ಚಿಕ್ಕನಗೌಡ್ರ ಆಸ್ತಿ 6 ಕೋಟಿ ರೂ.

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡ್ರ ಚರ ಹಾಗೂ ಸ್ಥಿರಾಸ್ತಿ ಸೇರಿ ಅಂದಾಜು 6 ಕೋಟಿ ರೂ. ಸೊತ್ತಿನ ಒಡೆಯರಾಗಿದ್ದಾರೆ.

ಚರಾಸ್ತಿಗಳ ಒಟ್ಟು ಮೌಲ್ಯ 74.86 ಲಕ್ಷರೂ.ಗಳಾದರೆ, ಸ್ಥಿರಾಸ್ತಿ ಮೌಲ್ಯ ಅದರಲ್ಲಿ ಸ್ವಯಾರ್ಜಿತ 54.67 ಲಕ್ಷ, ಖರೀದಿ ನಂತರ ಸ್ಥಿರಾಸ್ತಿ ಅಭಿವೃದ್ಧಿ ವೆಚ್ಚ 70 ಲಕ್ಷ ರೂ. ಒಟ್ಟು ಸ್ವಯಾರ್ಜಿತ ಸ್ವತ್ತುಗಳು 450.66 ಲಕ್ಷ ರೂ. ಪಿತ್ರಾರ್ಜಿತ ಸ್ವತ್ತುಗಳ ಒಟ್ಟು ಮೌಲ್ಯ 17 ಲಕ್ಷ ರೂ. ಎಂದು ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

ಇವರ ಪತ್ನಿ ಶಂಕ್ರವ್ವ ಅವರ ಚರಾಸ್ತಿ ಮೌಲ್ಯ 37 ಲಕ್ಷ ರೂ. ಇದ್ದು, ಇವರ ಹೆಸರಲ್ಲಿ ಯಾವುದೇ ಸ್ಥಿರಾಸ್ತಿ ಇರುವುದಿಲ್ಲ.

10ನೇ ತರಗತಿ ವ್ಯಾಸಂಗ ಮಾಡಿರುವ ಎಸ್.ಐ. ಚಿಕ್ಕನಗೌಡ್ರ ಸರ್ಕಾರದ ಯಾವುದೇ ಹೊಣೆಗಳನ್ನು ಬಾಕಿ ಉಳಿಸಿಕೊಂಡಿಲ್ಲ.

ಅವರ ಕೈಯಲ್ಲಿ 15 ಲಕ್ಷ ರೂ., ಪತ್ನಿ ಬಳಿ 5 ಲಕ್ಷ ರೂ. ನಗದು ಇಟ್ಟುಕೊಂಡಿದ್ದಾರೆ.

ಬ್ಯಾಂಕ್ ಖಾತೆಗಳಲ್ಲಿ: ಬೆಂಗಳೂರಿನ ಅಪೆಕ್ಸ್ ಬ್ಯಾಂಕ್ ಶಾಸಕರ ಭವನ ಶಾಖೆಯಲ್ಲಿ 3.10 ಲಕ್ಷ ರೂ., ಹುಬ್ಬಳ್ಳಿಯ ಭಾರತೀಯ ಸ್ಟೇಟ್ ಬ್ಯಾಂಕ್ ಮಾರ್ಕೆಟ್ ಶಾಖೆಯಲ್ಲಿ 1.10 ಲಕ್ಷ ರೂ., ಕರ್ನಾಟಕ ವಿಕಾಸ ಬ್ಯಾಂಕ್ ಅದರಗುಂಚಿ ಶಾಖೆಯಲ್ಲಿ 1.24 ಲಕ್ಷ ರೂ. ಹೊಂದಿದ್ದಾರೆ. ಪತ್ನಿ ಶಂಕ್ರವ್ವ ಹೆಸರಲ್ಲಿ ಕಾರ್ಪೆರೇಷನ್ ಬ್ಯಾಂಕ್​ನಲ್ಲಿ 5 ಲಕ್ಷ ರೂ. ಠೇವಣಿ ಇದೆ.

20 ಲಕ್ಷ ರೂ. ಬಿರ್ಲಾ ಸನ್​ಲೈಫ್ ಇನ್ಶೂರೆನ್ಸ್, 2.5 ಲಕ್ಷದ ಎಲ್​ಐಸಿ ಹೊಂದಿದ್ದಾರೆ. ಪತ್ನಿ ಹೆಸರಲ್ಲಿ 3 ಲಕ್ಷ ರೂ. ಎಲ್​ಐಸಿ, 1.50 ಲಕ್ಷ ರೂ. ರಿಲಯನ್ಸ್ ಲೈಫ್ ಇನ್ಶೂರೆನ್ಸ್ ಹೊಂದಿದ್ದಾರೆ. ಮುರಾರಹಳ್ಳಿ, ಅದರಗುಂಚಿ, ಕೊಟಗೊಂಡಹುಣಸಿ, ಕಟ್ನೂರಲ್ಲಿ ಪಿತ್ರಾರ್ಜಿತ ಹಾಗೂ ಸ್ವಯಾರ್ಜಿತ ಕೃಷಿ ಜಮೀನು ಹೊಂದಿದ್ದಾರೆ.

ಕೃಷಿಯೇತರ ಭೂಮಿ: ಧಾರವಾಡದ ದೊಡ್ಡನಾಯಕನಕೊಪ್ಪದಲ್ಲಿ 360 ಚ.ಮೀ, ಕೊಟಗೊಂಡಹುಣಸಿಯಲ್ಲಿ 290 ಚ.ಮೀ, ಮೈಸೂರು ತಾಲೂಕಿನ ಕುಪ್ಪಲ್ಲೂರಲ್ಲಿ 10 ಗುಂಟೆ ಹಾಗೂ ಕುಂದಗೋಳದಲ್ಲಿ 640.50 ಚ.ಮೀ ಹಾಗೂ 6892 ಚ.ಅ. ಕೃಷಿಯೇತರ ಜಮೀನು ಹೊಂದಿದ್ದಾರೆ.

