ಚಿಕ್ಕ ವಯಸ್ಸಿನಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಿ

ಚಿಕ್ಕಬಳ್ಳಾಪುರ: ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೇ ನಾಯಕತ್ವ ಗುಣ ಬೆಳೆಸಿಕೊಳ್ಳಬೇಕೆಂದು ರಾಷ್ಟ್ರೀಯ ಸೇವಾ ಗುಣಮಟ್ಟ ಪರೀಕ್ಷಾ ಕೇಂದ್ರದ ಪ್ರಾಧ್ಯಾಪಕ ಡಾ.ವೆಂಕಟೇಶ್ ತುಪ್ಪೀಲ್ ಹೇಳಿದರು.

ಸೂಲಾಲಪ್ಪದಿನ್ನೆಯ ಬಿಜಿಎಸ್ ವರ್ಲ್ಡ್ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿ ನಾಯಕರ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನಿಸಿದ ಕೂಡಲೇ ಯಾರು ನಾಯಕರಾಗಿರುವುದಿಲ್ಲ. ಸುತ್ತಲಿನ ವಾತಾವರಣ ಮತ್ತು ಆಚರಣೆಗಳಿಂದ ಗುಣಗಳು ಬೆಳೆಯುತ್ತವೆ. ಇದಕ್ಕೆ ಪಾಲಕರು ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಬೇಕು ಎಂದರು.

ಬಿಜಿಎಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎನ್.ಶಿವರಾಮರೆಡ್ಡಿ ನೂತನ ನಾಯಕರುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಚಾರ್ಯ ರಂಜಿತ್​ಕುಮಾರ್ ಮಂಡಲ್ ಧ್ವಜಗಳನ್ನು ವಿತರಿಸಿದರು. ಟೆಕ್ ಅವೆಂಟ್ ಗ್ರೇಡ್​ನ ಕಾರ್ಯನಿರ್ವಹಣಾಧಿಕಾರಿ ಅಲಿಸೇಟ್, ಇಂಗ್ಲಿಷ್ ಪತ್ರಿಕೆಯೊಂದರ ವ್ಯವಸ್ಥಾಪಕ ಎನ್.ರಾಜಶೇಖರ್, ಉಪ ಪ್ರಾಚಾರ್ಯ ಛಬ್ಬಿ ಮಂಡಲ್, ಮುಖ್ಯಶಿಕ್ಷಕ ಎ.ಎನ್.ಗಿರಿಬಾಬು, ಶಾಲಾ ಅಡ್ಮಿನ್ ಮ್ಯಾನೇಜರ್ ಬಿ.ಆರ್.ಮೌರ್ಯ, ಪ್ರಾಜೆಕ್ಟ್ ಮ್ಯಾನೇಜರ್ ಬಿದ್ಯಾಧರ್ ಜಿನ ಮತ್ತಿತರರಿದ್ದರು.

ನಾಯಕರ ನೇಮಕ: ಶಾಲೆ ನಾಯಕಿಯಾಗಿ 9ನೇ ತರಗತಿಯ ಗಾನಾ ರೆಡ್ಡಿ, ಉಪನಾಯಕನನ್ನಾಗಿ ಮಾನಸ್​ಗೌಡ ಅವರನ್ನು ನೇಮಕ ಮಾಡಲಾಯಿತು. ಶಾಲಾ ಸಾಂಸ್ಕೃತಿಕ ವಿಭಾಗಕ್ಕೆ ಹರ್ಷರಾಣಿ ನಾಯಕಿ, ರಮ್ಯಾ ಉಪ ನಾಯಕಿ, ಕ್ರೀಡಾ ನಾಯಕರಾಗಿ ಪೃಥ್ವಿ, ಉಪ ನಾಯಕಿಯಾಗಿ ಕವಿತಾ ಆಯ್ಕೆಯಾದರು. ಇಕೋ ವಾರಿಯರ್​ಗಳಾಗಿ ಗೌತಮಿ, ಶ್ರೇಯಾ, ಅಜಯ್, ಬಾಲಾಜಿ ನೇಮಕಗೊಂಡರು. ಇತರೆ ತರಗತಿ ನಾಯಕ ಹಾಗೂ ಉಪ ನಾಯಕರು ಮತ್ತು ಕುವೆಂಪು, ಅಶೋಕ, ಬುದ್ಧ, ಐನ್​ಸ್ಟೈನ್ ನಾಲ್ಕು ಗುಂಪುಗಳಿಗೆ ನಾಯಕ, ಉಪನಾಯಕರನ್ನು ನೇಮಕ ಮಾಡಲಾಯಿತು.

ಪ್ರತಿಭಾವಂತರಿಗೆ ಸನ್ಮಾನ: 10ನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸಿದ ಎಸ್.ಚೇತನ(ಶೇ.97.33), ರಕ್ಷಿತಾ ಬಿ.ಗೌಡ, ಜಿ.ಎಸ್.ಗೌತಮ್​ಶೇ.96) ಅವರನ್ನು ಸನ್ಮಾನಿಸಲಾಯಿತು. ಸ್ಕೌಟ್ ವಿಭಾಗದಲ್ಲಿ ರಾಜ್ಯಪಾಲ ವಿ.ವಾಲಾರಿಂದ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಮತ್ತು ಜೂ.22ರಂದು ನಡೆಯುವ ರೋಬೋಟಿಕ್ ವಿಭಾಗದ ಸಭೆಗಳಲ್ಲಿ ಭಾಗವಹಿಸಲು ತೆರಳುತ್ತಿರುವ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಜಿಎಸ್​ಟಿ ಒಳ್ಳೆಯದು: ಕೇಂದ್ರ ಸರ್ಕಾರದ ಏಕರೂಪ ನೀತಿ ತೆರಿಗೆ(ಜಿಎಸ್​ಟಿ) ಪದ್ಧತಿ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಾಷ್ಟ್ರೀಯ ಗ್ರಾಹಕರ ಮತ್ತು ಸೇವಾ ತೆರಿಗೆ ಸಂಸ್ಥೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ.ಜಿ.ಕೋದಂಡರಾಂ ಹೇಳಿದರು. ಹಿಂದೆ ಸರಕುಗಳ ಅಕ್ರಮ ಸಾಗಣೆ ಮೂಲಕ ತೆರಿಗೆ ಪಾವತಿಸದೆ ವಂಚಿಸಲಾಗುತ್ತಿತ್ತು. ಆದರೆ, ಜಿಎಸ್​ಟಿ ಜಾರಿಯಿಂದ ತಪ್ಪಿದೆ. ಪ್ರತಿಯೊಂದು ವಸ್ತು ಖರೀದಿಗೂ ತೆರಿಗೆ ಪಾವತಿಸಬೇಕಾಗಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *