ಚನ್ನಮ್ಮನ ಕಿತ್ತೂರ: ಜಗದ್ಗುರು ರೇಣುಕಾಚಾರ್ಯರು ಜಂಗಮರಿಗಷ್ಠೆ ಸೀಮಿತರಾಗದೇ ಎಲ್ಲರಿಗೂ ಗುರುಗಳಾಗಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಸ್ವಾಮೀಜಿ ಹೇಳಿದರು.
ಸ್ಥಳೀಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಗದ್ಗುರು ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ರೇಣುಕಾಚಾರ್ಯರು ಯಾರ ಸ್ವತ್ತಲ್ಲ. ಸಿದ್ಧಾಂತ ಶಿಖಾಮನಿಯನ್ನು ಮೊದಲು ಅಗಸ್ತ್ಯ ಮಹಾಋಷಿಗೆ ಭೋದಿಸಿದ್ದಾರೆ. ಜಾತಿ ನೋಡದೇ ಯಾರು ಆಶೀರ್ವಾದ ಮಾಡುತ್ತಾರೋ ಅವರೇ ಜಂಗಮರು. ಮುಂಬರುವ ದಿನಗಳಲ್ಲಿ ಎಲ್ಲ ಸಮುದಾಯದವರು ಸೇರಿ ಅದ್ದೂರಿಯಾಗಿ ರೇಣುಕಾಚಾರ್ಯರ ಜಯಂತಿ ಆಚರಿಸೋಣ ಎಂದರು.
ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಮಾತನಾಡಿ, ಜನರನ್ನು ಜಾಗೃತರನ್ನಾಗಿಸಲು, ಸಮಾಜವನ್ನು ಸಂಘಟನೆಗೊಳಿಸಲು ಹಾಗೂ ಸಂಸ್ಕಾರವAತರನ್ನಾಗಿಸುವುದೇ ರೇಣುಕಾಚಾರ್ಯರ ಜಯಂತಿ ಉದ್ದೇಶವಾಗಿದೆ. ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಸಂದೇಶ ಸಾರುವ ಮೂಲಕ ಮಾನವ ಕುಲಕ್ಕೆ ಲೇಸು ಬಯಸಿದ್ದಾರೆ. ಯುವ ಪೀಳಿಗೆಗೆ ಸಿದ್ಧಾಂತ ಶಿಖಾಮನಿ ಪ್ರವಚನ ತಿಳಿಸುವ ಮೂಲಕ ಜಯಂತಿ ಆಚರಿಸೋಣ ಎಂದು ತಿಳಿಸಿದರು. ಗಂದಿಗವಾಡ ಹಿರೇಮಠದ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಎಲ್ಲರ ಮನೆಯೊಳಗೆ ಸಿದ್ಧಾಂತ ಶಿಖಾಮನಿ ಪಾರಾಯಣವಾಗುವ ನಿಟ್ಟಿನಲ್ಲಿ ಶ್ರಮಿಸಬೇಕು ಎಂದು ಹೇಳಿದರು.
ಕಿತ್ತೂರು, ಬಸಾಪುರ, ದೇಮಟ್ಟಿ, ಮಲ್ಲಾಪುರ, ಕೊಟಬಾಗಿ, ಬೈಲೂರ, ನಿಚ್ಚಣಕಿ, ದೇವಗಾಂವ, ಶಿವನೂರ, ಮೆಟ್ಯಾಲ್, ಹೊನ್ನಿದಿಬ್ಬ, ಉಗರಖೋಡ, ಅಂಬಡಗಟ್ಟಿ, ಜಮಳೂರ, ಕಾದ್ರೋಳ್ಳಿ ಸೇರಿ ಸುತ್ತಮುತ್ತಲಿನ ಗ್ರಾಮದ ಜಂಗಮ ಸಮುದಾಯದವರು ಇದ್ದರು. ಶಿಕ್ಷಕ ಪ್ರಭು ಪಾಟೀಲ ನಿರೂಪಿಸಿದರು.