ಚಿತ್ರದುರ್ಗ: ಎಸ್‌ಜೆಎಂ ಕಾನೂನು ಮಹಾವಿದ್ಯಾಲಯದಲ್ಲಿ ಈಚೆಗೆ ಮುಕ್ತಾಯಗೊಂಡು ಚೆಸ್ ಅಂತಿಮ ಪಂದ್ಯದಲ್ಲಿ ಪುರುಷರ ವಿಭಾಗದಲ್ಲಿ ಹುಬ್ಬಳ್ಳಿ ರಾಜ್ಯ ಕಾನೂನು ಶಾಲೆ, ಮಹಿಳಾ ವಿಭಾಗದಲ್ಲಿ ಬೆಂಗಳೂರಿನ ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಆಫ್ ಲಾ-ಪ್ರಥಮ ಬಹುಮಾನ ಮುಡಿಗೇರಿಸಿಕೊಂಡವು.
ಮಹಾವಿದ್ಯಾಲಯ, ಹುಬ್ಬಳ್ಳಿ ರಾಜ್ಯ ಕಾನೂನು ಮಹಾವಿದ್ಯಾಲಯದಿಂದ ನಡೆದ ಅಂತರ ಮಹಾವಿದ್ಯಾಲಯ ಚೆಸ್ ಪಂದ್ಯಾವಳಿ, ಆಯ್ಕೆ ಪ್ರಕ್ರಿಯೆ ಕ್ರೀಡಾಪಟುಗಳಲ್ಲೂ ಉತ್ಸಾಹ ಮೂಡಿಸಿತು.
ಕಾನೂನು ಕಾಲೇಜು: ಪುರುಷರ ವಿಭಾಗದಲ್ಲಿ ಬೆಂಗಳೂರಿನ ಎಂ.ಎಸ್.ರಾಮಯ್ಯ ದ್ವಿತೀಯ, ವಿಜಯಪುರದ ಅಂಜುಮನ್ ತೃತೀಯ, ವಿವೇಕಾನಂದ ನಾಲ್ಕನೇ ಸ್ಥಾನ ಪಡೆದುಕೊಂಡಿತು.
ಮಹಿಳಾ: ಪುತ್ತೂರು ವಿವೇಕಾನಂದ ದ್ವಿತೀಯ, ಹುಬ್ಬಳ್ಳಿ ತೃತೀಯ, ಮಂಗಳೂರಿನ ಎಸ್‌ಡಿಎಂ ನಾಲ್ಕನೇ ಸ್ಥಾನ ಪಡೆಯಿತು.
73 ಪುರುಷ, 19 ಮಹಿಳಾ ತಂಡಗಳು ಪಾಲ್ಗೊಂಡಿದ್ದವು. ಡಾ.ಬಸವಪ್ರಭು ಶ್ರೀ ಸಾನ್ನಿಧ್ಯ ವಹಿಸಿದ್ದರು. ವಕೀಲ ಉಮೇಶ್, ಪ್ರಾಚಾರ್ಯರಾದ ಡಾ.ಎಲ್.ಈಶ್ವರಪ್ಪ, ಡಾ.ಎಸ್.ದಿನೇಶ್, ಕಾಲೇಜಿನ ಸಹ ಪ್ರಾಧ್ಯಾಪಕರಾದ ಸುಮನಾ ಎಸ್ ಅಂಗಡಿ, ಕರಕಪ್ಪ, ರೂಪಾ, ಗಿರೀಶ್, ಸ್ಮಿತಾ, ಗ್ರಂಥಪಾಲಕ ಸಂದೀಪ್‌ಕುಮಾರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶಕ್ತಿಪ್ರಸಾದ್, ಡಾ.ಕುಮಾರಸ್ವಾಮಿ ಇತರರಿದ್ದರು.