ಸಿನಿಮಾ

ಚಿಕ್ಕನಗೌಡರ ಸೆಳೆಯಲು ಪೈಪೋಟಿ

ಹುಬ್ಬಳ್ಳಿ : ಇನ್ನೂ ಚುನಾವಣೆ ಫಲಿತಾಂಶ ಬಂದಿಲ್ಲ. ಆಗಲೇ, ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಅವರನ್ನು ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸೆಳೆಯಲು ಯತ್ನಿಸುತ್ತಿವೆ.

ಮಾಜಿ ಮುಖ್ಯಮಂತ್ರಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ ಶೆಟ್ಟರ್ ಅವರ ಆಪ್ತ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಂಬಂಧಿಯೂ ಆಗಿರುವ ಎಸ್.ಐ. ಚಿಕ್ಕನಗೌಡರ ಮಾಜಿ ಶಾಸಕರೂ ಹೌದು.

ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ನಿರೀಕ್ಷೆಯಂತೆ ಪೈಪೋಟೆ ನೀಡಲಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ, ಬಿಜೆಪಿ ಅಭ್ಯರ್ಥಿ ಎಂ.ಆರ್. ಪಾಟೀಲ ಹಾಗೂ ಪಕ್ಷೇತರ ಅಭ್ಯರ್ಥಿ ಎಸ್.ಐ. ಚಿಕ್ಕನಗೌಡರ ಮಧ್ಯೆ ನೇರ ಪೈಪೋಟೆ ನಡೆದಿತ್ತು. ಚುನಾವಣೆ ಫಲಿತಾಂಶಕ್ಕೆ ಇನ್ನೂ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಈ ಮಧ್ಯೆ ಕಳೆದ ಗುರುವಾರ ರಾತ್ರಿಯಿಂದಲೇ ಮೂರೂ ಪಕ್ಷಗಳ ಮುಖಂಡರು ಎಸ್.ಐ. ಚಿಕ್ಕನಗೌಡರ ಅವರೊಂದಿಗೆ ಮೊಬೈಲ್ ಪೋನ್ ಮೂಲಕ ಮಾತನಾಡಿದ್ದಾರೆ.

ಈ ಕುರಿತು ಸ್ವತಃ ಚಿಕ್ಕನಗೌಡರ ಅವರೇ ‘ವಿಜಯವಾಣಿ’ಗೆ ಮಾಹಿತಿ ನೀಡಿದ್ದು, ಮೂರು ಪಕ್ಷಗಳ ಮುಖಂಡರಿಂದ 15-20 ಮೊಬೈಲ್ ಕರೆಗಳು ಬಂದಿವೆ. ಇದುವರೆಗೆ ಯಾವುದೇ ನಿರ್ಧಾರ ಮಾಡಿಲ್ಲ. ಫಲಿತಾಂಶ ಪ್ರಕಟಗೊಂಡ ನಂತರ ಆಪ್ತರೊಂದಿಗೆ ರ್ಚಚಿಸಿ, ಸೂಕ್ತ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಬಹುಮತ ಸಾಬೀತಿಗೆ ಸ್ವಲ್ಪ ಸೀಟುಗಳು ಕಡಿಮೆ ಬೀಳಬಹುದೆಂದು ಬಹುತೇಕ ಸಮೀಕ್ಷೆಗಳ ಲೆಕ್ಕಾಚಾರ. ಹೀಗಾಗಿ, ರಾಜ್ಯಾದ್ಯಂತ ಗೆಲ್ಲಬಹುದಾದ ಪಕ್ಷೇತರ ಅಭ್ಯರ್ಥಿಗಳೊಂದಿಗೆ ಎರಡೂ ಪಕ್ಷಗಳ ಮುಖಂಡರು ಮಾತುಕತೆ ನಡೆಸಿದ್ದಾರೆ. ಅತಂತ್ರ ಪರಿಸ್ಥಿತಿ ನಿರ್ವಣಗೊಂಡರೆ ಜೆಡಿಎಸ್ ನಿರ್ಣಾಯಕ ಪಾತ್ರ ವಹಿಸುವುದು ಖಚಿತ. ಹೀಗಾಗಿ, ಆ ಪಕ್ಷವೂ ತನ್ನ ಅಭ್ಯರ್ಥಿಗಳ ಜತೆಗೆ ಮತ್ತಷ್ಟು ಪಕ್ಷೇತರ ಅಭ್ಯರ್ಥಿಗಳನ್ನು ಸೆಳೆಯುವ ತಂತ್ರಕ್ಕೆ ಕೈ ಹಾಕಿದೆ.

Latest Posts

ಲೈಫ್‌ಸ್ಟೈಲ್