ಚೆಕ್ ಗಣರಾಜ್ಯದಿಂದ ಆಗಮನ

ಶಿರಸಿ: ಜೆಕ್ ಗಣರಾಜ್ಯದಲ್ಲಿ ವಿಜ್ಞಾನಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಇಲ್ಲಿಯ ಪ್ರಗತಿನಗರದ ಸೌಮ್ಯಾ ಮಾಲಿನಿ ಶ್ರೀಧರ ಮತ್ತು ವಿನೀತ್ ಗೋಖಲೆ ಮತದಾನ ಮಾಡಲು ಸ್ವದೇಶಕ್ಕೆ ಆಗಮಿಸಿದ್ದಾರೆ. ಹುಟ್ಟೂರಿಗೆ ಆಗಮಿಸಲು ಸಮಯ ಸಿಗುವುದಿಲ್ಲ. ಬಂದರೂ ರಜೆ ಮುಗುತ್ತಿದ್ದಂತೆಯೇ ವಾಪಸು ಹೋಗಬೇಕಾಗುತ್ತದೆ. ಈ ಬಾರಿ ರಜೆ ಕಳೆಯಲು ಹುಟ್ಟೂರಿಗೆ ಆಗಮಿಸುವವರಿದ್ದೆವು. ಚುನಾವಣೆ ಇರುವುದರಿಂದ ಮುಂಚಿತವಾಗಿ ಆಗಮಿಸಿ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ರಾಷ್ಟ್ರದ ಭವಿಷ್ಯದ ದೃಷ್ಟಿಯಿಂದ ಪ್ರತಿ ಮತವೂ ಮುಖ್ಯವಾಗುತ್ತದೆ. ನಾವೂ ಈ ಮಹತ್ವದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದೇವೆ ಎಂಬ ಹೆಮ್ಮೆ ಮೂಡುತ್ತಿದೆ’ ಎನ್ನುತ್ತಾರೆ ಸೌಮ್ಯಾ. ಪ್ರಗತಿನಗರ ಮತಗಟ್ಟೆಯಲ್ಲಿ ಅವರು ಹಕ್ಕು ಚಲಾಯಿಸಲಿದ್ದಾರೆ.

Leave a Reply

Your email address will not be published. Required fields are marked *