ಚಿತ್ರ ವಿ-ಚಿತ್ರ: ಇವರ ವಯಸ್ಸು ಕೇವಲ 336 ತಿಂಗಳು

ಕುಟುಂಬದ ವಿಶೇಷ ಸಮಾರಂಭಗಳಲ್ಲಿ, ಜನ್ಮದಿನದ ಕಾರ್ಯಕ್ರಮಗಳಲ್ಲಿ ಫೋಟೋ ತೆಗೆಸಿಕೊಳ್ಳುವುದು ಸಾಮಾನ್ಯ. ಆದರೆ ಇತ್ತೀಚೆಗೆ ಅಮೆರಿಕದ ಮಹಿಳೆಯೊಬ್ಬರು ಮಾಡಿಸಿದ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಕೋಲ್ ಹ್ಯಾಮ್ ಎನ್ನುವ ಈ ಮಹಿಳೆ 28ನೆಯ ವರ್ಷದ ಜನ್ಮದಿನದಂದು; ಮಕ್ಕಳಂತೆ ಶಾಲನ್ನೇ ಮೈಗೆ ಸುತ್ತಿಕೊಂಡು, ತಲೆಗೆ ರಿಬ್ಬನ್ ಕಟ್ಟಿಕೊಂಡು, ತನ್ನ ವಯಸ್ಸು 336 ತಿಂಗಳುಗಳು ಎಂದು ಬರೆದ ಸ್ಲೇಟ್ ಒಂದನ್ನು ತಲೆಯ ಬಳಿ ಇಟ್ಟುಕೊಂಡು ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ.