ಚಿಟ್ಟೆ ಬಂತು ಚಿಟ್ಟೆ

ಮನೆಯನ್ನು ಸಿಂಗರಿಸುವುದೆಂದರೆ ಸುಮ್ಮನೆ ಅಲ್ಲ… ನಮ್ಮೆಲ್ಲ ಕ್ರಿಯೆಟಿವಿಟಿಯನ್ನು ಧಾರೆ ಎರೆದರೂ ಕೆಲವೊಮ್ಮೆ ಮನಸಿಗೆ ಸಮಾಧಾನ ಇರುವುದಿಲ್ಲ. ಯಾರದಾದರೂ ಮನೆಗೆ ಹೋದಾಗ ಅಲ್ಲಿನ ಸಿಂಪಲ್ ಡಿಸೈನ್​ಗಳನ್ನು ನೋಡಿ ನಮ್ಮ ಮನೆಯಲ್ಲೂ ಈ ರೀತಿ ಮಾಡಿದರೆ ಚೆನ್ನಾಗಿರುತ್ತದೆ ಎಂದು ಒಮ್ಮೆಯಾದರೂ ಅನಿಸದಿರದು. ಮನೆಯ ಗೋಡೆಗೆ ಚೆಂದನೆಯ ಪೇಂಟ್ ಮಾಡಿಸಿದ ಮಾತ್ರಕ್ಕೆ ಅದು ಚೆನ್ನಾಗಿ ಕಾಣುತ್ತದೆ ಎಂದರ್ಥವಲ್ಲ. ಅದರ ಮೇಲೆ ಬಣ್ಣಬಣ್ಣದ ಚಿಟ್ಟೆಗಳ ಸ್ಟಿಕರ್​ಗಳನ್ನು ಅಂಟಿಸಿದರೆ ಮನೆಯ ಲುಕ್ಕೇ ಬೇರೆ ಆಗುತ್ತದೆ. ಅಥವಾ ಕಾಗದದಲ್ಲಿ ಚಿಟ್ಟೆಗಳ ವಿನ್ಯಾಸವನ್ನು ಮಾಡಿ ಬೇಕಿದ್ದರೂ ಅಲಂಕಾರ ಮಾಡಬಹುದು.

  1. ಸೋಫಾದ ಹಿಂಭಾಗದಲ್ಲಿ ಮೇಲ್ಮುಖವಾಗಿ ಚಿಟ್ಟೆಗಳನ್ನು ಅಂಟಿಸಿದರೆ ನೋಡಲು ಕ್ಲಾಸಿಯಾಗಿರುತ್ತದೆ.
  2. ಅಗಲ ಹಾಗೂ ಎತ್ತರವಾದ ಗೋಡೆಯಿದ್ದರೆ ವೃತ್ತಾಕಾರವಾಗಿ ಚಿಟ್ಟೆಗಳಿಂದ ಅಲಂಕರಿಸಬಹುದು.
  3. ಯಾವ ರೀತಿಯ ವಿನ್ಯಾಸ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದು ಕೂಡ ಮುಖ್ಯ. ಬೇರೆ ಬೇರೆ ಸಿಂಗಲ್ ಕಲರ್ ಇರುವ ಚಿಟ್ಟೆಗಳನ್ನು ನಾಲ್ಕೈದು ಬಣ್ಣದ ಸಾಲುಗಳಾಗಿ ಅಂಟಿಸಿದರೆ ನೋಡಲು ಕಲರ್​ಫುಲ್ ಆಗಿರುತ್ತದೆ.
  4. ಗೋಡೆಯ ಕಾಂಟ್ರಾಸ್ಟ್ ಬಣ್ಣದ ಕಾಗದ ಅಥವಾ ಸ್ಟಿಕರ್​ಗಳನ್ನು ಆಯ್ದುಕೊಳ್ಳಿ.
  5. ಬೇರೆ ಬಣ್ಣ ಬೇಡ ಎಂದಾದರೆ ಕಪ್ಪು-ಬಿಳಿ ಬಣ್ಣದ ಮಿಶ್ರಣ ಮಾಡಿದರೂ ಚೆನ್ನಾಗಿರುತ್ತದೆ.
  6. ಎಲ್ಲವೂ ಒಂದೇ ಸೈಜಿನ ಚಿಟ್ಟೆಗಳಿರುವುದಕ್ಕಿಂತ ದೊಡ್ಡ, ಸಣ್ಣ ಗಾತ್ರವನ್ನು ಮಿಕ್ಸ್ ಮಾಡಿದರೆ ಟ್ರೆಂಡಿಯಾಗಿ ಕಾಣುತ್ತದೆ.

Leave a Reply

Your email address will not be published. Required fields are marked *