ರಟ್ಟಿಹಳ್ಳಿ: ಅಮರಶಿಲ್ಪಿ ಜಕಣಾಚಾರಿ ಶಿಲಾಮೂರ್ತಿಯನ್ನು ಸರ್ಕಾರವು ಬೇಲೂರಿನ ಚೆನ್ನಕೇಶವ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸಬೇಕು ಎಂದು ವಿಶ್ವಕರ್ಮ ಯುವ ಘಟಕದ ಕಾರ್ಯದರ್ಶಿ ವೀರಬಸಪ್ಪ ಅರ್ಕಚಾರಿ ಒತ್ತಾಯಿಸಿದರು.
ಪಟ್ಟಣದ ಕಾಳಿಕಾಂಬ ದೇವಸ್ಥಾನದಲ್ಲಿ ಬುಧವಾರ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಸಂಸ್ಮರಣೆ ದಿನಾಚರಣೆಯಲ್ಲಿ ಅವರು ಮಾತನಾಡಿದರು. ದೇಶದ ಅನೇಕ ಪ್ರಸಿದ್ಧ ದೇವಾಲಯಗಳಲ್ಲಿ ಜಕಣಾಚಾರಿ ಅವರ ಶಿಲ್ಪಕಲೆ ಕಾಣಬಹುದಾಗಿದೆ. ದೇಶದ ಸಂಸ್ಕೃತಿಯನ್ನು ಶಿಲ್ಪಕಲೆಯ ಮೂಲಕ ಅಜರಾಮರವಾಗಿ ಉಳಿಯುವಂತೆ ಮಾಡಿದ್ದಾರೆ. ಹೀಗಾಗಿ ಯಾವುದಾದರೊಂದು ವಿಶ್ವವಿದ್ಯಾಲಯಕ್ಕೆ ಜಕಣಾಚಾರಿ ಅವರ ಹೆಸರಿಡಬೇಕು. ರಟ್ಟಿಹಳ್ಳಿ ಪಟ್ಟಣದ ಪ್ರಮುಖ ವೃತ್ತಕ್ಕೆ ಅಮರ ಶಿಲ್ಪಿ ಜಕಣಾಚಾರಿ ಎಂದು ನಾಮಕರಣ ಮಾಡಬೇಕು. ಸರ್ಕಾರ ವಿಶ್ವಕರ್ಮ ಸಮಾಜಕ್ಕೆ ನೀಡುವ ಸೌಲಭ್ಯಗಳು ಸಕಾಲಕ್ಕೆ ದೊರೆಯುವಂತಾಗಬೇಕು ಎಂದರು.
ವಿರೂಪಾಕ್ಷಾಚಾರ ಅವರು ಪೂಜಾ ಕೈಂಕರ್ಯ ನೆರವೇರಿಸಿದರು. ಸಮಾಜದ ಮುಖಂಡರಾದ ವೀರಪ್ಪ ಮಾಯಾಚಾರಿ, ಬ್ರಹ್ಮಚಾರಿ ಅರ್ಕಚಾರಿ, ವೀರೇಶ ಅರ್ಕಚಾರಿ, ಕುಮರ ಮಾಯಾಚಾರಿ, ಕುಶಾ ಮಾಯಾಚಾರಿ, ಪತಿಯಪ್ಪ ಮಾಯಾಚಾರಿ, ರಾಘವೇಂದ್ರ ಅರ್ಕಚಾರಿ, ಮಾಲತೇಶಚಾರ ಶಿಲ್ಪಿ, ಮಹೇಶ ನೇಶ್ವಿ, ಮಹೇಂದ್ರ ಶಿರಗಂಬಿ, ಸುನಿಲ ಮಾಯಾಚಾರಿ, ರವಿ ಮಾಯಾಚಾರಿ, ಲವಾ ಮಾಯಾಚಾರಿ, ಸಂತೋಷ ಅರ್ಕಚಾರಿ, ರಮೇಶ ಮಾಯಾಚಾರಿ, ಮಹಿಳಾ ಘಟಕದ ಸುಧಾ ಅರ್ಕಚಾರಿ, ಲತಾ ಅರ್ಕಚಾರಿ, ಪುಷ್ಪ ಮಾಯಾಚಾರಿ, ಕವಿತಾ ಅರ್ಕಚಾರಿ, ರೇಣುಕಾ ಮಾಯಾಚಾರಿ ಇತರರು ಇದ್ದರು.