More

    ಜನಮನ ಸೂರೆಗೊಳ್ಳುತ್ತಿರುವ ಗಣೇಶ ಮೂರ್ತಿಗಳು

    ಕೋಲಾರ: ಬಜರಂಗದಳ ಸೇರಿದಂತೆ ಹಿಂದೂಪರ ಸಂಘಟನೆಗಳು ಬಾಲಗಂಗಾಧರ ತಿಲಕ್ ಸಮಿತಿ ಆಶ್ರಯದಲ್ಲಿ ಸ್ಥಾಪಿಸಿರುವ ಧರ್ಮರಕ್ಷಣೆ ಸಂದೇಶ ಸಾರುವ ಬೃಹತ್ ಗಣೇಶ, ಜಿಲ್ಲಾಸ್ಪತ್ರೆ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಸಭಾ ಶಾಶ್ವತ ನೀರಿಗಾಗಿ ಆಗ್ರಹಿಸಿ ೧೦ನೇ ವರ್ಷದ ಅದ್ದೂರಿ ಗಣೇಶೋತ್ಸ ವ ನಗರದಲ್ಲಿ ಆಸ್ತೀಕ ಮಹಾಶಯರನ್ನು ಕೈಬೀಸಿ ಕರೆಯುತ್ತಿದ್ದು ನೂರಾರು ಮಂದಿ ಭೇಟಿ ನಿಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
    ಗಾಂಧಿವನದಲ್ಲಿ ಧರ್ಮರಕ್ಷಣೆ ಜತೆ ಸೌಹಾರ್ದತೆ ಸಾರುವ ಶಾಂತ ಗಣಪನ ಬೃಹತ್ ಮೂರ್ತಿ ಪ್ರತಿಷ್ಠಾಪಿಸಿದ್ದು, ಸನಿಯದಲ್ಲೇ ತಿರುಮಲ ಬಾಲಾಜಿ, ಮತ್ತೊಂದು ಕಡೆ ರಾಮಲಕ್ಷö್ಮಣನ್ನು ಹೊತ್ತ ಹನುಮಂತ ದೇವರು, ಗಣಪನ ವಿವಿಧ ಮಾದರಿಗಳನ್ನು ಪ್ರತಿಷ್ಠಾಪಿಸಲಾಗಿದೆ.
    ಹಲವಾರು ವರ್ಷದಿಂದ ಅದ್ಧೂರಿ ಗಣೇಶೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಹಿಂದು ಯುವಕರನ್ನು ಒಗ್ಗೂಡಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿರುವ ತಿಲಕ್ ವಿನಾಯಕ ವಿಸರ್ಜನಾ ಸಮಿತಿ ಈ ಬಾರಿಯೂ ಅದ್ಧೂರಿ ಗಣೇಶೋತ್ಸವ ಆಚರಿಸುತ್ತಿದ್ದು, ಭಜರಂಗದಳದ ಬಾಲಾಜಿ, ಬಾಬು, ಅಪ್ಪಿ, ಡಿ.ಆರ್.ನಾಗರಾಜ್, ಶಿವ, ವೆಂಕಟೇಶ್, ಬಿಆರ್‌ಎಂ ಸಂತೋಷ್, ಮಂಜುನಾಥ್, ವಿಶ್ವನಾಥ್, ರವಿ, ಶ್ರೀಧರ್, ವಿಶು, ಸಾಯಿಮೌಳಿ, ದನ್ನು, ದೀಪು, ವಿಶಾಕ, ನಾಗೇಶ್, ಕನಕೇಶ್,ಭವಾನಿ, ಸಂಜಯ್, ಯಶ್ವಂತ್, ವಿನಯ್, ಗೋಪಿ ಮತ್ತಿತರರು ನೇತೃತ್ವ ವಹಿಸಿದ್ದಾರೆ.
