ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನತೆಗೆ ನೀಡಿದ್ದ ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಕರ್ಾರದ ಮೇಲೆ ಎಷ್ಟೇ ಆಥರ್ಿಕ ಹೊರೆಯಾದರೂ ಜನರಿಗೆ ಕೊಟ್ಟ ಮಾತು ಉಳಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

  ಕಳೆದ ಚುನಾವಣೆಯಲ್ಲಿ ವಾಮಮಾರ್ಗದಿಂದ ಅಕಾರಕ್ಕೆ ಬಂದ ಬಿಜೆಪಿ ಸಕರ್ಾರವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿತ್ತು. ಯಾವುದೇ ಕಾಮಗಾರಿ ನಡೆಯಬೇಕಾದರೂ ಶೇ.40ರಷ್ಟು ಲಂಚ ಕೊಡುವ ಸ್ಥಿತಿ ಎದುರಾಗಿತ್ತು. ಇದರಿಂದ ಅಭಿವೃದ್ಧಿಗೆ ಪೆಟ್ಟು ಬಿದ್ದಿತ್ತಲ್ಲದೆ, ದೇಶದ ಮುಂದೆ ರಾಜ್ಯದ ಮಾನ ಮಯರ್ಾದೆ ಹಾಳಾಗಿತ್ತು. 5 ವರ್ಷಗಳ ಕಾಲ ನಮ್ಮ ಸಕರ್ಾರ ಸುಭದ್ರವಾಗಿ ಅಕಾರ ನಡೆಸಲಿದೆ. ಜನರ ಆಶೋತ್ತರಗಳನ್ನು ಇಡೇರಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತವೆ ಎಂದು ಭರವಸೆ ನೀಡಿದರು.

  ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಕಾರ್ಯಕರ್ತರು ಪಕ್ಷವನ್ನು ತಾಯಿ ರೂಪದಲ್ಲಿ ನೋಡಬೇಕು. ಮೊನ್ನೆ ನಡೆದ ಚುನಾವಣೆಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲು ಕಾರ್ಯಕರ್ತರೇ ಕಾರಣ. ಮುಂದಿನ ದಿನಗಳಲ್ಲಿ ನಾವು ಮೂರು ಜನ ಶಾಸಕರು ಸೇರಿಕೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

  ಶಾಸಕ ಚನ್ನಾರಡ್ಡಿ ಪಾಟೀಲ್ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸ್ಥಿರ ಆಡಳಿತ ನಡೆಸಲಿದ್ದಾರೆ. ಜಿಲ್ಲೆಯ ಸವರ್ಾಂಗಿಣ ಅಭಿವೃದ್ಧಿಗೆ ನಮ್ಮ ಸಕರ್ಾರ ಸಂಕಲ್ಪ ಮಾಡಿದೆ. ಚುನಾವಣೆಯಲ್ಲಿ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ್ದು, ಅವರನ್ನು ಕೈ ಬಿಡುವುದಿಲ್ಲ ಎಂದರು.

  ಕೆಪಿಸಿಸಿ ಪ್ರಧಾನ ಕಾರ್ಯದಶರ್ಿ ಮರಿಗೌಡ ಹುಲಕಲ್, ಈ ಹಿಂದೆ ಆಡಳಿತ ನಡೆಸಿದ ಕಾಂಗ್ರೆಸ್ ರಾಜ್ಯದಲ್ಲಿ ಭ್ರಷ್ಟ ಆಡಳಿತ ನಡೆಸಿ, ಜನರನ್ನು ಭ್ರಮನಿರಸನ ಉಂಟು ಮಾಡಿತ್ತು. ಹೀಗಾಗಿ ಚುನಾವಣೆಯಲ್ಲಿ ಜನತೆ ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಿದ್ದಾರೆ ಎಂದು ಹೇಳಿದರು.

  ಜಿಲ್ಲಾಧ್ಯಕ್ಷ ಬಸರಡ್ಡಿ ಅನಪುರ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ.ಎಸ್.ಬಿ.ಕಾಮರಡ್ಡಿ, ಡಾ,ಭೀಮಣ್ಣ ಮೇಟಿ, ಶರಣಪ್ಪ ಮಾನೇಗಾರ, ರಾಘವೇಂದ್ರ ಮಾನಸಗಲ್, ಸತೀಶ ಕಂದಕೂರ, ಮಂಜೂಳಾ ಗೂಳಿ ಇದ್ದರು.ಸ್ಯಾಮಸನ್ ಮಾಳಿಗೇರಿ ಸ್ವಾಗತಿಸಿ, ನಿರೂಪಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts