ಶೃಂಗೇರಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ನಮಗೆಲ್ಲರಿಗೂ ಸಂವಿಧಾನದ ನೀಡಿದ ಅತ್ಯಮೂಲ್ಯ ಹಕ್ಕು. ದೇಶದ ಅಭಿವದ್ಧಿಗಾಗಿ ಯುವಪೀಳಿಗೆ ಅರ್ಹರನ್ನು ಆಯ್ಕೆ ಮಾಡುವುದು ಗುರುತರ ಜವಾಬ್ದಾರಿ ಎಂದು ತಹಸೀಲ್ದಾರ್ ಅನುಪ್ ಸಂಜೋಗ್ ತಿಳಿಸಿದರು.
ಜೆಸಿಬಿಎಂ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ,
ಚುನವಣಾ ಪ್ರಕ್ರಿಯೆ ಸಂದರ್ಭದಲ್ಲಿ ಸಮಯ ವ್ಯರ್ಥ ಮಾಡುವುದು ಏಕೆ? ಎಂಬ ಯೋಚನೆಯಿಂದ ಹಲವರು ಮತ ಚಲಾಯಿಸದೆ ಕಾಲ ಕಳೆಯುತ್ತಾರೆ. ಮತದಾರರಿಗೆ ಮತದ ಹಕ್ಕಿನ ಕುರಿತು ಅರಿವು ಮೂಡಿಸಲು ರಾಷ್ಟ್ರೀಯ ಮತದಾರರ ದಿನ ಆಚರಿಸಲಾಗುತ್ತಿದೆ ಎಂದರು.
18 ವರ್ಷತುಂಬಿದವರು ಮತದಾನದ ಹಕ್ಕು ಪಡೆದಿದ್ದು, ಮತದಾರರ ಪಟ್ಟಿಯಲ್ಲಿ ನೋಂದಾಯಿಸಿಕೊಳ್ಳಬೇಕು. ದೇಶದ ಪ್ರಗತಿಗೆ ಪ್ರತಿಯೊಬ್ಬರೂ ಮತ ಚಲಾಯಿಸಬೇಕು. ರಾಷ್ಟ್ರದ ಭವಿಷ್ಯ ರೂಪಿಸುವ ಜವಾಬ್ದಾರಿ ಸರ್ವರ ಮೇಲಿದೆ ಎಂದರು.
ತಾಲೂಕಿನ ಅಡ್ಡಗದ್ದೆ ಗ್ರಾಪಂನ ಸಭಾಂಗಣದಲ್ಲಿ ಪಿಡಿಒ ಪ್ರಮೋದ್ ಹಾಗೂ ಸಿಬ್ಬಂದಿ ಮತದಾರರ ಜಾಗೃತಿ ಅಭಿಯಾನ ನಡೆಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ತಾಪಂ ಇಒ ಸುದೀಪ್, ಉಪತಹಸೀಲ್ದಾರ್ ಪ್ರವೀಣ್‌ಕುಮಾರ್, ಅನಿಲ್‌ಕುಮಾರ್, ಡಾ.ಎಂ.ಸ್ವಾಮಿ, ಪ್ರಶಾಂತ್, ಸಂತೋಷ್ ಇದ್ದರು.