ಚಿತ್ರ ವಿ-ಚಿತ್ರ: ಅಶ್ವಗಳಿಗೂ ವಿವಿಧ ಅಲಂಕಾರ!

ನಟ-ನಟಿಯರು, ಕ್ರೀಡಾಪಟುಗಳು ವಿಶೇಷ ಕೇಶವಿನ್ಯಾಸದಿಂದ ಗಮನ ಸೆಳೆಯುವುದು ಸಾಮಾನ್ಯ. ಆದರೆ ಇದು ಮನುಷ್ಯರಿಗೆ ಮಾತ್ರವೇ ಸೀಮಿತವಾಗಿ ಉಳಿದಿಲ್ಲ ಎಂಬುದಕ್ಕೆ ಈ ಚಿತ್ರವೇ ಉದಾಹರಣೆ. ಅಮೆರಿಕದ ಮೆಲೊಡಿ ಹೇಮ್್ಸ ಎಂಬ ಕ್ಷೌರವಿನ್ಯಾಸಕಿ ಅನೇಕ ಕುದುರೆಗಳಿಗೆ ಹಲವಾರು ರೀತಿಯ ವಿನ್ಯಾಸಗಳನ್ನು ಮಾಡಿದ್ದಾರೆ. ಒಂದು ಕುದುರೆಗೆ ಈ ಬಗೆಯ ವಿನ್ಯಾಸ ಮಾಡಲು ಒಂದು ತಿಂಗಳಾದರೂ ಬೇಕು ಎನ್ನುವ ಅವರು; ಹಾರ್ಸ್ ಬ್ಯೂಟಿಷಿಯನ್ ಕೋರ್ಸ್ ಕೂಡ ನಡೆಸುತ್ತಿದ್ದಾರೆ.