Friday, 16th November 2018  

Vijayavani

Breaking News

ಚಾಲಕನ ನಿರ್ಲಕ್ಷ್ಯಕ್ಕೆ ಬಾಲಕಿ ಬಲಿ

Friday, 13.07.2018, 3:00 AM       No Comments

ಶಿರಾ : ನಗರದ ಖಾಸಗಿ ಶಾಲಾ ಆವರಣದಲ್ಲಿ ಬುಧವಾರ ಮಧ್ಯಾಹ್ನ ಶಾಲಾ ವಾಹನ ಚಾಲಕನ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ.

ನಗರದ ಕದಂಬ ಶಾಲೆಯಲ್ಲಿ ಎಲ್​ಕೆಜಿ ಓದುತ್ತಿದ್ದ ಜಾಹ್ನವಿ (4) ಮೃತೆ. ಎಂದಿನಂತೆ ಶಾಲೆ ಮುಗಿಸಿ ಮನೆಗೆ ಹೊರಡುವ ಉತ್ಸಾಹದಲ್ಲಿದ್ದ ಮಗು ವಾಹನ ಹತ್ತುತ್ತಿದ್ದ ವೇಳೆ ಚಾಲನ ವಾಹನ ಚಲಾಯಿಸಿದ್ದಾನೆ. ಈ ವೇಳೆ ಕೆಳಗೆ ಬಿದ್ದು ತೀವ್ರ ಪೆಟ್ಟಾಗಿದೆ. ಗಾಯಗೊಂಡಿದ್ದ ಮಗುವಿಗೆ ಶಿರಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದೆ.

ಜಾಹ್ನವಿ ತಂದೆ ಭಕ್ತಕುಮಾರ್ ಶಿರಾ ನಗರಠಾಣೆ ಪೇದೆ. ಕ್ಷೇತ್ರ ಶಿಕ್ಷಣಾಧಿಕಾರಿ ವಿಜಯಕುಮಾರ್ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಘಟನೆಗೆ ಕಾರಣ ಮತ್ತು ಭದ್ರತಾ ಲೋಪ ಕುರಿತಂತೆ ಶಾಲಾ ಆಡಳಿತ ಮಂಡಳಿಗೆ ಬಿಇಒ ನೋಟಿಸ್ ನೀಡಿದ್ದಾರೆ. ನಗರಠಾಣೆಯಲ್ಲಿ ದೂರು ದಾಖಲಾಗಿದೆ.

ಶಾಲೆ ಮುಖ್ಯಸ್ಥರೊಂದಿಗೆ ಬಿಇಒ ಸಭೆ : ಗುರುವಾರ ಮಧ್ಯಾಹ್ನ ಕಚೇರಿ ಸಭಾಂಗಣದಲ್ಲಿ ಖಾಸಗಿ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರ ಸಭೆ ನಡೆಸಿದ ಬಿಇಒ ವಿಜಯಕುಮಾರ್, ಬುಧವಾರದ ಘಟನೆ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುವಂತೆ ತಾಕೀತು ಮಾಡಿದರು. ಪ್ರತಿ ಶಾಲೆಯಲ್ಲೂ ಸಿಸಿಟಿವಿ, ಅಗ್ನಿ ನಂದಕ, ಆಟದ ಮೈದಾನಕ್ಕೆ ಕಾಂಪೌಂಡ್, ಮಹಡಿಗಳಿದ್ದಲ್ಲಿ ಭದ್ರವಾದ ಗ್ರಿಲ್ ಅಳವಡಿಸುವುದು, ವಾಹನ ಚಾಲಕರ ಬಗ್ಗೆ ನಿಖರ ಮಾಹಿತಿ, ವಾಹನಗಳ ವಿಮೆ, ಶಾಲಾ ವಾಹನಗಳಲ್ಲಿ ಸಹಾಯಕರ ನೇಮಕ, ಪ್ರಥಮ ಚಿಕಿತ್ಸೆ ಪೆಟ್ಟಿಗೆ ಅಳವಡಿಸುವಂತೆ ಸೂಚನೆ ನೀಡಿದ ಅವರು, ಮಕ್ಕಳು ಮರಳಿ ಮನೆ ತಲುಪುವವರೆಗೆ ಆಯಾ ಶಾಲೆಯವರೇ ಹೊಣೆಗಾರರಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಶುಕ್ರವಾರದಿಂದಲೇ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿ, ಅವಘಡಗಳಿಗೆ ಅವಕಾಶ ನೀಡದಂತೆ ಮುಂಜಾಗ್ರತೆ ವಹಿಸುವುದು ಹಾಗೂ ನಿರ್ಲಕ್ಷ್ಯ ಕಂಡುಬಂದರೆ ಶಾಲೆ ಮಾನ್ಯತೆ ರದ್ದುಪಡಿಸಲು ಉನ್ನತಾಧಿಕಾರಿಗಳಿಗೆ ಶಿಫಾರಸು ಮಾಡಲಾಗುವುದು.

| ವಿಜಯಕುಮಾರ್, ಬಿಇಒ

Leave a Reply

Your email address will not be published. Required fields are marked *

Back To Top