Monday, 17th December 2018  

Vijayavani

ಸುಳ್ವಾಡಿ ವಿಷಪ್ರಸಾದ ದುರಂತ ಪ್ರಕರಣ-ಆರೋಗ್ಯ ಸಚಿವರ ಉಡಾಫೆ ಹೇಳಿಕೆ ಪ್ರಸ್ತಾಪ-ಪರಿಷತ್​ನಲ್ಲಿ ಬಿಜೆಪಿಯಿಂದ ನಿಲುವಳಿ ಸೂಚನೆ        ಶುರುವಾಯ್ತು ಪೆಥಾಯ್ ಪ್ರತಾಪ-ಆಂಧ್ರ, ತಮಿಳುನಾಡು ಕರಾವಳಿಯಲ್ಲಿ ಅಲೆಗಳ ಅಬ್ಬರ-ಚೆನ್ನೈ ಸೇರಿ ಹಲವೆಡೆ ಭಾರಿ ಮಳೆ ಸಾಧ್ಯತೆ        ಒಂದೇ ರಸ್ತೆ, ಎರಡು ಇಲಾಖೆ ಬಿಲ್-ಭೂಸೇನೆ, ಪಿಡಬ್ಲ್ಯೂಡಿ ಇಲಾಖೆ ಬಿಲ್​​ಗಾಗಿ ಪೈಪೋಟಿ-ಮುಗಿದ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಕೈ ಶಾಸಕ        ಇನ್ನೂ ನಿಂತಿಲ್ಲ ‘ವಿಷ’ಪ್ರಸಾದದ ಎಫೆಕ್ಟ್-ಚಿಕಿತ್ಸೆ ಪಡೀತಿರೋ 30 ಜನ್ರ ಸ್ಥಿತಿ ಗಂಭೀರ-ಆರೋಪಿತರ ಪರ ವಕಾಲತ್ತು ವಹಿಸದಿರಲು ವಕೀಲರ ನಿರ್ಧಾರ        ಇಂದು 3 ರಾಜ್ಯ ಸಿಎಂಗಳ ಪದಗ್ರಹಣ-ರಾಜ್ಯದಿಂದ ಸಿಎಂ ಎಚ್​ಡಿಕೆ, ಸಿದ್ದುಗೆ ವಿಶೇಷ ಆಹ್ವಾನ-ಕೈ ಸಮಾರಂಭದಲ್ಲಿ ತೃತೀಯ ಶಕ್ತಿ ಪ್ರದರ್ಶನ        37ನೇ ವಸಂತಕ್ಕೆ ‘ಉಗ್ರಂ’ ಸ್ಟಾರ್ ಮುರಳಿ-37ನೇ ಬರ್ತಡೇ.. 37 ಕೆಜಿ ಕೇಕ್ ಕಟ್-ಫ್ಯಾನ್ಸ್​​ಗೆ ಭರಾಟೆ ಟೀಸರ್, ಮದಗಜ ಫಸ್ಟ್ ಪೋಸ್ಟರ್ ಗಿಫ್ಟ್       
Breaking News

ಚುನಾವಣೆಯೋ ಸುಧಾರಣೆಯೋ?

Monday, 29.01.2018, 3:02 AM       No Comments

ಭಾರತದಲ್ಲಿ ಕ್ರಾಂತಿಕಾರಕ ಎನ್ನಬಹುದಾದ ಆರ್ಥಿಕ ಸುಧಾರಣೆಗಳಾಗುತ್ತಿದ್ದು, ದೇಶದ ಆರ್ಥಿಕತೆಯನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯಪ್ರವೃತ್ತವಾಗಿದೆ. ಬಜೆಟ್​ನಲ್ಲಿ ಈ ಬಗ್ಗೆ ಹಲವು ಘೋಷಣೆ ಪ್ರಕಟವಾಗುವ ಸಾಧ್ಯತೆಗಳಿವೆ. ರಫ್ತು ಮತ್ತು ಕಾರ್ವಿುಕ ಕ್ಷಮತೆಯ ವಲಯಗಳನ್ನು ಸ್ಪರ್ಧಾತ್ಮಕವಾಗಿಸುವುದು ಇಂದಿನ ಅಗತ್ಯವಾಗಿದೆ.

