ಸಿನಿಮಾ

ಜಗತ್ತಿಗೆ ಸಮಾನತೆ ಸಾರಿದ ಬಸವಣ್ಣ


ಯಾದಗಿರಿ: ಜಗತ್ತಿಗೆ ಸಮಾನತೆ ಸಾರಿದ ಬಸವಣ್ಣನವರ ವಚನಗಳು ಸರ್ವಕಾಲಿಕವಾಗಿವೆ ಎಂದು ನೂತನ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ತಿಳಿಸಿದರು.


ಬುಧವಾರ ಸಂಜೆ ನಗರದ ಬಸವೇಶ್ವರ ಗಂಜ್ ಸರ್ಕಲ್ನಲ್ಲಿ ಆಯೋಜಿಸಿದ್ದ ಬಸವ ಜಯಂತಿ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, 12ನೇ ಶತಮಾನದಲ್ಲೇ ಬಸವೇಶ್ವರರು ಅನುಭವ ಮಂಟಪ ಸ್ಥಾಪಿಸಿ ಸಂಸತ್ತಿನ ಪರಿಕಲ್ಪನೆಗೆ ಜೀವ ತುಂಬಿದ್ದರು. ನೂರಾರು ಶರಣ, ಶರಣೆಯರನ್ನು ಒಂದುಗೂಡಿಸಿ ವಚನಗಳ ರಚನೆಗೆ ಅವಕಾಶ ಮಾಡಿಕೊಟ್ಟರು. ಅಲ್ಲದೆ, ಸಮಾಜದಲ್ಲಿ ತಾಂಡವವಾಡುತ್ತಿದ್ದ ಜಾತಿ, ಪದ್ಧತಿಗಳ ದಮನಕ್ಕೆ ತಮ್ಮ ವಚನಗಳ ಮೂಲಕ ದೊಡ್ಡ ಕ್ರಾಂತಿಯನ್ನು ಮಾಡಿದ್ದರು ಎಂದು ಬಣ್ಣಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ಉತ್ಸವ ಅದ್ದೂರಿಯಾಗಿ ನಡೆದಿರಲಿಲ್ಲ. ಯುವ ಜನಾಂಗ ಶರಣರ, ದಾಸರ, ಸೂಫಿ ಸಂತರ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿಮರ್ಾಣಕ್ಕೆ ತಮ್ಮದೆಯಾದ ಕೊಡುಗೆ ನೀಡಬೇಕು ಎಂದು ಸಲಹೆ ನೀಡಿದರು.
ಬಸವೇಶ್ವರ ಭಾವಚಿತ್ರದ ಅದ್ಧೂರಿ ಮೆರವಣಿಗೆ ಗಂಜ್ ವೃತ್ತದಿಂದ ಮೈಲಾಪುರ ಬೇಸ್ ಮೂಲಕ ಅಮೃತೇಶ್ವರ ದೇವಸ್ಥಾನ ತಲುಪಿತು.

ಮಾಜಿ ಶಾಸಕರಾದ ವೆಂಕಟರೆಡ್ಡಿ ಮುದ್ನಾಳ್, ಡಾ.ವೀರಬಸವಂತರೆಡ್ಡಿ ಮುದ್ನಾಳ್, ಪ್ರಮುಖರಾದ ಭೀಮನಗೌಡ ಕ್ಯಾತನಾಳ, ವೆಂಕಟರೆಡ್ಡಿ ಕುರಿಹಾಳ, ಮಲ್ಲಿಕಾಜರ್ುನರೆಡ್ಡಿ ಬಿಳ್ಹಾರ, ಸವಿತಾ ಪಾಟೀಲ್, ಬಸವಂತರೆಡ್ಡಿ ಮಲ್ಹಾರ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ್ ಪಾಟೀಲ್, ಭೀಮರೆಡ್ಡಿ ಕೌಳೂರ, ಮಂಜು ಶಟ್ಟಿ, ಸುಭಾಷ ದೇವದುರ್ಗ ಭರತ, ಶ್ರೀನಾಥ ಜೈನ್, ರಾಕೇಶ ಜೈನ್, ನಾಗೇಶ್ ಸ್ವಾಮಿ, ರಮೇಶ ದೊಡ್ಮನಿ ಇದ್ದರು.

Latest Posts

ಲೈಫ್‌ಸ್ಟೈಲ್