ಜಗತ್ತಿನ ಅತಿಸುಂದರ ಪುರುಷ ಕ್ರಿಷ್

ಕ್ರಿಶ್ ಎಂದೇ ಬಾಲಿವುಡ್ನಲ್ಲಿ ಖ್ಯಾತಿ ಪಡೆದಿರುವ ಹೃತಿಕ್ ರೋಷನ್ ಮೇಲೆ ಇನ್ಮುಂದೆ ಅನೇಕರಿಗೆ ಕ್ರಷ್ ಆದರೂ ಅಚ್ಚರಿ ಏನಿಲ್ಲ. ಏಕೆಂದರೆ, ಅವರೀಗ ಪ್ರಪಂಚದ ಅತ್ಯಂತ ಸುಂದರ ಹತ್ತು ನಟರ ಪೈಕಿ ಒಬ್ಬರೆನಿಸಿಕೊಂಡಿದ್ದಾರೆ!

ಹೌದು. ವಿಶ್ವದ ಅತ್ಯಂತ ಸುಂದರ ಪುರುಷರ ಟಾಪ್ ಟೆನ್ ಪಟ್ಟಿಯಲ್ಲಿ ಹೃತಿಕ್ ರೋಷನ್ಗೆ ಮೂರನೇ ಸ್ಥಾನ. ಇನ್ನೂ ವಿಶೇಷ ಎಂದರೆ ಸೌಂದರ್ಯದ ರೇಸ್ನಲ್ಲಿ ಹಾಲಿವುಡ್ ನಟ ಬ್ರಾಡ್ಪಿಟ್ ಹಾಗೂ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನೂ ಹೃತಿಕ್ ಮೀರಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವ ವೆಬ್ಸೈಟ್ವೊಂದು ಈ ವಿಷಯ ಪ್ರಕಟಿಸಿದೆ. ಅವರ ಅತ್ಯಾಕರ್ಷಕ ರೂಪ, ಬಣ್ಣದಿಂದ ಕೂಡಿದ ಕಣ್ಣು ಸೇರಿ ಒಟ್ಟಾರೆ ವ್ಯಕ್ತಿತ್ವದಿಂದಾಗಿ ಈ ಮನ್ನಣೆಗೆ ಪಾತ್ರರಾಗಿದ್ದಾರೆ ಎನ್ನಲಾಗಿದೆ. ಮೊದಲ ಎರಡು ಸ್ಥಾನದಲ್ಲಿ ಹಾಲಿವುಡ್ ನಟರಾದ ಟಾಮ್ ಕ್ರೂಸ್, ಟ್ವಿಲೈಟ್ ಸ್ಟಾರ್ ರಾಬರ್ಟ್ ಪಟ್ಟಿನ್ಸನ್ ಇದ್ದಾರೆ. ಮೂರನೇ ಸ್ಥಾನದಲ್ಲಿ ಹೃತಿಕ್ ರೋಷನ್ ಇದ್ದರೂ, ಅವರು ಸೆಲೆಬ್ರಿಟಿಗಳಾದ ಜಾನಿ ಡೆಪ್ ಹಾಗೂ ಬ್ರ್ಯಾಡ್ ಪಿಟ್ ಅವರನ್ನು ಹಿಂದಿಕ್ಕಿದ್ದಾರೆ. ಅವರಿಬ್ಬರು ಕ್ರಮವಾಗಿ ನಾಲ್ಕು ಹಾಗೂ ಎಂಟನೇ ಸ್ಥಾನದಲ್ಲಿದ್ದಾರೆ. ಟಾಮ್ ಹಿಡಲ್ಸ್ಟನ್ (5), ಒಮರ್ ಬೊರ್ಕನ್ ಅಲ್ ಗಲಾ (6), ಸಲ್ಮಾನ್ ಖಾನ್ (7), ಹುಹ್ ಜಾಕ್ವುನ್ (9), ಬಿಲ್ಲಿ ಉಂಗರ್ (10) ಪಟ್ಟಿಯಲ್ಲಿ ಇರುವ ಇತರರರು. ಸದಾ ನಗುತ್ತಿರುವುದು, ಇನ್ನೊಬ್ಬರ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಸೌಂದರ್ಯ ಎಂಬುದು ಹೃತಿಕ್ ಅನಿಸಿಕೆ.

– ಏಜೆನ್ಸೀಸ್

Leave a Reply

Your email address will not be published. Required fields are marked *