 

|ಶರಣ್ ಸಿ. ಪಾಟೀಲ್

ದೇಶ ಮತ್ತೊಂದು ಬಜೆಟ್ ಅನ್ನು (2018-19) ಎದುರು ನೋಡುತ್ತಿದೆ. ಆರ್ಥಿಕ ಶಿಸ್ತು, ಬಂಡವಾಳ ಹಿಂತೆಗೆತದ ಹೆಚ ್ಚ ಮತ್ತು ಕಾರ್ವಿುಕ ಸುಧಾರಣೆಗಳು ಸೇರಿದಂತೆ ಆರ್ಥಿಕತೆಂåುನ್ನು ಸದೃಢಗೊಳಿಸುವ ಕ್ರಮಗಳು ಬಜೆಟ್​ನಲ್ಲಿ ಸರ್ಕಾರದ ಆದ್ಯತಾ ಪಟ್ಟಿಂåುಲ್ಲಿ ಸೇರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕಳೆದ ಕೆಲವು ವರ್ಷಗಳಿಂದ ಹಲವಾರು ಆರ್ಥಿಕ ಸುಧಾರಣೆಗಳನ್ನು ಜಾರಿಗೊಳಿಸಿದೆ. ಭಾರತದ ಮಟ್ಟಿಗೆ ಕ್ರಾಂತಿಕಾರಕ ಎನ್ನಬಹುದಾದ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಈ ಮೂಲಕ ತನ್ನನ್ನು ಸುಧಾರಣಾವಾದಿ ಸರ್ಕಾರವೆಂದು ಬಿಂಬಿಸಿಕೊಂಡಿದೆ. ಆದರೆ ಈ ಬಾರಿಯ ಬಜೆಟ್​ನಲೂ ್ಲ ಸಹ ಇಂತಹ ಕಠಿಣ ನಿರ್ಧಾರಗಳನ್ನು ಕೈಗೊಳ್ಳುತ್ತಾರಾ? ಕಾದು ನೋಡಬೇಕು. 2019ರಲ್ಲಿ ಲೋಕಸಭೆಗೆ ಚುನಾವಣೆ ನಡೆಂåುಬೇಕಿದೆ ಮತ್ತು ಮತದಾರರನ್ನು ಸಂತುಷ್ಟಿಪಡಿಸಲು ಹಲವಾರು ಜನಪ್ರಿಂåು ಕಾರ್ಯಕ್ರಮಗಳನ್ನು ಘೊಷಿಸಲು ಇದು ಸಕಾಲ. ಒಟ್ಟಾರೆ ಹೇಳುವುದಾದರೆ 2018-19ರ ಬಜೆಟ್​ನಲ್ಲಿ ಸರ್ಕಾರದ ಪರೀಕ್ಷೆಂåಾಗಲಿದೆ. ಮೋದಿಯವರು ಗುಜರಾತಿನ ಮುಖ್ಯಮಂತ್ರಿಂåಾಗಿದ್ದಾಗ ಹಲವಾರು ಆರ್ಥಿಕ ಸುಧಾರಣೆಗಳನ್ನು ತಂದು ತಮ್ಮದು ಸುಧಾರಣಾವಾದಿ ಸರ್ಕಾರ ಎಂದೇ ಬಿಂಬಿಸಿಕೊಂಡಿದ್ದರು. ಚುನಾವಣೆ ವರ್ಷವಿರಲಿ ಇಲ್ಲದಿರಲಿ ಆರ್ಥಿಕ ಶಿಸ್ತನ್ನು ತಪ್ಪದೇ ಕಾಪಾಡಿಕೊಂಡು ಬಂದಿದ್ದರು. ಮತದಾರರನ್ನು ಓಲೈಸಲು ಆಮಿಷಗಳನ್ನು ಒಡ್ಡಿರಲಿಲ್ಲ. ಈ ಹಿನ್ನೆಲೆಂåುಲ್ಲಿ 2018-19ರ ಬಜೆಟ್ ಜನಪ್ರಿಂåು ಮತ್ತು ಸುಧಾರಣಾ ಬಜೆಟ್​ಗಳ ಮಿಶ್ರಣವಾಗಿರಲಿದೆ ಎಂದು ನಾವು ಭಾವಿಸಬಹುದು. ವಿಶ್ವದ ಆರ್ಥಿಕ ಅನಿಶ್ಚಿತತೆಗಳು ಮತ್ತು ಮಂದಗತಿಂåು ಅಭಿವೃದ್ಧಿ ದರದ ನಡುವೆಂåುೂ ಭಾರತೀಯ ಆರ್ಥಿಕತೆ ಉತ್ತಮ ಎನ್ನಬಹುದಾದ ಸಾಧನೆ ತೋರಿದೆ. ಜೂನ್ 2016ರವರೆಗೂ ಭಾರತೀಯ ಆರ್ಥಿಕತೆ ಸದೃಢವಾಗಿ ಬೆಳೆಂåುುತ್ತಿತ್ತು. ದೇಶದ ಒಟ್ಟಾರೆ ಆಂತರಿಕ ಉತ್ಪನ್ನ (ಜಿಡಿಪಿ) 2017-18ರ ಮೊದಲ ತ್ರೖೆಮಾಸಿಕದಲ್ಲಿ ಗರಿಷ್ಠ ಮುಖಬೆಲೆಂåು ನೋಟುಗಳ ಅಮಾನ್ಯೀಕರಣ ಮತ್ತು ಕ್ರಾಂತಿಕಾರಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ಜಾರಿಯಿಂದಾಗಿ ಹದಿಮೂರು ತಿಂಗಳುಗಳಲ್ಲಿಯೇ ಅತ್ಯಂತ ಕಡಿಮೆ ಮಟ್ಟಕ್ಕೆ ಅಂದರೆ ಶೇ. 5.7ಕ್ಕೆ ಕುಸಿಯಿತು.

