More

  ಜನಮನದಲ್ಲಿ ನೆಲೆಯೂರಿದೆ ಬಿಜೆಪಿ

  ಅಥಣಿ: ಕೇಂದ್ರ ಮತ್ತು ರಾಜ್ಯ ಸರ್ಕಾರ ಉತ್ತಮ ಕೆಲಸ ಮಾಡಿದ್ದರಿಂದ ಜನರ ಮನದಲ್ಲಿ ಬಿಜೆಪಿ ನೆಲೆಯೂರಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು.

  ಪಟ್ಟಣದಲ್ಲಿ ಗುರುವಾರ ಬಿಜೆಪಿ ಹಮ್ಮಿಕೊಂಡಿದ್ದ ವಿಜಯ ಸಂಕಲ್ಪ ರಥಯಾತ್ರೆ ನೇತತ್ವ ವಹಿಸಿ ಮಾತನಾಡಿ, ನರೇಂದ್ರ ಮೋದಿ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರಗಳು ಜನಪರ ಕಾರ್ಯಕ್ರಮ ನೀಡಿ ಜನರ ಹದಯದಲ್ಲಿದೆ. ಕ್ಷೇತ್ರದ ಮೂಲಸೌಕರ್ಯಗಳ ಜತೆಗೆ ರಸ್ತೆ, ಕೆರೆ, ಕಾಲುವೆ ನಿರ್ಮಾಣ ಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಕ್ಷೇತ್ರ ಪ್ರಗತಿಪಥದತ್ತ ಸಾಗುತ್ತಿದೆ ಎಂದರು.

  ವಿಪ ಸದಸ್ಯ ಲಕ್ಷ್ಮಣ ಸವದಿ ಮಾತನಾಡಿ, ಕ್ಷೇತ್ರ ದಲ್ಲಿ ಅಭಿವದ್ದಿ ಕಾರ್ಯ ನಡೆದಿದ್ದು ಪಕ್ಷಮತ್ತೆ ಅಧಿಕಾರಕ್ಕೆ ತರುವುದು ನಮ್ಮೆಲ್ಲರ ಜವಾಬ್ದಾರಿ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.

  ಮಾಜಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿ, ಮತಕ್ಷೇತ್ರದ ಅಭಿವೃದ್ಧಿಗೆ ಸಾವಿರಾರು ಕೋಟಿ ರೂ ಅನುದಾನ ತಂದು ಶಾಸಕ ಮಹೇಶ ಕುಮಠಳ್ಳಿ ಅಥಣಿಯಲ್ಲಿ ಜನಪರ ಕಾರ್ಯ ಕೈಗೊಂಡಿದ್ದಾರೆ. ಅವರು ಜನರಿಗೆ ವಚನ ನೀಡಿದಂತೆ ಅಮ್ಮಾಜೇಶ್ವರಿ ಕೊಟ್ಟಲಗಿ ಏತ ನೀರಾವರಿ ಯೋಜನೆಗೆ ಶೀಘ್ರದಲ್ಲೇ ಭೂಮಿಪೂಜೆ ನೆರವೇರಿಸಲಾಗುವುದು. ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

  ಶಾಸಕ ಮಹೇಶ ಕುಮಠಳ್ಳಿ ಮಾತನಾಡಿ, ಲಕ್ಷ್ಮಣ ಸವದಿ ಅವರ ಸಹಕಾರದೊಂದಿಗೆ ತಾಲೂಕಿನಲ್ಲಿ ಸಾಕಷ್ಟು ಅಭಿವದ್ಧಿ ಕಾರ್ಯ ಕೈಗೊಂಡಿದ್ದೇವೆ. ಎರಡು ದಶಕಗಳ ಅಮ್ಮಾಜೇಶ್ವರಿ ಕೊಟ್ಟಲಗಿ ಏತನೀರಾವರಿ ಯೋಜನೆಗೆ ಅನುಮತಿ ಸಿಕ್ಕಿದೆ. ಈ ಯೋಜನೆ ಕಾರ್ಯದಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ ಸಹಕರಿಸಿದ್ದಾರೆ. ಮತಕ್ಷೇತ್ರದ ಜನತೆ ಮತ್ತೊಮ್ಮೆ ಆಶೀರ್ವದಿಸಬೇಕು ಎಂದು ಕೋರಿಕೊಂಡರು.

  ಬೃಹತ್ ರೋಡ್ ಷೋ: ಪಟ್ಟಣದ ಶಿವಾಜಿ ವತ್ತದಿಂದ ಆರಂಭವಾದ ವಿಜಯ ಸಂಕಲ್ಪಯಾತ್ರೆ ಬಸವೇಶ್ವರ ವತ್ತ, ಶಿವಯೋಗಿ ವತ್ತ, ಅಂಬೇಡ್ಕರ ವತ್ತದ ಮೂಲಕ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಸಿದ್ದೇಶ್ವರ ಅಗಸಿ ಮೂಲಕ ಸಂಗೊಳ್ಳಿ ರಾಯಣ್ಣ ವತ್ತದಲ್ಲಿ ಒಂದುಗೂಡಿದವು. ಯಾತ್ರೆಗೆ ವಿವಿಧ ಕಲಾ ತಂಡಗಳು ಸಾಥ್ ನೀಡಿದವು.
  ಸಚಿವೆ ಶಶಿಕಲಾ ಜೊಲ್ಲೆ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಡಾ.ರಾಜೇಶ ನೇರ್ಲಿ, ಮಂಡಳ ಅಧ್ಯಕ್ಷ ಡಾ.ರವಿ ಸಂಕ, ಮುಖಂಡರಾದ ಉಮೇಶರಾವ ಬಂಟೋಡ್ಕರ, ಡಾ.ಪ್ರಕಾಶ ಕುಮಠಳ್ಳಿ, ಅನಿಲ ಸೌದಾಗರ, ರಮೇಶಗೌಡ ಪಾಟೀಲ, ನಿಂಗಪ್ಪ ನಂದೇಶ್ವರ, ಮುರುಗೇಶ ಕುಮಠಳ್ಳಿ ಇತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts