ಚಾರ್ಲಿಗೆ ಸಿಕ್ಕ ಹೊಸ ಜೋಡಿ

ಬೆಂಗಳೂರು: ನಾಯಿ ಮತ್ತು ಮಾನವನ ನಡುವಿನ ಭಾವನಾತ್ಮಕ ಕಥಾಹಂದರವುಳ್ಳ ‘777 ಚಾರ್ಲಿ’ ಚಿತ್ರವನ್ನು ಹೊಸ ನಿರ್ದೇಶಕ ಕಿರಣ್ ರಾಜ್ ಕೈಗೆತ್ತಿಕೊಂಡಿದ್ದರು. ಅದರಲ್ಲಿ ‘ಕಿರಿಕ್ ಪಾರ್ಟಿ’ ಖ್ಯಾತಿಯ ಅರವಿಂದ್ ಅಯ್ಯರ್ ಮುಖ್ಯಭೂಮಿಕೆ ನಿಭಾಯಿಸುವುದು ಮತ್ತು ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡುವುದು ಎಂದು ತೀರ್ವನಿಸಲಾಗಿತ್ತು. ಚಿತ್ರಕ್ಕೆ ತಕ್ಕ ತಯಾರಿಯನ್ನೂ ಅರವಿಂದ್ ಶುರುಮಾಡಿದ್ದರು. ಆದರೆ ಕಾರಣಾಂತರಗಳಿಂದ ಅವರು ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ನಂತರ ನಾಯಕ ಸ್ಥಾನಕ್ಕೆ ಯಾರು ಆಯ್ಕೆ ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿತ್ತು. ಸದ್ಯ ಚಿತ್ರತಂಡದಿಂದ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಕಥೆ ಕೇಳಿ ಇಷ್ಟಪಟ್ಟು, ನಿರ್ವಣದ ಜವಾಬ್ದಾರಿ ಹೊತ್ತುಕೊಂಡಿದ್ದ ರಕ್ಷಿತ್ ಅವರೇ ಈಗ ‘..ಚಾರ್ಲಿ’ಯ ಹೀರೋ ಆಗುತ್ತಿದ್ದಾರೆ. ‘ಈ ಕಥೆ ರಕ್ಷಿತ್​ಗೆ ತುಂಬ ಇಷ್ಟವಾಗಿತ್ತು. ಅವರೇ ನಟಿಸಬೇಕು ಎಂದುಕೊಂಡರೂ ಬೇರೆ ಕಮಿಟ್​ವೆುಂಟ್​ಗಳಿದ್ದ ಕಾರಣ ಆಗ ಸಾಧ್ಯವಾಗಿರಲಿಲ್ಲ. ಆದರೆ ಈಗ ಕಾಲ ಕೂಡಿಬಂದಿದೆ’ ಎಂದು ಮಾಹಿತಿ ನೀಡುತ್ತಾರೆ ನಿರ್ದೇಶಕರು. ಹಾಗಂತ ಈ ಸಿನಿಮಾ ತಕ್ಷಣವೇ ಶುರುವಾಗುವುದಿಲ್ಲ. ಪ್ರಸ್ತುತ ‘ಅವನೇ ಶ್ರೀಮನ್ನಾರಾಯಣ’ ಚಿತ್ರದ ತಯಾರಿಯಲ್ಲಿ ರಕ್ಷಿತ್ ಬಿಜಿಯಾಗಿದ್ದಾರೆ. ಮಾರ್ಚ್ ಎರಡನೇ ವಾರದಲ್ಲಿ ಆ ಚಿತ್ರದ ಶೂಟಿಂಗ್ ಶುರುವಾಗಲಿದೆ. ಅದರ ಒಂದು ಹಂತದ ಚಿತ್ರೀಕರಣ ಮುಗಿಯುತ್ತಿದ್ದಂತೆಯೇ ‘..ಚಾರ್ಲಿ’ಗಾಗಿ ರಕ್ಷಿತ್ ಕ್ಯಾಮರಾ ಎದುರಿಸಲಿದ್ದಾರೆ. ಅಂದಹಾಗೆ, ಚಿತ್ರದಲ್ಲಿ ಹೀರೋ ಜತೆ ಒಂದು ನಾಯಿಯೂ ಮುಖ್ಯ ಪಾತ್ರವಹಿಸುತ್ತದೆ. ಅದಕ್ಕಾಗಿ ಶೂಟಿಂಗ್​ಗೂ ಮೊದಲೇ ಇಬ್ಬರ ನಡುವೆ ಒಂದು ಸಾಮರಸ್ಯ ಏರ್ಪಡುವುದು ಅಗತ್ಯ. ಸಿನಿಮಾದಲ್ಲಿ ನಟಿಸುವ ನಾಯಿಯ ಜತೆ ರಕ್ಷಿತ್ ಈಗಿನಿಂದಲೇ ಒಂದಷ್ಟು ಸಮಯ ಕಳೆಯುತ್ತಿದ್ದಾರಂತೆ. ಮೊದಲು ರಕ್ಷಿತ್ ಅವರ ‘ಪರಮ್ಾ ಸ್ಟುಡಿಯೋಸ್’ ಬ್ಯಾನರ್​ನಡಿ ‘..ಚಾರ್ಲಿ’ ನಿರ್ವಿುಸುವ ಪ್ಲಾ್ಯನ್ ಮಾಡಲಾಗಿತ್ತು. ಈಗ ಅದರ ಜತೆ ನಿರ್ವಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಸಾಥ್ ನೀಡಿದ್ದಾರೆ.

ನಾಯಕನ ನಟನೆಗೆ ಹೆಚ್ಚು ಸ್ಕೋಪ್ ಇರುವ ಕಥೆ ಇದು. ರಕ್ಷಿತ್ ಗೆಟಪ್ ಕೂಡ ಭಿನ್ನವಾಗಿರಲಿದೆ. ಮೇ ಮೊದಲ ವಾರದಲ್ಲಿ ಚಿತ್ರೀಕರಣ ಶುರುಮಾಡುತ್ತೇವೆ. ಚಿತ್ರದಲ್ಲಿ ನಾಯಿಯೇ ಪ್ರಮುಖ ಆಕರ್ಷಣೆ.

| ಕಿರಣ್ ರಾಜ್ ನಿರ್ದೇಶಕ

 

Leave a Reply

Your email address will not be published. Required fields are marked *