ಚಿತ್ರದುರ್ಗದಲ್ಲಿ ನಾಟ್ಯನೈದಿಲೆ ನೃತ್ಯೋತ್ಸವ 24ರಿಂದ

ಚಿತ್ರದುರ್ಗ: ನಗರದ ಶ್ರೀ ಅಂಜನಾ ನೃತ್ಯ ಕಲಾ ಕೇಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ತರಾಸು ರಂಗಮಂದಿರದಲ್ಲಿ ಆ.24ರಿಂದ 2 ದಿನಗಳ ಕಾಲ ನಾಟ್ಯನೈದಿಲೆ ನೃತ್ಯೋತ್ಸವ-2024 ಕಾರ‌್ಯಕ್ರಮವನ್ನು ಏರ್ಪಡಿಸಲಾಗಿದೆ.
24ರ ಸಂಜೆ 5ಕ್ಕೆ ನೃತ್ಯಕಲಾವಿದ ಬೆಂಗಳೂರಿನ ವಿದ್ವಾನ್ ಅನಿಲ್‌ಕುಮಾರ್, ಬೆಂಗಳೂರು ನಾಟ್ಯಭಾರತಿ ಟ್ರಸ್ಟ್‌ನ ವಿದುಷಿ ರಂಜಿತಾ ನಾಗೇಶ್, ವಿದ್ವಾನ್ ಜಿ.ಎಸ್.ನಾಗೇಶ್ ಉದ್ಘಾಟಿಸುವರು.
ನಗರದ ಸರ್ಕಾರಿ ಪಪೂ ಕಾಲೇಜು ಉಪನ್ಯಾಸಕ ಡಾ.ಎಸ್.ಎನ್.ಹೇಮಂತ್‌ರಾಜ್ ಮುಖ್ಯಆತಿಥಿಗಳಾಗಿ ಆಗಮಿಸುವರು. ಅಂಜನಾನೃತ್ಯ ಕಲಾ ಕೇಂದ್ರದ ಪ್ರಾಚಾರ‌್ಯ ವಿದ್ವಾನ್ ಸಿ.ಆರ್.ಶಿವಪ್ರಕಾಶ್ ಉಪಸ್ಥಿತರಿರುವರು. ಕಲಾವಿದರಾದ ಎಂ.ಜಿ.ಧ್ರುತಿ, ರಚನಾ, ರಕ್ಷಿತಾ ತಂಡದವರಿಂದ ನಾಟ್ಯರಾಣಿ ಶಾಂತಲೆ ಮತ್ತಿತರ ನೃತ್ಯರೂಪಕಗಳ ಪ್ರದರ್ಶನ, ಕಲಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಿಗೆ ಪ್ರತಿಭಾಪುರಸ್ಕಾರ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು.
25ರ ಸಂಜೆ 5ಕ್ಕೆ ಶ್ರೀ ಶಿವಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ‌್ಯಕ್ರಮ ನಡೆಯಲಿದ್ದು, ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅಧ್ಯಕ್ಷತೆ ವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿನಿರ್ದೇಶಕ ಅಶೋಕ ಛಲವಾದಿ, ಬೆಂಗಳೂರು ಸಂಗೀತ ಮತ್ತು ನೃತ್ಯಅಕಾಡೆಮಿ ಅಧ್ಯಕ್ಷೆ, ವಿದುಷಿ ಶುಭಾ ಧನಂಜಯ್, ಚಿತ್ರದುರ್ಗ ಬ್ರಾಹ್ಮಣ ಸಂಘದ ಅಧ್ಯಕ್ಷ ಪಿ.ಎಸ್.ಮಂಜುನಾಥ್, ಗಾಯಕಿ ಜ್ಯೋತಿ ರವಿಪ್ರಕಾಶ್ ಮುಖ್ಯಅತಿಥಿಗಳಾಗಿ ಪಾಲ್ಗೊಳ್ಳುವರು.
ಅನಿಲ್‌ಕುಮಾರ್, ಶುಭಾ ಧನಂಜಯ್, ದಾವಣಗೆರೆಯ ವಿದುಷಿ ಮಾಧವಿ ಗೋಪಾಲಕೃಷ್ಣ ಅವರಿಗೆ ಅಂಜನಾ ಕಲಾನಿಧಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಲಾ ಕೇಂದ್ರದ ವಿದ್ಯಾರ್ಥಿಗಳಾದ ಕೆ.ಆರ್.ಶಿವಾನಿ ಸಂಗಡಿಗರು, ಶ್ರೀವಿದ್ಯಾ, ಖುಷಿ ಸಿರಿ ತಂಡದವರಿಂದ ಬರಗೇರಮ್ಮ ಮತ್ತು ತಿಪ್ಪಿನಘಟ್ಟಮ್ಮ ಭೇಟಿ ಉತ್ಸವ ಮತ್ತಿತರ ನೃತ್ಯ ರೂಪಕಗಳ ಪ್ರದರ್ಶನ ಹಾಗೂ ಜ್ಯೋತಿ ರವಿಪ್ರಕಾಶ್ ಅವರಿಂದ ಗಾಯನ ಕಾರ‌್ಯಕ್ರಮವಿರುತ್ತದೆ.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…