ಚಿಕ್ಕೋಡಿಯಲ್ಲಿ ಭಾನುವಾರ ಆರ್‌ಎಸ್‌ಎಸ್ ಪಥ ಸಂಚಲನ

ಚಿಕ್ಕೋಡಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಿಕ್ಕೋಡಿ ಜಿಲ್ಲಾ ಘಟಕದ ವತಿಯಿಂದ ಭಾನುವಾರ ತಾಲೂಕು ಸಮಾವೇಶ ಹಾಗೂ ಗಣವೇಷಧಾರಿ ಸ್ವಯಂ ಸೇವಕರಿಂದ ಪಥಸಂಚಲನ ನಡೆಯಲಿದೆ.

ಮಧ್ಯಾಹ್ನ 4 ಗಂಟೆಗೆ ಆರ್.ಡಿ.ಹೈಸ್ಕೂಲ್ ಮೈದಾನದಿಂದ ಪಥಸಂಚಲನ ಪ್ರಾರಂಭವಾಗಿ ಮಹಾವೀರ ವೃತ್ತ, ಕಿತ್ತೂರು ಚನ್ನಮ್ಮ ರಸ್ತೆ,ಪುರಸಭೆ, ದತ್ತ ದೇವಸ್ಥಾನ, ಓತಾರಿ ಗಲ್ಲಿ, ಜೈನಪೇಟೆ, ಸೋಮವಾರ ಪೇಟೆ, ಗುರುವಾರ ಪೇಟೆ ಮಾರ್ಗವಾಗಿ ಕಿವಡ ಮೈದಾನಕ್ಕೆ ಆಗಮಿಸಲಿದೆ. ಸಂಜೆ 5.15ಕ್ಕೆ ನಡೆಯುವ ಸಾರ್ವಜನಿಕ ಸಮಾರಂಭದ ದಿವ್ಯ ಸಾನಿಧ್ಯವನ್ನು ಜೋಡಕುರಳಿ ಸಿದ್ದಾರೂಢ ಮಠದ ಚಿದ್ಘನಾನಂದ ಭಾರತಿ ಸ್ವಾಮೀಜಿ ವಹಿಸುವರು. ವಕ್ತಾರರಾಗಿ ಕರ್ನಾಟಕ ಉತ್ತರ ಪ್ರಾಂತದ ಸಹ ಸಂಯೋಜಕ ಹನುಮಂತ ಮಳಲಿ ಮಾರ್ಗದರ್ಶನ ನೀಡುವರು ಎಂದು ಆರ್.ಎಸ್.ಎಸ್.ಚಿಕ್ಕೋಡಿ ಘಟಕ ತಿಳಿಸಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ಥಾಪಕರಾದ ಕೇಶವ ಬಲಿರಾಮಪಂತ ಹೆಡಗೆವಾರ ದಕ್ಷಿಣ ಭಾರತದಲ್ಲಿ ಪ್ರಥಮಬಾರಿಗೆ ಚಿಕ್ಕೋಡಿಗೆ ಭೇಟಿ ನೀಡಿದ ಪ್ರಯುಕ್ತ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಆಯೋಜಿಸುವ ಗಣವೇಷಧಾರಿ, ಸ್ವಯಂ ಸೇವಕರಿಂದ ಪಥಸಂಚಲನ 10 ವರ್ಷಗಳಿಂದ ಚಿಕ್ಕೋಡಿಯಲ್ಲಿ ನಡೆಯುತ್ತಿದೆ.