ಚಿಕ್ಕತಿರುಪತಿಯಲ್ಲಿ ಕೊನೇ ಶ್ರಾವಣ ಶನಿವಾರ ಸಂಭ್ರಮ

ಲಕ್ಕೂರು: ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಕೊನೇ ಶ್ರಾವಣ ಶನಿವಾರದ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.

ಮಾಲೂರು, ಬೆಂಗಳೂರು, ಅನೇಕಲ್, ಹೊಸೂರು, ವಿವಿಧೆಡೆಯಿಂದ ಭಕ್ತರು ಪಾದ ಯಾತ್ರೆ ಮೂಲಕ ದೇವರ ದರ್ಶನಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು.

ಶಾಸಕ ಕೆ.ವೈ.ನಂಜೇಗೌಡ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ ಕುಟುಂಬ ಸಮೇತರಾಗಿ ಬಂದು ದೇವರ ದರ್ಶನ ಪಡೆದರು.

ಮಾಲೂರಿನ ಡಿ.ಟಿ.ಪುಟ್ಟಪ್ಪರ ಮಗ ಸುಬ್ರಮಣಿ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಿದ್ದರು. ಬೆಂಗಳೂರಿನ ಬಾಬುರೆಡ್ಡಿ ಕುಟುಂಬದಿಂದ 50 ಸಾವಿರ ಲಾಡು ಹಂಚಿಕೆ ಮಾಡಲಾಯಿತು.

ಮಾಲೂರು ವೃತ್ತ ನಿರೀಕ್ಷಕ ಬಿ.ಎಸ್.ಸತೀಶ್, ಉಪ ನೀರಿಕ್ಷಕರಾದ ಎಂ.ಎನ್.ಮುರುಳಿ, ವಸಂತ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.