ಆದರೂ ಇದು ಆರ್ಥಿಕತೆಂåು ಮೇಲೆ ಹೆೆಚ್ಚೇನೂ ಪರಿಣಾಮ ಬೀರಲಿಲ್ಲ. ಆರ್ಥಿಕತೆಂåುು ಈಗಾಗಲೇ ಚೇತರಿಕೆಂåು ಹಾದಿಂåುಲ್ಲಿದೆ. ಇತಿ ೕಚೆಗೆ ಜಿಎಸ್​ಟಿ ದರಗಳಲ್ಲಿ ಆಗಿರುವ ಹೊಂದಾಣಿಕೆಯೇ ಇದಕ್ಕೆ ಸಾಕ್ಷಿ. ಇದರಿಂದ ಸರಕುಗಳ ಬೆಲೆ ಒಟ್ಟಾರೆಯಾಗಿ ಇಳಿಂåುಲಿದೆ. ಬೇಡಿಕೆಂåುೂ ಏರಲಿದೆ. ಅಲ್ಲದೆ, ಜಿಎಸ್​ಟಿಯ ಸರಳೀಕರಣ ಮತ್ತು ರಿಯಾಯಿತಿಯನ್ನು ಈ ಬಜೆಟ್ಟಿನಲ್ಲಿಂåುೂ ಮುಂದುವರಿಸುವ ನಿರೀಕ್ಷೆ ಇದೆ. ಒಟ್ಟಿನಲ್ಲಿ ಹೇಳುವುದಾದರೆ, ಸರ್ಕಾರ ಆರ್ಥಿಕ ಸುಧಾರಣೆಗೆ ಕಟಿಬದ್ಧವಾಗಿರುವುದರಿಂದ ಸ್ಥೂಲ ಬದಲಾವಣೆಗಳಿಗೆ ಮತ್ತೆ ನೆಲೆ ಸಿಗಲಿದೆ. ರಿಟೇಲ್ ವಲಂåುದಲ್ಲಿ ಶೇಕಡಾ ನೂರರಷ್ಟು ವಿದೇಶಿ ಬಂಡವಾಳಕ್ಕೆ ಅವಕಾಶ ಮತ್ತು ನಿರ್ಮಾಣ ವಲಯಕ್ಕೆ ಹೊಸ ಚೈತನ್ಯ ಸಿಕ್ಕಿರುವುದು ಸೇರಿದಂತೆ ಹೊಸ ಸುಧಾರಣೆಗಳು ಹಣ ಹೂಡಿಕೆದಾರರಿಗೆ ಸರಿಂåಾದ ಸಂಕೇತಗಳನ್ನೇ ರವಾನಿಸಿವೆ. 2018-19ರ ಆರ್ಥಿಕ ವರ್ಷದಲ್ಲಿ ಉದ್ಯಮ ಕೇಂದ್ರಿತ ಬೆಳವಣಿಗೆಂåೊಂದಿಗೆ ಉತ್ಪಾದನೆ ಮತ್ತು ರಫ್ತು ವಲಯಗಳ ಸದೃಢತೆ ಮತ್ತು ಕಾರ್ವಿುಕ ಕ್ಷಮತೆಂåು ವಲಯಗಳನ್ನು ಮತ್ತಷ್ಟು ಸ್ಪರ್ಧಾತ್ಮಕವಾಗಿಸುವುದು ಮುಖ್ಯವಾಗಲಿದೆ. ಇದರ ಜತೆಗೆ ಗ್ರಾಮೀಣ ಆರ್ಥಿಕತೆಂåು ಮೂಲಸೌಕಂåರ್ು ಸುಧಾರಣೆ, ಕೈಗೆಟುಕುವ ದರಗಳಲ್ಲಿ ಮನೆಗಳ ಲಭ್ಯತೆ ಮತ್ತು ಕೃಷಿ ಉತ್ಪನ್ನ ಪ್ರಮಾಣವನ್ನು ಹೆಚ್ಚಿಸಲು ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.

ಲೇಖಕರು: ವ್ಯವಸ್ಥಾಪಕ ನಿರ್ದೇಶಕರು, ಇನ್​ಸ್ಪೈರ್ ಇಂಡಿಯಾ (ಹಣಕಾಸು ಸಲಹಾ ಸಂಸ್ಥೆ)

Leave a Reply

Your email address will not be published. Required fields are marked *

Back To Top