ಜನಪರ ಕೆಲಸ ಬೆಂಬಲಿಸಲು ಸಿದ್ಧ

blank

ಚಿತ್ರದುರ್ಗ: ಜನಪರವಾದ ಎಲ್ಲ ರೀತಿಯ ಕೆಲಸಗಳಿಗೆ ನನ್ನ ಸಂಪೂರ್ಣ ಬೆಂಬಲ ಕೊಡುತ್ತೇನೆ. ನೀವು ಕೂಡ ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ನಿವೃತ್ತ ನೌಕರರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಹೇಳಿದರು.

ಜಿಲ್ಲಾ ಕ್ರೀಡಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಚಿತ್ರದುರ್ಗ ತಾಲೂಕು ನಿವೃತ್ತ ನೌಕರರ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಉದ್ಯೋಗ ಅಥವಾ ಸಕ್ರಿಯ ಕೆಲಸದಿಂದ ವಿಮುಕ್ತಿ ಹೊಂದುವುದೇ ನಿವೃತ್ತಿಯಾಗಿದೆ. ಆದರೆ, ಸಮಾಜ ಸೇವೆಗೆ ನಿವೃತ್ತಿ ಎಂಬುದಿಲ್ಲ. ಹೀಗಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಎಂಎಲ್ಸಿ ಕೆ.ಎಸ್. ನವೀನ್ ಮಾತನಾಡಿ, ಸರ್ಕಾರದ ನಿಯಮಾನುಸಾರ ನೌಕರರು ನಿವೃತ್ತರಾಗುವುದು ಸಾಮಾನ್ಯ. ಆದರೆ, ಮಾನಸಿಕ ಹಾಗೂ ದೈಹಿಕವಾಗಿ ಇನ್ನೂ ಎರಡ್ಮೂರು ದಶಕ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲು, ಮಾರ್ಗದರ್ಶನ ಮಾಡಲು ಸಮರ್ಥರಿದ್ದೀರಿ. ಈ ಕಾರಣಕ್ಕೆ ನೀವು ನಿವೃತ್ತರಲ್ಲ ಎಂದು ಅಭಿಪ್ರಾಯಪಟ್ಟರು.

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಸರ್ಕಾರದ ವಿವಿಧ ಇಲಾಖೆಗಳಲ್ಲಿ 30ರಿಂದ 35 ವರ್ಷ ಸೇವೆ ಸಲ್ಲಿಸಿ, ನಿವೃತ್ತರಾದರೂ ಬದುಕಿನಲ್ಲಿ ಪ್ರವೃತ್ತಿ ಎಂಬುದು ಮುಖ್ಯ. ಲವಲವಿಕೆ, ಆಶಾಭಾವನೆ ಮೈಗೂಡಿಸಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಸಲಹೆ ನೀಡಿದರು.

ಎಲ್ಲರಲ್ಲೂ ತಮ್ಮ ವೃತ್ತಿಯ ಕುರಿತು ಬದ್ಧತೆ ಇರಬೇಕು. ಪ್ರಾಮಾಣಿಕತೆ, ಪಾರದರ್ಶಕತೆ, ತಾತ್ಪರತೆ ಮರೆಯಾಗುತ್ತಿರುವ ದಿನಗಳಲ್ಲಿ ಯುವಸಮೂಹದ ನೌಕರರಿಗೆ ನಿವೃತ್ತ ನೌಕರರು ಮಾರ್ಗದರ್ಶನ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜೆ. ವೈಶಾಲಿ, ಡಿಎಚ್‌ಒ ಡಾ.ಜಿ.ಪಿ. ರೇಣುಪ್ರಸಾದ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ.ಕೆ. ಹನುಮಂತಪ್ಪ, ಗೌರವಾಧ್ಯಕ್ಷ ನಾಗರಾಜ್ ಸಂಗಮ್, ಉಪಾಧ್ಯಕ್ಷರಾದ ಎಂ.ಜಿ. ಸೂರ್ಯನಾರಾಯಣ್, ಓ. ಮಾದಯ್ಯ, ಪ್ರೇಮಾ, ಪದಾಧಿಕಾರಿಗಳಾದ ಎಚ್. ಗೋವಿಂದಯ್ಯ, ಎಚ್. ಪರಮೇಶ್ವರಪ್ಪ, ಚಿನ್ನಪ್ಪ ಕೃಷ್ಣಮೂರ್ತಿ, ಮನರಂಜನಾ ಕೇಂದ್ರದ ಉಪಾಧ್ಯಕ್ಷ ಪಿ.ಎಸ್. ಶಿವಕುಮಾರ್, ಸಹ ಕಾರ್ಯದರ್ಶಿ ಎ. ತಿಪ್ಪೇಸ್ವಾಮಿ, ಖಜಾಂಚಿ ಎಸ್. ಹಾಲಾನಾಯ್ಕ ಇತರರಿದ್ದರು.

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…