More

  ಜಂಗಮರಿಂದ ಧಾರ್ವಿುಕ ಪರಂಪರೆ ರಕ್ಷಣೆ

  ಹೊಳೆಆಲೂರ: ಜಂಗಮರು ರೇಣುಕಾಚಾರ್ಯರ ಕಾಲದಿಂದಲೂ ನಾಡಿನ ವೈವಿಧ್ಯಮಯ ಸಂಸ್ಕೃತಿ, ಧಾರ್ವಿುಕ ಪರಂಪರೆಯನ್ನು ರಕ್ಷಿಸುವುದರ ಜತೆಗೆ ಸಮಾಜಕ್ಕೆ ಗುರುವಿನ ಸ್ಥಾನದಲ್ಲಿ ನಿಂತು ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ, ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದೆ ಎಂದು ಅಸೂಟಿ ಹಿರೇಮಠದ ರೇವಣಸಿದ್ಧೇಶ್ವರ ಸ್ವಾಮೀಜಿ ಹೇಳಿದರು.
  ರೋಣ ತಾಲೂಕು ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಭಾನುವಾರ ಅಸೂಟಿಯಲ್ಲಿ ಆಯೋಜಿಸಿದ್ದ ಸಂಘದ ನೂತನ ತಾಲೂಕು ಪದಾಧಿಕಾರಿಗಳ ಪದಗ್ರಹಣ, ಕಾನೂನು ಅರಿವು ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಸ್ವಾತಂತ್ರ್ಯ ಪೂರ್ವದಿಂದಲೂ ಆರ್ಥಿಕವಾಗಿ ಹಿಂದುಳಿದ ಜಂಗಮರಿಗೆ ಮೀಸಲಾತಿ ಕಲ್ಪಿಸಲಾಗಿದೆ. 1951ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಜಂಗಮರಿಗೆ ಮೀಸಲಾತಿಯ ಹಕ್ಕು ದಯಪಾಲಿಸಿದ್ದರೂ, ವಿನಾಕಾರಣ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಜಂಗಮರ ಬೆಳವಣಿಗೆಗೆ ಅಡ್ಡಗಾಲು ಹಾಕುತ್ತಿವೆ. ರಾಜ್ಯದ 60 ವಿಧಾನ ಸಭಾ ಕ್ಷೇತ್ರದಲ್ಲಿ ನಿರ್ಣಾಯಕ ಸ್ಥಾನದಲ್ಲಿರುವ ಜಂಗಮರು ಅಧಿವೇಶನದಲ್ಲಿ ಸಮಾಜದ ಪರವಾಗಿ ಮಾತನಾಡುವಂತೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಬೇಕು. ಸಮಾಜದ ನೋವಿಗೆ ಸ್ಪಂದಿಸದ ಜನಪ್ರತಿನಿಧಿಗಳನ್ನು ಚುನಾವಣೆಯಲ್ಲಿ ಪಕ್ಷ ಭೇದ ಮರೆತು ಬಹಿಷ್ಕರಿಸಬೇಕು ಎಂದರು.
  ಸಾನ್ನಿಧ್ಯ ವಹಿಸಿದ್ದ ಬೆನಹಾಳದ ಸದಾಶಿವ ಮಹಾಂತ ಸ್ವಾಮೀಜಿ ಮಾತನಾಡಿ, ಸಮಾಜ ಬದಲಾದ ಕಾಲಕ್ಕೆ ಧಾರ್ವಿುಕ ಆಚರಣೆಯ ಜತೆಗೆ ಮಕ್ಕಳಿಗೆ ಉತ್ತಮ ಶಿಕ್ಷಣ, ಉದ್ಯೋಗದತ್ತ ಗಮನಹರಿಸಬೇಕು. ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಾಗಿರುವವರಿಗೆ ಉಳ್ಳವರು ಸಹಾಯ ಮಾಡಬೇಕು ಎಂದರು.
  ಸವದತ್ತಿ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯರು, ಬದಾಮಿ ನವಗ್ರಹ ಹಿರೇಮಠದ ಶಿವಪೂಜಾ ಶಿವಾಚಾರ್ಯರು, ಕೊತಬಾಳ ಅಂಕಲಗಿ ಅಡವಿಸಿದ್ಧೇಶ್ವರ ಮಠದ ಗಂಗಾಧರ ಸ್ವಾಮೀಜಿ, ಜಿಗೇರಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಮುದೇನಗುಡಿಯ ಚನ್ನಯ್ಯ ಸ್ವಾಮೀಜಿ, ಚನ್ನಯ್ಯ ಸೋಮನಕಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ವಿ.ಎಸ್. ಹಿರೇಮಠ, ವಿ.ಬಿ. ಸೋಮನಕಟ್ಟಿಮಠ, ಡಾ.ಶಿವಪ್ರಕಾಶ ಹಿರೇಮಠ, ಮೆಣಸಗಿಯ ರವೀಂದ್ರ ಹಿರೇಮಠ, ಜಿಲ್ಲಾ ಬೇಡ ಜಂಗಮ ಅಧ್ಯಕ್ಷ ಸಿದ್ರಾಮಯ್ಯ ಕಟಗಿಹಳ್ಳಿಮಠ, ಕೆ.ಸಿ.ಪಾಟೀಲ, ಜಗದೀಶಯ್ಯ ಹಿರೇಮಠ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts