ಜತೀನ್ ಎರಡು ಗೋಲು, ಲಯನ್ ತಂಡಕ್ಕೆ ಗೆಲುವು

ಮೈಸೂರು: ಜತೀನ್(54, 66ನಿಮಿಷ) ನೀಡಿದ ಉತ್ತಮ ಪ್ರದರ್ಶನದ ನೆರವಿನಿಂದ ಲಯನ್ ಫುಟ್‌ಬಾಲ್ ಕ್ಲಬ್ ತಂಡ ‘ಗೋವಿಂದರಾಜು ಮೆಮೋರಿಯಲ್ ಟ್ರೋಫಿ’ಯ ಬಿ ಡಿವಿಷನ್ ಫುಟ್‌ಬಾಲ್ ಲೀಗ್‌ನಲ್ಲಿ ಜಯಗಳಿಸಿತು.
ಮೈಸೂರು ವಿಶ್ವವಿದ್ಯಾಲಯ ಫುಟ್‌ಬಾಲ್ ಮೈದಾನದಲ್ಲಿ ಜಿಲ್ಲಾ ಫುಟ್‌ಬಾಲ್ ಸಂಸ್ಥೆ ಆಯೋಜಿಸಿದ್ದ ಪಂದ್ಯದಲ್ಲಿ ಸೋನಿಯಾ ತಂಡದ ವಿರುದ್ಧ 3-0 ಗೋಲುಗಳಿಂದ ಭರ್ಜರಿ ಗೆಲುವು ಪಡೆಯಿತು.
ಪಂದ್ಯದಲ್ಲಿ ಆಯಿಷ್ (53ನಿ.) ಗೋಲು ಬಾರಿಸಿ ಲಯನ್ ತಂಡದ ಗೆಲುವಿನ ಅಂತರ ಹೆಚ್ಚಿಸಿದರು.