    ಇನ್ನು ನಗರದ ವಿವಿಧೆಡೆ ಪ್ರತಿಷ್ಟಾಪಿಸಿರುವ ಗಣಪನ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಮೆರವಣಿಗೆ ಸೆ.೨೦ರಂದು ನಡೆಯಲಿದ್ದು, ನೇತೃತ್ವವವನ್ನು ತಿಲಕ್ ವಿನಾಯಕ ವಿಸರ್ಜನಾ ಸಮಿತಿ ವಹಿಸಿಕೊಂಡಿದೆ. ಈಗಾಗಲೇ ವಿವಿಧ ಸಂಘಟನೆಗಳು, ಯುವಕ ಸಂಘಗಳು, ವಿವಿಧ ಬಡಾವಣೆಗಳಲ್ಲಿಟ್ಟಿರುವ ಗಣಪನ ಮೂರ್ತಿಗಳನ್ನು ಗಾಂಧಿವನದಿಂದ ನಡೆಯುವ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಅಧ್ಯಕ್ಷ ಆರ್.ಬಾಲಾಜಿ ಮನವಿ ಮಾಡಿದ್ದಾರೆ.
    ಶುದ್ಧ ನೀರಿಗೆ ಆಗ್ರಹ: ನಗರದ ಎಸ್ಸೆನ್ನಾರ್ ಆಸ್ಪತ್ರೆ ವೃತ್ತದಲ್ಲಿ ಅಖಂಡ ಭಾರತ ವಿನಾಯಕ ಮಹಾಸಭಾ ವತಿಯಿಂದ ಶಾಶ್ವತ ಮತ್ತು ಶುದ್ಧ ನೀರಿಗಾಗಿ ಆಗ್ರಹಿಸಿ ೧೦ನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಬೃಹತ್ ಗಣಪನ ಮೂರ್ತಿಗಳನ್ನು ಇಲ್ಲಿ ಪ್ರತಿಷ್ಟಾಪಿಸಿದ್ದು, ನೋಡಲು ಹರಿದು ಬಂದ ಜನಸಾಗರಕ್ಕೆ ಮಂಗಳವಾರ ಇಡೀ ದಿನ ಪ್ರಸಾದ ವಿತರಿಸಲಾಯಿತು.
    ಬಿಜೆಪಿ ಯುವಮೋರ್ಚಾ ರಾಜ್ಯ ಉಪಾಧ್ಯಕ್ಷ ಓಂಶಕ್ತಿ ಚಲಪತಿ ನೇತೃತ್ವ ವಹಿಸಿದ್ದು, ಬಿಜೆಪಿ ಮುಖಂಡರಾದ ಸಾಮಾ ಬಾಬು, ನಾಮಾಲ ಮಂಜು, ತಿಮ್ಮರಾಯಪ್ಪ, ಅಪ್ಪಿನಾರಾಯಣಸ್ವಾಮಿ, ಜಿಲ್ಲಾ ಸೇವಾದಳ ಅಧ್ಯಕ್ಷ ಕೆ.ಎಸ್.ಗಣೇಶ್, ಮುಖಂಡ ಮುನಿವೆಂಕಟಯಾದವ್ ಮತ್ತಿತರರು ಪಾಲ್ಗೊಂಡಿದ್ದರು.
    ನಗರದ ವಿವಿಧೆಡೆ ಕಮಲದ ಮೇಲೆ ನಿಂತ ನಾಟ್ಯ ಗಣಪ, ಗೋಲ್ಡನ್ ಗಣಪ, ಕೈಲಾಸಹೊತ್ತ ಗಣಪ, ಶ್ರೀನಿವಾಸರೂಪಿ ಗಣಪ ಸೇರಿದಂತೆ ಗಣಪಗಳನ್ನು ನಗರದ ಪ್ರತಿ ಬಡಾವಣೆಯಲ್ಲೂ ಪ್ರತಿಷ್ಟಾಪಿಸಲಾಗಿದ್ದು, ಎಲ್ಲಾ ಕಡೆ ಗಣಪ ಮೂರ್ತಿಗಳು ವೈವಿಧ್ಯತೆಯಿಂದ ಗಮನ ಸೆಳೆಯುತ್ತಿವೆ.

    ರಾಜ್ಯೋತ್ಸವ ರಸಪ್ರಶ್ನೆ - 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts