More

    ಚಿತ್ರರಂಗಕ್ಕೆ ಉತ್ತರ ಕರ್ನಾಟಕ ತವರು

    ಕಲಬುರಗಿ: ಕನ್ನಡ ಚಿತ್ರರಂಗಕ್ಕೆ ಉತ್ತರ ಕರ್ನಾಟಕ ತವರು ಮನೆಯಿದ್ದಂತೆ. ಈ ಭಾಗದ ಮಣ್ಣು ಶ್ರೇಷ್ಠ. ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ ಸಾಹಿತ್ಯ ಹುಟ್ಟಿದ್ದೆ ಈ ಮಣ್ಣಿನಲ್ಲಿ ಎಂದು ಹಿರಿಯ ಚಿತ್ರ ನಟರೂ ಆದ ಮಾಜಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

    ಕರ್ನಾಟಕ ಸಂಭ್ರಮ-೫೦ ನಿಮಿತ್ತ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭಾನುವಾರ ಆಯೋಜಿಸಿದ್ದ ಸರಣಿ ಕಾರ್ಯಕ್ರಮದಲ್ಲಿ ಲೇಖಕಿ ಡಾ.ಪಲ್ಲವಿ ಪಾಟೀಲ್ ವಿರಚಿತ ಪ್ರೇಮ ಪಲ್ಲವಿ ಮತ್ತು ಶೃಂಗಾರ ಪಲ್ಲವಿ ಕೃತಿಗಳನ್ನು ಜನಾರ್ಪಣೆಗೊಳಿಸಿದ ಅವರು, ಬರಹಗಾರರಾದವರು ಹೆಚ್ಚು ಅಧ್ಯಯನಶೀಲರಾಗಿ ಬರೆಯಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಸಾಹಿತ್ಯದ ಕೊಡುಗೆ ಇರಲಿ ಎಂದು ಆಶಿಸಿದರು.

    ಚಲನಚಿತ್ರ ನಿರ್ದೇಶಕ, ಸಾಹಿತಿ ಯೋಗರಾಜ ಭಟ್ ಮಾತನಾಡಿ, ಕನ್ನಡ ಭಾಷೆ ಅಳಿವಿನಂಚಿನಲ್ಲಿದೆ ಎಂದು ಹೇಳುವುದಕ್ಕಿಂತ ನಾವು ಎಷ್ಟು ಕನ್ನಡವನ್ನು ಬಳಸುತ್ತಿದ್ದೇವೆ ಎಂಬುದನ್ನು ಮೊದಲು ಅರಿಯಬೇಕು. ಕನ್ನಡ ಏನಾದರೂ ಉಳಿದುಕೊಂಡಿದ್ದರೆ ಅದು ಈ ಭಾಗದಲ್ಲೇ ಎಂಬುದು ಸಂತಸದ ಸಂಗತಿ ಎಂದು ಹೇಳಿದರು.

    ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿದರು. ಕರ್ನಾಟಕ ಕೇಂದ್ರೀಯ ವಿವಿ ಪ್ರಾಧ್ಯಾಪಕ ಡಾ.ಬಸವರಾಜ ಡೋಣೂರ ಹಾಗೂ ಹಿರಿಯ ಲೇಖಕಿ ಡಾ.ಚಂದ್ರಕಲಾ ಬಿದರಿ ಪುಸ್ತಕ ಪರಿಚಯ ಮಾಡಿದರು. ರಾಜ್ಯಸಭಾ ಮಾಜಿ ಸದಸ್ಯ ಡಾ.ಬಸವರಾಜ ಪಾಟೀಲ್ ಸೇಡಂ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಲೇಖಕಿ ಡಾ.ಪಲ್ಲವಿ ಪಾಟೀಲ್ ಮಾತನಾಡಿದರು.

    ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಯಶ್ವಂತರಾಯ ಅಷ್ಟಗಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಸಂಗಣ್ಣಗೌಡ ಪಾಟೀಲ್ ಕಲ್ಲೂರ, ಭಾಗೀರಥಿ, ಸಿದ್ಧಲಿಂಗ ಬಾಳಿ, ಧರ್ಮಣ್ಣ ಧನ್ನಿ, ಡಾ.ಕೆ. ಗಿರಿಮಲ್ಲ, ರಾಜೇಂದ್ರ ಮಾಡಬೂಳ, ವಿಶ್ವನಾಥ ತೋಟ್ನಳ್ಳಿ, ಶಕುಂತಲಾ ಪಾಟೀಲ್, ಶಿಲ್ಪಾ ಜೋಶಿ, ಪ್ರಭವ ಪಟ್ಟಣಕರ್, ಶಾಮಸುಂದರ ಕುಲಕರ್ಣಿ, ಸಂತೋಷ ಕುಡಳ್ಳಿ, ಪ್ರಭುಲಿಂಗ ಮೂಲಗೆ, ಶರಣಬಸಪ್ಪ ಕೋಬಾಳ, ನಾಗಪ್ಪ ಸಜ್ಜನ್, ವೀರೇಂದ್ರಕುಮಾರ ಕೊಲ್ಲೂರ, ಗುರುಬಸಪ್ಪ ಸಜ್ಜನಶೆಟ್ಟಿ ಇತರರಿದ್ದರು.

    ರಾಜ್ಯೋತ್ಸವ ರಸಪ್ರಶ್ನೆ - 25

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts