ಚೆಕ್​ಪೋಸ್ಟ್ ಪರಿಶೀಲಿಸಿದ ಡಿಸಿ

 

ದೊಡ್ಡಬಳ್ಳಾಪುರ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಆರೂಢಿಯಲ್ಲಿ ಸ್ಥಾಪಿಸಿರುವ ಚೆಕ್​ಪೋಸ್ಟ್​ಗೆ ಭಾನುವಾರ ಜಿಲ್ಲಾಧಿಕಾರಿ ಕರೀಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಕರೀಗೌಡ ಖಾಸಗಿ ವಾಹನದ ಮೂಲಕ ಚೆಕ್​ಪೋಸ್ಟ್ ಹಾದು ಹೋದರು ಸಿಬ್ಬಂದಿ ಕಾರನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಲಿಲ್ಲ. ಚೆಕ್​ಪೋಸ್ಟ್ ದಾಟಿದ ನಂತರ ಕಾರಿನಿಂದ ಇಳಿದು ಬಂದು ಡಿಸಿ, ಸಿಬ್ಬಂದಿ ತರಾಟೆಗೆ ತೆಗೆದುಕೊಂಡರು. ಚೆಕ್​ಪೋಸ್ಟ್ ಮೂಲಕ ಹಾದು ಹೋಗುವ ಬೈಕ್ ಸೇರಿ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ನಡೆಸಬೇಕು. ಯಾವುದೇ ದೂರು ಬಂದರೆ ಹಾಗೂ ತಪಾಸಣೆಯಲ್ಲಿ ಲೋಪ ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.