ಚಿಕ್ಕಬಳ್ಳಾಪುರದಲ್ಲಿ ಗಿರಿಯಾಸ್ ನೂತನ ಮಳಿಗೆ ಆರಂಭ

ಚಿಕ್ಕಬಳ್ಳಾಪುರ: ಗೃಹೋಪಯೋಗಿ ವಸ್ತುಗಳ ರಿಯಾಯಿತಿ ದರದ ಮಾರಾಟದಲ್ಲಿ ಪ್ರಸಿದ್ಧಿ ಹೊಂದಿರುವ ಗಿರಿಯಾಸ್ ಸಂಸ್ಥೆ ತನ್ನ 75ನೇ ಮಳಿಗೆಯನ್ನು ಚಿಕ್ಕಬಳ್ಳಾಪುರದಲ್ಲಿ ತೆರೆದಿದೆ. ನೂತನ ಮಳಿಗೆಯನ್ನು ದಕ್ಷಿಣ ವಲಯ ಐಜಿಪಿ ಸೌಮೇಂದು ಮುಖರ್ಜಿ ಶನಿವಾರ ಲೋಕಾರ್ಪಣೆಗೊಳಿಸಿದ್ದಾರೆ.

ಕಳೆದ 48 ವರ್ಷಗಳಿಂದಲೂ ಗ್ರಾಹಕ ಸ್ನೇಹಿ ವಹಿವಾಟಿನ ಮೂಲಕ ಗಮನ ಸೆಳೆಯುತ್ತಿರುವ ಗಿರಿಯಾಸ್ ಕರ್ನಾಟಕ, ತಮಿಳುನಾಡು ಸೇರಿ ದೇಶದ ವಿವಿಧ ಭಾಗಗಳಲ್ಲಿ ಶಾಖೆಗಳನ್ನು ಹೊಂದಿದೆ. ಬೇರೆಡೆಗಿಂತಲೂ ಟಿವಿ, ಮೊಬೈಲ್, ಗ್ಯಾಸ್​ಸ್ಟೌವ್, ರೆಫ್ರಿಜಿರೇಟರ್ ಸೇರಿ ಗೃಹೋಪಯೋಗಿ ವಸ್ತುಗಳನ್ನು ಕಡಿಮೆ ಬೆಲೆಗೆ ನೀಡುವುದು ಸಂಸ್ಥೆಯ ವಿಶೇಷ.

ಜನರು ದುಬಾರಿ ಬದಲಿಗೆ ಕಡಿಮೆ ಹಣದಲ್ಲಿ ಒಳ್ಳೆಯ ವಸ್ತುಗಳನ್ನು ಕೊಂಡುಕೊಳ್ಳಲು ಬಯಸುತ್ತಾರೆ. ಇದನ್ನರಿತುಕೊಂಡು ಗಿರಿಯಾಸ್ ಹಿಂದಿನಿಂದಲೂ ರಿಯಾಯಿತಿ ದರದಲ್ಲಿ ಗುಣಮಟ್ಟದ ವಸ್ತುಗಳನ್ನು ಒದಗಿಸುವ ಮೂಲಕ ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಬಂದಿದೆ ಎಂದು ಐಜಿಪಿ ಸೌಮೇಂದು ಮುಖರ್ಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಹಕರು ಗೊಂದಲವಿಲ್ಲದೆ ಕಡಿಮೆ ಬೆಲೆಯಲ್ಲಿ ಗೃಹೋಪಯೋಗಿ ವಸ್ತುಗಳ ಖರೀದಿಗೆ ಮಳಿಗೆಯಲ್ಲಿ ಅಗತ್ಯ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ಗಿರಿಯಾಸ್ ನಿರ್ದೇಶಕ ಪಿ.ಎಲ್. ಗಿರಿ ಹೇಳಿಸಿದರು.

ಡೊಳ್ಳು ಕುಣಿತದ ಮೂಲಕ ಗಣ್ಯರು ಮತ್ತು ಗ್ರಾಹಕರಿಗೆ ಸ್ವಾಗತ ಕೋರಲಾಯಿತು. ಸಿಬ್ಬಂದಿ ಸಿಹಿ ವಿತರಿಸಿ ಅಗತ್ಯ ಮಾಹಿತಿ ನೀಡಿದರು. ನಿರ್ದೇಶಕರಾದ ನವೀನ್ ಗಿರಿಯಾ, ನಿತೇಶ್ ಗಿರಿಯಾ, ಮನೀಷ್ ಗಿರಿಯಾ, ಪಿಂಕಾಲೆ ಕನಸ್ಟ್ರಕ್ಷನ್ ವ್ಯವಸ್ಥಾಪಕ ನಿರ್ದೇಶಕ ಜಿ. ರವಿಚಂದ್ರ ಇತರರಿದ್ದರು.

ಗ್ರಾಹಕರಿಗೆ ಉಚಿತ ಕೊಡುಗೆ

ಮಳಿಗೆ ಆರಂಭವಾದ ಶನಿವಾರ ವಿಶೇಷ ಕೂಪನ್ ಹೊಂದಿದ ಮೊದಲ 100 ಗ್ರಾಹಕರಿಗೆ ಸಂಸ್ಥೆ ನಿಗದಿಪಡಿಸಿದ್ದ ಗೃಹೋಪಯೋಗಿ ವಸ್ತುಗಳನ್ನು ಬಹುಮಾನವನ್ನಾಗಿ ನೀಡಲಾಯಿತು. ಹೆಸರು ನೋಂದಾಯಿಸಿಕೊಂಡ ಗ್ರಾಹಕರು ಮಾಹಿತಿ ಪಡೆದುಕೊಂಡರು. ಆ.26 ರವರೆಗೆ ವಿಶೇಷ ಮೆಗಾ ಸೇಲ್ ಯೋಜನೆ ಇದ್ದು ಲಾಭದಾಯಕ ಕೊಡುಗೆಗಳನ್ನು ನೀಡಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

Leave a Reply

Your email address will not be published. Required fields are marked *