ಚುನಾವಣಾ ಕರ್ತವ್ಯಕ್ಕೆ 1042 ಸಿಬ್ಬಂದಿ

ಸೊರಬ: ಚುನಾವಣಾ ಸಿಬ್ಬಂದಿ ಸೋಮವಾರ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಇವಿಎಂಗಳೊಂದಿಗೆ ಮತಗಟ್ಟೆಗೆ ತೆರಳಿದರು. ತಾಳಗುಪ್ಪ ಹೋಬಳಿ ಸೇರಿ ತಾಲೂಕಿನಲ್ಲಿ 239 ಮತಗಟ್ಟೆಗಳಿದ್ದು 1042 ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಒಟ್ಟು 60 ರೂಟ್​ಗಳಿದ್ದು ಸಿಬ್ಬಂದಿ ಕರೆದೊಯ್ಯಲು 39 ಕೆಎಸ್​ಆರ್​ಟಿಸಿ ಬಸ್, 29 ಜೀಪ್ ವ್ಯವಸ್ಥೆ ಮಾಡಲಾಗಿದೆ. ಈ ಬಾರಿ ಬಿಸಿಲಿನ ತಾಪ ಹೆಚ್ಚಾಗಿದ್ದು ಇದೇ ಮೊದಲ ಬಾರಿಗೆ ಪ್ರತಿ ಮತಗಟ್ಟೆಗೆ ಮತ ಹಾಕಲು ಬರುವ ಮತದಾರರಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ದೃಷ್ಟಿಯಿಂದ ಒಂದು ಮತಗಟ್ಟೆಗೆ 20 ಲೀ.ನ 2 ಕ್ಯಾನ್​ಗಳ ವ್ಯವಸ್ಥೆ ಮಾಡಲಾಗಿದೆ. ಸಿಬ್ಬಂದಿಗೂ ನೀರಿನ ವ್ಯವಸ್ಥೆ ಮಾಡಲಾಗಿದೆ. ತಾಳಗುಪ್ಪ ಹೋಬಳಿ ಸೇರಿ ತಾಲೂಕಿನಲ್ಲಿ 95,276 ಪುರುಷ ಹಾಗೂ 92,479 ಮಹಿಳೆಯರು ಸೇರಿ ಒಟ್ಟು 1,87,765 ಮತದಾರರು ಮತ್ತು 10 ತೃತೀಯ ಲಿಂಗಿಗಳಿದ್ದಾರೆ. 21 ಅತಿ ಸೂಕ್ಷ್ಮ, 44 ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಈ ಬಾರಿ ಕಳೆದ ಲೋಕಸಭಾ ಚುನಾವಣೆಗಿಂತ 3072 ಹೆಚ್ಚು ಮತದಾರರು ಸೇರ್ಪಡೆಗೊಂಡಿದ್ದಾರೆ. ಸೊರಬದ ಕಾನಕೇರಿ ಬೂತ್ 147 ಮತ್ತು ಕೆರೆಕೊಪ್ಪದ ಬೂತ್ 100ರಲ್ಲಿ ಸಖಿ ಮತಗಟ್ಟೆ ಸ್ಥಾಪಿಸಲಾಗಿದೆ. 2 ಡಿವೈಎಸ್ಪಿ, 4 ಸಿಪಿಐ, 20 ಪಿಎಸ್​ಐ, 1 ಎಎಸ್​ಐ, 159 ಎಚ್​ಇಪಿಸಿ, 157 ಹೋಮ್ಾರ್ಡ್ಸ್, 2 ಕೆಎಸ್​ಆರ್​ಪಿ ತುಕಡಿ ಹಾಗೂ 3 ಡಿಎಆರ್ ಸೇರಿ ಒಟ್ಟು 343 ಪೊಲೀಸ್ ಸಿಬ್ಬಂದಿ ರಕ್ಷಣೆಗೆ ನಿಯೋಜಿಸಲಾಗಿದೆ.