ವಾಣಿಜ್ಯ ಕಟ್ಟಡಗಳು: ಅದರಗುಂಚಿಯಲ್ಲಿ 2.20 ಎಕರೆಯಲ್ಲಿ ಶಿಕ್ಷಣ ಸಂಸ್ಥೆ ಕಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ 66.70 ಚ.ಅ. ಕಟ್ಟಡ ಹೊಂದಿದ್ದಾರೆ. ಅದರಗುಂಚಿಯಲ್ಲಿ ಎಂಟು ಗುಂಟೆ, ಹುಬ್ಬಳ್ಳಿ ವಿದ್ಯಾನಗರದಲ್ಲಿ 3 ಗುಂಟೆ, ಬೆಂಗಳೂರಿನ ಎಚ್​ಎಸ್​ಆರ್ ಲೇಔಟ್​ನಲ್ಲಿ 360 ಚ.ಮೀ. ಜಾಗ ಹಾಗೂ ವಸತಿ ಕಟ್ಟಡಗಳನ್ನು ಹೊಂದಿರುವುದಾಗಿ ಅವರು ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

ಕುಸುಮಾವತಿ ಆಸ್ತಿ 1.23 ಕೋಟಿ ರೂ.

ಕುಂದಗೋಳ: ಮೈತ್ರಿ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರು ಒಟ್ಟು 1,23,69,125 ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾಧಿಕಾರಿಗೆ ಸಲ್ಲಿಸಿದ ಘೊಷಣಾ ಪತ್ರದಲ್ಲಿ ತಿಳಿಸಿದ್ದಾರೆ.

ಕೈಯಲ್ಲಿ 2 ಲಕ್ಷ ರೂ. ನಗದು. 81.62 ಲಕ್ಷ ರೂ.ಗಳ ಚರಾಸ್ತಿ ಹಾಗೂ 41.98 ಲಕ್ಷ ರೂ.ಗಳ ಸ್ಥಿರಾಸ್ತಿ ಹೊಂದಿದ್ದೇನೆ. ಮೂವರು ಮಕ್ಕಳಲ್ಲಿ ಒಬ್ಬಳ ಬಳಿ ಮಾತ್ರ 5 ಸಾವಿರ ರೂ. ನಗದು ಇದೆ. ಎಂದು ಅವರು ವಿವರಿಸಿದ್ದಾರೆ.

ಪತಿ ಸಿ.ಎಸ್. ಶಿವಳ್ಳಿಯವರು ಕಳೆದ ಮಾರ್ಚ್ 22ರಂದು ನಿಧನ ಹೊಂದಿದ್ದು, ಅವರ ಹೆಸರಲ್ಲಿದ್ದ ಚರ ಮತ್ತು ಸ್ಥಿರ ಆಸ್ತಿ ವಾರಸಾ ಪ್ರಕಾರ ಇನ್ನೂ ತಮ್ಮ ಹೆಸರಿಗೆ ವರ್ಗಾವಣೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

2 ಲಕ್ಷ ರೂ. ಬೆಲೆಯ ಟೊಯೊಟಾ ಕಾರ್, 7 ಲಕ್ಷ ರೂ. ಬೆಲೆಯ 250 ಗ್ರಾಂ ಬಂಗಾರದ ಆಭರಣ, 50 ಸಾವಿರ ರೂ. ಬೆಲೆಯ ಬೆಳ್ಳಿ ಪೂಜಾ ಸಾಮಗ್ರಿಗಳು, ಬ್ಯಾಂಕ್ ಖಾತೆಯಲ್ಲಿಯ ಮೊತ್ತ ಮೊದಲಾದವು ಚರಾಸ್ತಿಯಲ್ಲಿ ಸೇರಿವೆ. ಕಲಘಟಗಿ ಪಟ್ಟಣದಲ್ಲಿ 11, ಧಾರವಾಡ ತಾಲೂಕು ಸತ್ತೂರಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ನಿರ್ವಿುಸಿರುವ 1 ಬಿನ್​ಶೇತಕಿ ಪ್ಲಾಟ್ ಸೇರಿ 25.98 ಲಕ್ಷ ರೂ.ಗಳ ಸ್ಥಿರಾಸ್ತಿ, ಲಕ್ಷೆ್ಮೕಶ್ವರದಲ್ಲಿ 1 ಫ್ಲ್ಯಾಟ್ (ಸದ್ಯದ ಬೆಲೆ 16 ಲಕ್ಷ ರೂ.) ಆಸ್ತಿ ಹೊಂದಿದ್ದಾರೆ. 2,50,354 ರೂ. ಬ್ಯಾಂಕ್ ಸಾಲವನ್ನೂ ಅವರು ಹೊಂದಿದ್ದಾರೆ. ಅವರು ಎಸ್​ಎಸ್​ಎಲ್​ಸಿ ಓದಿರುವುದಾಗಿ ತಿಳಿಸಿದ್ದಾರೆ. ಸರ್ಕಾರಕ್ಕೆ ಯಾವುದೇ ಶುಲ್ಕ ಪಾವತಿಸುವುದು ಬಾಕಿ ಇಲ್ಲ ಎಂದು ಅಫಿಡವಿಟ್​ನಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *