ಚಿಂಚೋಳಿ: ತಾಲೂಕಿನ ರಂಗ ಕಲಾವಿದ, ನಾಟಕಕಾರ ಚಂದ್ರಶೇಖರ ಲಕ್ಕಶೆಟ್ಟಿ ಅವರನ್ನು ರಂಗ ಸುವರ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ರಂಗಮಿತ್ರ ನಾಟ್ಯ ಸಂಘದ ಜಿಲ್ಲಾಧ್ಯಕ್ಷ ಶಾಮರಾವ ಕೊರವಿ ತಿಳಿಸಿದರು.
ಕಲಬುರಗಿಯ ಡಾ.ಎಸ್.ಎಂ.ಪAಡಿತ ರಂಗಮAದಿರದಲ್ಲಿ ನ.18, 19 ರಂದು ನಡೆಯಲಿರುವ ನಾಟಕೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುರಸ್ಕಾರವೂ 5 ಗ್ರಾಂ ಚಿನ್ನ ಹಾಗೂ ಪ್ರಶಸ್ತಿ ಪತ್ರ ಹೊಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಪ್ರಮುಖರಾದ ರಾಜೇಂದ್ರರೆಡ್ಡಿ ಶೇರಿಕಾರ, ಲಕ್ಷö್ಮಣ ಅವಂಟಿ, ರವಿ ಪಾಟೀಲ್, ಶಂಕರಜೀ ಹೂವಿನಹಿಪ್ಪರಗಿ, ಶಿವಕುಮಾರ ಹೀರೆಮಠ, ಗೋಪಾಲ ಬಾಜೇಪಲ್ಲಿ, ಪ್ರಶಾಂತ ಕಟ್ಟಿ, ಶ್ರೀಧರ ವಗ್ಗಿ ಇತರರಿದ್ದರು.