ಚಾಮರಾಜನಗರದಿಂದ ಶ್ರೀನಿವಾಸ ಪ್ರಸಾದ್ ಕಣಕ್ಕೆ

ಮೈಸೂರು: ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್ ಚಾಮರಾಜನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಲು ಕೊನೆಗೂ ಒಪ್ಪಿಗೆ ಸೂಚಿಸಿದ್ದಾರೆನ್ನಲಾಗಿದೆ. ಪ್ರಸಾದ್ ಹೆಸರನ್ನು ಶನಿವಾರ ಅಥವಾ ಭಾನುವಾರ ಯಡಿಯೂರಪ್ಪ ಘೊಷಿಸುವ ಸಾಧ್ಯತೆಗಳಿವೆ. ಮೈಸೂರಿನ ಪ್ರಸಾದ್ ನಿವಾಸಕ್ಕೆ ಗುರುವಾರ ಆಗಮಿಸಿದ್ದ 100ಕ್ಕೂ ಹೆಚ್ಚು ಬೆಂಬಲಿಗರು, ‘ಧ್ರುವನಾರಾಯಣ ಬೆಳೆಸಿದ್ದೇ ನೀವು, ಅವರನ್ನು ಮಣಿಸಲು ನಿಮ್ಮಿಂದ ಮಾತ್ರ ಸಾಧ್ಯ. ಸುಲಭವಾಗಿ ಗೆಲ್ಲುವ ಅವಕಾಶ ಕೈ ಚೆಲ್ಲಬೇಡಿ’ ಎಂದು ಮನವಿ ಮಾಡಿದರು. ಕಾರ್ಯಕರ್ತರು ಮನೆ ಬಾಗಿಲಿಗೆ ಬಂದು ಅಭ್ಯರ್ಥಿಯಾಗುವಂತೆ ಕೇಳುತ್ತಿದ್ದಾರೆ. ಬಿಎಸ್​ವೈ ಜತೆ ರ್ಚಚಿಸಿ ಮುಂದಿನ ತೀರ್ಮಾನ ಪ್ರಕಟಿಸುತ್ತೇನೆ ಎಂದು ಪ್ರಸಾದ್ ಹೇಳಿದ್ದಾರೆ. ನಂಜನಗೂಡು ಉಪಚುನಾವಣೆ ಸೋಲಿನ ನಂತರ ಚುನಾವಣಾ ರಾಜಕೀಯಕ್ಕೆ ಪ್ರಸಾದ್​ನಿವೃತ್ತಿ ಘೊಷಿಸಿದ್ದರು.