ಬಾಗಲಕೋಟೆ: ಸದನದಲ್ಲಿ ಸಾಕಷ್ಟು ವಿಷಯಗಳನ್ನು ಚರ್ಚೆ ಮಾಡಬೇಕಿದೆ. ಈ ಎಲ್ಲವುಗಳನ್ನು ಜನರಿಂದ ವಿಮುಖ ಮಾಡಲು ಬಿಜೆಪಿ ಸರ್ಕಾರ ಸಾರ್ವಕರ ಭಾವಚಿತ್ರ ಅನಾವರಣ ಮಾಡಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜಮಖಂಡಿ ತಾಲೂಕಿನ ಕಾಜಿಬೀಳಗಿ ಗ್ರಾಮದಲ್ಲಿ ಕಾಶಿಲಿಂಗೇಶ್ವರ ದೇವಸ್ಥಾನಕ್ಕೆ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು.
ನಮ್ಮ ಬೇಡಿಕೆ ಏನು ಅಂದರೆ ರಾಷ್ಟ್ರನಾಯಕರು ಹಾಗೂ ದಾರ್ಶನಿಕರ ಭಾವಚಿತ್ರಗಳನ್ನು ಅನಾವರಣ ಮಾಡುವ ಬಗ್ಗೆ ಸ್ಪೀಕರï ಅವರು ಯಾರನ್ನೂ ಕೇಳದೇ ಮಾಡಿದ್ದಾರೆ. ಸದನವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಕಮೀಟಿಯಲ್ಲಿ ಚರ್ಚೆ ಮಾಡಿಲ್ಲ. ನಮಗೆ ಯಾರಿಗೂ ಹೇಳಿಲ್ಲ, ಕರೆದಿಲ್ಲ. ಅದಕ್ಕೆ ನಾವು ವಿರೋಧ ಮಾಡಿದ್ದೇವೆ ಎಂದ ಸಿದ್ದರಾಮಯ್ಯ, ಸಾವರ್ಕರ ಭಾವಚಿತ್ರ ಅನಾವರಣದ ಬಗ್ಗೆ ಡಿಕೆಶಿ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದರು.
ಹೆಲಿಕ್ಯಾಪ್ಟರ ಕೊಡೆಸೋದು ನನಗೆ ಹೇಳಿಲ್ಲ :
ಇನ್ನು ಬಾದಾಮಿ ಕ್ಷೇತ್ರಕ್ಕೆ ಮತ್ತೆ ಸ್ಪರ್ಧೆ ಮಾಡಿ ನೀವು ಬಂದು ಹೋಗಲು ನಮ್ಮ ಹಣದಲ್ಲಿ ಹೆಲಿಕ್ಯಾಪ್ಟರ ಕೊಡೆಸಲು ಜನರು ಮುಂದಾಗಿದ್ದಾರೆ ಎಂದು ಶಾಸಕ ಜಮೀರ್
ಅಹ್ಮದ್ ಹೇಳಿಕೆಗೆ ಉತ್ತರಿಸಲು ನಿರಾಕರಿಸಿದ ಅವರು, ಇದು ನನಗೆ ಗೊತ್ತಿಲ್ಲ. ಯಾರೂ ನನಗೆ ಹೇಳಿಲ್ಲ ಎಂದರು.
ಮಾಜಿ ಸಚಿವ ಎಂ.ಬಿ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಇದ್ದರು.