ಚುನಾವಣೆ ಬಹಿಷ್ಕಾರದ ಎಚ್ಚರಿಕೆ

ದಾಂಡೇಲಿ: ಕುಡಿಯುವ ನೀರು ಸರಬರಾಜು ಮಾಡುವ ನಗರಸಭೆ ನೀರಿನ ಕರವನ್ನು 120ರಿಂದ 180 ರೂ.ಗೆ ಹೆಚ್ಚಿಸಿರುವುದನ್ನು ಖಂಡಿಸಿ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕಾರ್ವಿುಕ ನಗರವಾದ ದಾಂಡೇಲಿಯಲ್ಲಿ ಬಡ ಕುಟುಂಬಗಳೇ ಹೆಚ್ಚಾಗಿವೆ. ದಿನಕ್ಕೆ 2 ತಾಸು ನೀರು ಬಿಡುತ್ತಿರುವ ನಗರಸಭೆ, ನೀರಿನ ಕರ ಹೆಚ್ಚಿಸಿರುವುದು ಅವೈಜ್ಞಾನಿಕವಾಗಿದೆ. ದಾಂಡೇಲಿ ಸಮಗ್ರ ಅಭಿವೃದ್ಧಿಗಾಗಿ ಈ ಹಿಂದೆ ನೇಮಿಸಲ್ಪಟ್ಟ ಮಹೇಂದ್ರ ಜೈನ್ ಆಯೋಗ ನೀಡಿದ ವರದಿ ಜಾರಿಗೆ ಬಂದಿಲ್ಲ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಲೋಕಸಭೆ ಚುನಾವಣೆಗೆ ಬಹಿಷ್ಕಾರದ ಕರೆ ನೀಡಬೇಕಾಗುತ್ತದೆ ಎಂದು ಸಮಿತಿ ಸದಸ್ಯರು ಎಚ್ಚರಿಸಿದ್ದಾರೆ. ಸಮಿತಿ ಅಧ್ಯಕ್ಷ ಅಕ್ರಮ ಖಾನ್ ನೇತೃತ್ವದಲ್ಲಿ ಫೀರೋಜ್ ಪೀರಜಾದೆ, ಅಶೋಕ ಪಾಟೀಲ, ಸಮಿತಿಯ ಸದಸ್ಯರು ಇದ್ದರು