ಚಿಕ್ಕೋಡಿ: ಸಹಕಾರದಿಂದ ಮಾಲಿನ್ಯ ರಹಿತ ವಾತವಾರಣ ನಿರ್ಮಾಣ ಸಾಧ್ಯ

ಚಿಕ್ಕೋಡಿ: ಪ್ರತಿಯೊಬ್ಬರು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸುಚಿತ್ವವಾಗಿ ಇಟ್ಟುಕೊಂಡರೆ ಮಾಲಿನ್ಯ ರಹಿತ ಪರಿಸರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಪುರಸಭೆ ಹಿರಿಯ ಸದಸ್ಯ ಹಾಗೂ ಸಾಯಿ ಸೇವಾ ಪರಿವಾರದ ರೂವಾರಿ ಜಗದೀಶ ಕವಟಗಿಮಠ ಹೇಳಿದ್ದಾರೆ.

ಗುರುವಾರ ಪಟ್ಟಣದ ಬಸವೇಶ್ವರ ನಗರದ ಶಿರಡಿ ಸಾಯಿ ಮಂದಿರದ 12ನೇ ವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ಸಾಯಿ ಪರಿವಾರ, ಪುರಸಭೆ ಹಾಗೂ ಸಿಎಲ್‌ಇ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಸ್ವಚ್ಛ ಚಿಕ್ಕೋಡಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಅಭಿಯಾನಕ್ಕೆ ಪಟ್ಟಣದ ಪ್ರತಿ ನಾಗರಿಕರು ಸಹಕಾರ ನೀಡಿ ಯಶಸ್ಸಿಗೆ ಸಹಕಾರ ನೀಡಬೇಕು ಎಂದರು.

ಪರಿಸರ ಅಭಿಯಂತ ಜಿ.ಸಿ.ವಿನಾಯಕ, ಸಾರ್ವಜನಿಕರಿಗೆ ಕಸ ವಿಂಗಡನೆಯ ಕುರಿತು ಅರಿವು ಮೂಡಿಸುವುದು ಅತೀ ಅವಶ್ಯವಾಗಿದೆ ಎಂದರು.ಸಾಯಿ ಸೇವಾ ಪರಿವಾರದ ಆದಿನಾಥ ಶೆಟ್ಟಿ, ಕಿರಣ ಗುಂಡೆ, ಮಡಿವಾಳಪ್ಪ ಬಸರಗಿ, ರವಿ ಅಶ್ವತಪುರ, ವರ್ಧಮಾನ ಸದಲಗೆ,ನಾಗರಾಜ ಬುರುಡ, ಪ್ರವೀಣ ಕಾಂಬಳೆ, ತಾನಾಜಿ ಕದಂ, ನಿವೃತ್ತ ಪ್ರಾಚಾರ್ಯ ಬಿ.ಎ.ಪೂಜಾರಿ, ಪುರಸಭೆ ಸದಸ್ಯರಾದ, ವ್ಯವಸ್ಥಾಪಕ ಬಿ.ಪಿ.ಕರನಿಂಗ, ಪ್ರಕಾಶ ಹೊನಮಾನೆ, ಕಿರಣ ಬಳ್ಳುರ್ಗಿ, ತುಕಾರಾಮ ಜಮಖಂಡಿ, ಆರ್.ಡಿ.ಚಿಣಗುಂಡಿ, ಸಿಎಲ್‌ಇ ಸಂಸ್ಥೆಯ ಶಿಕ್ಷಕರು ಇತರರು ಇದ್ದರು.