ಪಾಂಡವಪುರ : ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪಬ್ಲಿಕ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವತಿಯಿಂದ ಸೋಮವಾರ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ 2024-25 ಕಾರ‌್ಯಕ್ರಮ ನಡೆಯಿತು.
ಗ್ರಾಪಂ ಸದಸ್ಯ ಸಿ.ಶಿವಕುಮಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಕಾರ‌್ಯಕ್ರಮಕ್ಕೆ ಚಾಲನೆ ನೀಡಿದರು.
ಬಿಇಒ ರವಿಕುಮಾರ್ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿರುವ ವಿದ್ಯಾರ್ಥಿಗಳು ಸೋಲು-ಗೆಲುವು ಎರಡನ್ನೂ ಸಮಾನವಾಗಿ ತೆಗೆದುಕೊಳ್ಳಬೇಕು, ತೀರ್ಪುಗಾರರ ಆತ್ಮಸಾಕ್ಷಿಗೆ ಅನುಗುಣವಾಗಿ ಕೆಲಸ ಮಾಡಬೇಕು. ಯಾವುದೇ ಗೊಂದಲ ಮಾಡಿಕೊಳ್ಳದೆ ತಾಳ್ಮೆಯಿಂದ ಯೋಚಿಸಿ ಪ್ರತಿಭಾವಂತ ಮಕ್ಕಳಿಗೆ ಅನ್ಯಾಯವಾಗದಂತೆ ತೀರ್ಪು ನೀಡಬೇಕು. ಸಣ್ಣಪುಟ್ಟ ವ್ಯವಸ್ಥೆಗಳು ಕಂಡಬಂದರೆ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು ಎಂದರು.
ಡೇರಿ ಅಧ್ಯಕ್ಷ ಸಿ.ಶಿವಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಪೂರಕವಾಗಿ ವಾತಾವರಣ ನಿರ್ಮಿಸಲಾಗಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಸೂಕ್ತವೇದಿಕೆ ಕಲ್ಪಿಸಲಾಗಿದ್ದು, ಇಲ್ಲಿ ವಿಜೇರಾಗಿ ಜಿಲ್ಲಾ, ರಾಜ್ಯಮಟ್ಟದಲ್ಲಿ ಸ್ಪರ್ಧಿಸಿ ಶಾಲೆಗಳಿಗೆ ಕೀರ್ತಿತರಬೇಕು ಎಂದು ಹಾರೈಸಿದರು.
ಚಿನಕುರಳಿಯಲ್ಲಿ ತಾಲೂಕು ಮಟ್ಟದ ಕಲಿಕೋತ್ಸವ
ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips
ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…
ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips
ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…
Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?
ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…